ಕಿರಿಯ ವೈದ್ಯರಿಂದ ಕ್ಯಾಂಡಲ್ ಲೈಟ್ ಪ್ರತಿಭಟನೆ

ಕಳೆದ 8 ತಿಂಗಳಿನಿಂದ ಶಿಷ್ಯ ವೇತನ ಇಲ್ಲದೆ ತೀವ್ರ ಆರ್ಥಿಕ ತೊಂದರೆ ಅನುಭವಿಸುತ್ತಿರುವ ದಾವಣಗೆರೆ ಜೆ ಜೆ ಎಂ ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯರು ನಿನ್ನೆ ಇಂದ ಪ್ರತಿಭಟನೆ ತೀವ್ರಗೊಳಿಸಿದ್ದು ಇಂದು ನಗರದ ಜಯದೇವ ವೃತ್ತದಲ್ಲಿ ಕ್ಯಾಂಡಲ್ ಲೈಟ್ ಮೆರವಣಿಗೆ ಹಾಗೂ ಪ್ರತಿಭಟನೆ ನೆಡೆಸಿದರು.

ಸರ್ಕಾರ ಯಾವುದೇ ಸಕಾರಣ ನೀಡದೆ ಕಳೆದ 8 ತಿಂಗಳಿಂದ ಶಿಷ್ಯವೇತನ ನೀಡದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೆ ನಮ್ಮ ಪಾಲಕರು ಕಷ್ಟ ಪಟ್ಟು ನಮ್ಮನ್ನು ಓದಿಸಿಕೊಂಡು ಬಂದಿದ್ದಾರೆ. ಮತ್ತೂ ಅವರನ್ನು ಅವಲಂಬಿಸಿ ಜೀವಿಸಬೇಕಾದ ಅನಿವಾರ್ಯತೆ ತಂದಿಟ್ಟಿರುವ ಸರ್ಕಾರದ ಕ್ರಮವನ್ನು ಅವರು ಖಂಡಿಸಿದ್ದಾರೆ.

ಸ್ಥಳೀಯ ಮಾಧ್ಯಮದವರು ನಮ್ಮಕುರಿತು ವರದಿ ಪ್ರಕಟಿಸುವ ಮೂಲಕ ಸ್ಪಂದಿಸುತಿದ್ದಾರೆ, ಆದರೆ ಟಿವಿ ಮಾಧ್ಯಮಗಳು ರಾಜ್ಯಮಟ್ಟದಲ್ಲಿ ಪ್ರಸಾರ ಮಾಡಲು ಹಿಂದೇಟುಹಾಕುತ್ತಿವೆ ಎಂಬ ಕುರಿತು ಕೆಲ ಪ್ರತಿಭಟನಾ ವೈದ್ಯರು ಹೇಳಿದ್ದಾರೆ.
ತಕ್ಷಣವೇ ಸರ್ಕಾರ ಇತ್ತ ಗಮನಹರಿಸಬೇಕಿದೆ.

Leave a Reply

Your email address will not be published. Required fields are marked *