ಕಾವ್ಯಮಿಡಿತ: ವಾರದ ಕವಿತೆ | ಬರಹ | ಯೋಗೇಂದ್ರ ನಾಯ್ಕ ಜಿ.

ಜನಮಿಡಿತ ಪತ್ರಿಕೆಯು ಹೊಸದಾದ ಅಂಕಣವೊಂದನ್ನು ಆರಂಭಿಸಿದ್ದು ಸ್ಪರ್ಧೆಯಲ್ಲಿ ವಿಜೇತ ಕವಿತೆಗಳಲ್ಲಿ ಒಂದು ಕವಿತೆಯನ್ನ ವಾರದ ಕವಿತೆಯಾಗಿ ಆಯ್ಕೆ ಮಾಡಿ ಈ ಅಂಕಣದಲ್ಲಿ ಪ್ರಕಟಿಸಲು ನಿರ್ಧರಿಸಿದೆ.

ಈ ವಾರದ ವಿಜೇತ ಕವಿತೆ – ಬರಹ

ಬರಹ

ಶುದ್ದ ಸದೃಶ್ಯದ ಜಲದ ಪಾವಿತ್ರ್ಯದ
ಸ್ಪಷ್ಟ ಸೌಂದರ್ಯದ ಲಿಪಿಯ ಲಾಲಿತ್ಯದಲಿ
ಸುಮಗಳ ಲಾವಣ್ಯದ ಅಕ್ಷರದ ಗುಣದ ಗಣದ
ಪದಪುಂಜಗಳ ಅರ್ಥ ಸಹಿತ ದೃಶ್ಯಲೀಲೆಯೇ ಬರಹ.

ಸತ್ಯ ಸುಂದರ ಕರಣದ ಕಂಗಳ
ನವರಸಭರಿತ ಭಾವದ ಅಲಂಕಾರದ
ಸೃಜನಶೀಲ ಅಭಿವ್ಯಕ್ತಿಯ
ಬುದ್ಧಿಯ ಸಾರದ ಜ್ಞಾನದ ಹರಣವೇ ಬರಹ.

ಜೀವನ ಕಲೆಯ ಸಕಲ ಚಿತಗಳ
ಲಿಖಿತ ರೂಪದ ಅಖಿಲ ಶೋಭೆಯಲಿ
ಸಲಿಲದ ಹರಿವಿನ ಸ್ಪುಟವಾದ ನಿಲುವಿನಲಿ
ಚಿಂತನೆಯ ಚೈತನ್ಯದ ಫಲಶೃತಿಯ
ಕೈಗನ್ನಡಿಯೇ ಬರಹ.

ಲೋಕ ನಿಯಮದ ತತ್ವದ ಸತ್ವವನ್ನು
ಇಹಲೋಕದ ಪರಿಧಿಯಲಿ
ನೀಟ ದಿಟ ನಿಜ ನಿತ್ಯವಾದ ಸರಣಿಯಲಿ
ವ್ಯಾಕರಣದ ಮಿತಿಯಲ್ಲಿ ಬಿಂಬಿಸಿ ಪ್ರತಿಬಿಂಬಿಸಿ
ಆದಿ ವೃದ್ಧಿ ಅಂತ್ಯ ತೋರೋ ಮೂರ್ತ
ಸ್ವರೂಪವೇ ಬರಹ

-ಯೋಗೇಂದ್ರ ನಾಯ್ಕ ಜಿ.,
ಶಿಕ್ಷಕರು, ದಾವಣಗೆರೆ,

ಕವನ ಮತ್ತು ಲೇಖನಗಳಿಗೆ ಆಹ್ವಾನ

ಪ್ರತಿ ಮಂಗಳವಾರ ಜನಮಿಡಿತ ದಿನಪತ್ರಿಕೆ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷ ಪುಟ ಕಾವ್ಯಮಿಡಿತ ಪ್ರಕತಿಸುತಲಿದ್ದು, ಆಸಕ್ತರು ತಮ್ಮ ಕವನಗಳನ್ನು ಹಾಗೂ ಲೇಖನಗಳನ್ನು ನಮ್ಮ Facebook page Janamiditha ಕ್ಕೆ ಅಥವಾ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಬಹುದು.
Mail: janamiditha@gmail.com

Leave a Reply

Your email address will not be published. Required fields are marked *