ಕಾವ್ಯಮಿಡಿತ: ವಾರದ ಕವಿತೆ | ಸೂಲಗಿತ್ತಿ ನರಸಮ್ಮ| ಶಿವಮೂರ್ತಿ.ಹೆಚ್

ಈಗಿನ ಕಾಲದಲ್ಲಿ ಹಣ ಮಾಡುವ ಉದ್ದೇಶದಿಂದ ಎಷ್ಟೋ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆಯ ಮಾಡಿಸಿ ರೋಗಿಗಳಿಂದ ಹಣ ಪಡೆಯುವ ಕಲಿಯುಗದಲ್ಲಿ , ಅನಕ್ಷರತೆ ಆದರೂ ಸಹ ಪರಿಣಿತ ವೈದ್ಯಳಂತೆ ಹದಿನೈದು ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಸಹಜ ಹೆರಿಗೆಗಳನ್ನು ಮಾಡಿ, ಆರೈಕೆ ಮಾಡಿ, ಬಡವರ ಪಾಲಿನ ಧನ್ವಂತರಿಯಂತೆ ಕಾಯಕ ಮಾಡಿ, ನಮ್ಮಿಂದ ಮರೆಯಾದ ಸೂಲಗಿತ್ತಿ ನರಸಮ್ಮ ಅವರಿಗೆ ನುಡಿ ನಮನ…

ಈ ವಾರದ ವಿಜೇತ ಕವಿತೆ – ಸೂಲಗಿತ್ತಿ ನರಸಮ್ಮ

ಸೂಲಗಿತ್ತಿ ನರಸಮ್ಮ

ನಾರಿಯರ ಬಾಳನುದ್ಧರಿಸಲು
ಅವತರಿಸಿ ಬಂದ ಅಮ್ಮ
ನಾಡಿನ ಮೂಲೆ ಮೂಲೆಗಳಲ್ಲಿ
ಹೆಸರುವಾಸಿ ನರಸಮ್ಮ.

ತುಮಕೂರಿನ ಪಾವಗಡದ
ಕೃಷ್ಣಾಪುರದಿ ಹುಟ್ಟಿದೆ
ಅಲೆಮಾರಿ ಅಂಜಿನಪ್ಪನ
ಮನೆಯ ಮೆಟ್ಟಿದೆ.

ಜೀವಭಾಷೆ ತೆಲುಗು
ಮನೆಯಲ್ಲಿ ಆಡಿ ಬೆಳೆದೆ
ಜೀವನದ ಭಾಷೆ ಕನ್ನಡವ
ಜಗದಲ್ಲಿ ಕೊಂಡಾಡಿದೆ.

ಹನ್ನೆರಡು ಮಕ್ಕಳನ್ನು
ಹೆತ್ತು ಹೊತ್ತು ಸಾಕಿದೆ
ಇಪ್ಪತ್ತೆರಡು ಮೊಮ್ಮಕ್ಕಳನ್ನು
ಅಕ್ಕರೆಯಲ್ಲಿ ಪೊರೆದೆ.

ಮರಿಗೆಮ್ಮಜ್ಜಿಯಿಂದ ಹೆರಿಗೆ
ಮಾಡಿಸುವ ವಿದ್ಯೆ ತಿಳಿದೆ
ಗಿಡಮೂಲಿಕೆಗಳ ಸತ್ವವ
ಬುಡಬುಡಿಕೆಯರಿಂದ ಕೇಳಿದೆ.

ಹನುಮಕ್ಕಳ ಹೆರಿಗೆ ಮಾಡಿಸಿ
ಜನರನು ಚಕಿತಗೊಳಿಸಿದೆ
ಹದಿನೈದು ಸಾವಿರಕ್ಕೂ ಹೆಚ್ಚು
ಸಹಜ ಹೆರಿಗೆಯ ಮಾಡಿಸಿದೆ.

ಅನಕ್ಷರಸ್ಥಳಾದರು ಗೌರವ
ಡಾಕ್ಟರೇಟ್ ಪದವಿ ಪಡೆದೆ
ಅಕ್ಷರಸ್ಥರು ಹೆಮ್ಮೆ ಪಡುವಂತೆ
ಪದ್ಮಶ್ರೀ ಪುರಸ್ಕೃತಳಾದೆ.

ನೂರಾರು ಪುರಸ್ಕಾರಗಳಿಗೆ
ಭಾಜನಳಾದೆ ನರಸಮ್ಮ
ನೂರರ ಗಡಿ ದಾಟುವ
ಮುನ್ನವೆ ಮರೆಯಾದೆಯಮ್ಮ.

-ಶಿವಮೂರ್ತಿ.ಹೆಚ್

ಕವನ ಮತ್ತು ಲೇಖನಗಳಿಗೆ ಆಹ್ವಾನ

ಪ್ರತಿ ಮಂಗಳವಾರ ಜನಮಿಡಿತ ದಿನಪತ್ರಿಕೆ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷ ಪುಟ ಕಾವ್ಯಮಿಡಿತ ಪ್ರಕತಿಸುತಲಿದ್ದು, ಆಸಕ್ತರು ತಮ್ಮ ಕವನಗಳನ್ನು ಹಾಗೂ ಲೇಖನಗಳನ್ನು ನಮ್ಮ Facebook page Janamiditha ಕ್ಕೆ ಅಥವಾ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಬಹುದು.
Mail: janamiditha@gmail.com

Leave a Reply

Your email address will not be published. Required fields are marked *