ಕ್ರಿಕೆಟ್ ನಿವೃತ್ತಿಯ ಬಳಿಕ ಸೇನೆ ಸೇರಲಿದ್ದಾರೆ ಎಂ .ಎಸ್. ಧೋನಿ

ಸೆಲೆಬ್ರಿಟಿಗಳು ತಮ್ಮ ಕ್ಷೇತ್ರದಲ್ಲಿ ನಿವೃತ್ತಿಯ ಬಳಿಕ ಸಾಮಾನ್ಯವಾಗಿ ವ್ಯಾಪಾರದಲ್ಲೋ ರಾಜಕೀಯದಲ್ಲೋ ಅಥವಾ ನೆಮ್ಮದಿಯ ವಿಶ್ರಾಂತ ಜೀವನವನ್ನೋ ನಡೆಸಲು ಬಯಸುತ್ತಾರೆ. ಆದರೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ದೇಶಕ್ಕಾಗಿ ಇನ್ನು ಏನಾದರೂ ಕೊಡಬೇಕು ಎಂಬ ಹಂಬಲದಿಂದ ಕಾಯುತ್ತಿರುತ್ತಾರೆ. ಇಂಥವರ ಸಾಲಿನಲ್ಲಿ ಈಗ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಎಂದೇ ಖ್ಯಾತರಾಗಿದ್ದ ಮಹೇಂದ್ರ ಸಿಂಗ್ ಧೋನಿ ಸೇರಿದ್ದಾರೆ. ಭಾರತೀಯ ಸೇನೆಯ ಕುರಿತು ಅಪಾರ ಗೌರವ ಹಾಗೂ ಹೆಮ್ಮೆ ಹೊಂದಿರುವ ಅವರು ನಿವೃತ್ತಿ ಘೋಷಿಸಿದ ಬಳಿಕ ಭಾರತೀಯ ಸೇನೆ ಸೇರಲು ಇಚ್ಚಿಸಿದ್ದಾರೆ. ಹೌದು, ಈ ವರದಿಯನ್ನು ನೋಡಿ ವಿಶ್ವಕಪ್ ಸೆಮಿಫೈನಲ್ ಸೋಲಿನ ಬೆನ್ನಲ್ಲೇ ಟೀ ಇಂಡಿಯಾ ಕ್ರಿಕೆಟಿಗ ಎಂ.ಎಸ್. ಧೋನಿ ನಿವೃತ್ತಿ ಮಾತುಗಳು ಕೇಳಿ ಬರುತ್ತಿದೆ. ಧೋನಿ ವಿದಾಯದ ಕುರಿತು ಊಹಾಪೋಹ ಹೆಚ್ಚಾಗುತ್ತಿದೆ. ಧೋನಿ ವಿದಾಯದ ಬಳಿಕ ಬಿಜೆಪಿ ಸೇರಿಕೊಳ್ಳುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಧೋನಿ ವಿದಾಯದ ಬಳಿಕ ಏನು ಮಾಡಲಿದ್ದಾರೆ ಅನ್ನೋದನ್ನು ಧೋನಿ ಮ್ಯಾನೇಜರ್ ಅರುಣ್ ಪಾಂಡೆ ಬಿಚ್ಚಿಟ್ಟಿದ್ದಾರೆ.

ಎಂ.ಎಸ್. ಧೋನಿ ವಿದಾಯದ ಕುರಿತು ಈಗಲೇ ಸ್ಪಷ್ಟಪಡಿಸಲು ಸಾಧ್ಯವಿಲ್ಲ. ಆದರೆ ವಿದಾಯದ ಬಳಿಕ ಏನು ಮಾಡಲಿದ್ದಾರೆ ಅನ್ನೋದನ್ನು ಬಹಿರಂಗ ಪಡಿಸುತ್ತೇನೆ. ಧೋನಿ ವಿದಾಯದ ಬಳಿಕ ಭಾರತೀಯ ಸೇನೆಗೆ ಸೇರಲಿದ್ದಾರೆ . ಈ ಮೂಲಕ ದೇಶಸೇವೆ ಮಾಡಲು ಧೋನಿ ಸಜ್ಜಾಗಿದ್ದಾರೆ. ಎಂದು ಅರುಣ್ ಪಾಂಡೆ ಹೇಳಿದ್ದಾರೆ. ಧೋನಿಗೆ ಸೈನಿಕ ನಾಗಬೇಕು ಅನ್ನೋ ಹಂಬಲವನ್ನು ಸಾಕಾರಗೊಳಿಸಲಿ ದ್ದಾರೆ. ಎಂದು ಪಾಂಡೆ ಹೇಳಿದ್ದಾರೆ.

ಸೇನೆಯಲ್ಲಿ ಲೆಫ್ಟಿನೆಂಟ್ ಕೋಲೋನೆಲ್ ಗೌರವ ಸ್ಥಾನ ಹೊಂದಿರುವ ಧೋನಿ, ಪ್ಯಾರ ರೆಜೆಮೆಂಟ್ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಪ್ಯಾರಾ ರೆಜೆಮೆಂಟ್ ಟ್ರೈನಿಂಗ್ ಕೂಡ ಪೂರ್ಣಗೊಳಿಸಿದ್ದಾರೆ. ಇಷ್ಟೇ ಅಲ್ಲ 5 ಬಾರಿ ಪ್ಯಾರಚೂಟ್ ಮೂಲಕ ಹಾರಿ ಸಾಹಸ ಪ್ರದರ್ಶಿಸಿದ್ದಾರೆ. ಭಾರತೀಯ ಸೇನೆ ಕುರಿತು ಅಪಾರ ಗೌರವ ಹೊಂದಿರುವ ಧೋನಿ ಐಸಿಸಿ ಕ್ರಿಕೆಟ್ ಟೂರ್ನಿ ಯಲ್ಲಿ ತಮ್ಮ ಕೀಪಿಂಗ್ ಗ್ಲೌಸ್ ಮೇಲೆ ಬಲಿದಾನ್ ಬ್ಯಾಡ್ಜ್ ಬಳಸಿದ್ದರು. ಇದಕ್ಕೆ ಐಸಿಸಿ ವಿರೋಧ ವ್ಯಕ್ತಪಡಿಸಿತ್ತು.

Leave a Reply

Your email address will not be published. Required fields are marked *