ಕಾಲು ಮುರಿದಿದ್ದ ಬೀದಿ ನಾಯಿಗೆ ಗಾಲಿ ತೊಡಿಸಿದ ವಿದ್ಯಾರ್ಥಿನಿ ಮಾನವೀಯ ಕಾರ್ಯಕ್ಕೆ ಮುಚ್ಚುಗೆಯ ಸುರಿಮಳೆ !

ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವ ಶ್ವಾನದ ವಿಡಿಯೋ ವೊಂದು ಕಳೆದ ಕೆಲವು ದಿನಗಳಿಂದ ಬಾರಿ ವೈರಲ್ ಆಗುತ್ತಿದೆ . ಹೀಗೊಂದು ಬೀದಿ ನಾಯಿ ಇದ್ಯಾಕೆ ಈ ರೂಪ ತಳೆದಿದೆ ಎಂದು ಮೂಗಿನ ಮೇಲೆ ಬೆರಳಿಟ್ಟು ಕೊಂಡವರು ಹಲವಾರು ಮಂದಿ, ಮುಸಿ -ಮುಸಿ ನಗುವವರಿಗೂ ಕೂಡಾ ಕಡಿಮೆ ಇರಲಿಲ್ಲ ಹೌದು ! ವಿಚಿತ್ರ ಅನಿಸಿದರೂ ಸತ್ಯ .,ಇದರ ಹಿಂದೆ ಬಲವಾದ ಕರುಣಾಜನಕ ಕಥೆ ಇದೆ.

ಕೆಲವು ದಿನಗಳ ಹಿಂದೆ ತಾಯಿಯ ಜೊತೆ ಮುಸ್ಸಂಜೆಯ ವೇಳೆಯಲ್ಲಿ ವಾಕಿಂಗ್ ಹೋಗುತ್ತಿದ್ದ ಸಂದರ್ಭ ವಿದ್ಯಾರ್ಥಿನಿ ಪ್ರೀಯ ಕಣ್ಣಿಗೆ ನಾಯಿಯೊಂದು ಗಂಭೀರ ಗಾಯಗೊಂಡು ಕಾಲುಗಳನ್ನು ಎಳೆದುಕೊಂಡು ರಸ್ತೆ ಕ್ರಾಸ್ ಮಾಡುತ್ತಿತ್ತು ಗಮನಿಸಿದ ಈಕೆ ಮನಸ್ಸು ಮಮ್ಮುಲ ಮರುಗಿತ್ತು. ತನ್ನ ತಾಯಿಯೊಂದಿಗೆ ದುಃಖವನ್ನು ಹಂಚಿಕೊಂಡು ನಾಯಿಗೆ ಮರು ಜನ್ಮ ನೀಡುವಲ್ಲಿ ಸಹಕಾರಿಯಾಗಿ ಇದೀಗ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾಳೆ.

ಯಾವುದೋ ವಾಹನದ ಕ್ರೂರ ದ್ರಷ್ಟಿಗೆ ಒಳಗಾಗಿ ತನ್ನ ಹಿಂದಿನ ಎರಡು ಕಾಲುಗಳ ಸ್ವಾಧೀನವನ್ನು ಸಂಪೂರ್ಣ ಕಳೆದು ಕೊಂಡು ಆಹಾರ ಅರಸುವಿಕೆಯಲ್ಲಿ ಅಸಹಾಯಕವಾಗಿದ್ದ ನಾಯಿಯನ್ನು ಮನೆಗೆ ತಂದಳು ಈಕೆ., ಅಷ್ಟು ಮಾತ್ರವಲ್ಲದೇ ತಂದೆಯ ನೆರವಿನಿಂದ ಪಶು ವೈದ್ಯರ ಸಹಾಯದಿಂದ ಒಂದಷ್ಟು ಟ್ರೀಟ್ಮೆಂಟ್ ಕೊಡಿಸಿದ್ದಳು ಇದರಿಂದ ಶ್ವಾನ ಪ್ರಾಣಾಪಾಯದಿಂದ ಪಾರಾಗಿದ್ದರೂ, ಕಾಲನ್ನು ನೆಲಕ್ಕೆ ಊರುವ ಸಾಮರ್ಥ್ಯವನ್ನು ಹೊಂದುದಕ್ಕೆ ಸಾಧ್ಯವಾಗಲಿಲ್ಲ ಶಾಶ್ವತವಾಗಿ ಸಂಪೂರ್ಣ ಸ್ವಾಧೀನತೆ ಕಳೆದು ಕೊಂಡಿದ್ದು ಈಕೆಯ ಮನಸ್ಸಿಗೆ ತೀರಾ ಘಾಸಿ ಉಂಟು ಮಾಡಿತ್ತು ಎಲ್ಲಾನಾಯಿಯಂತೆ ಇದೂ ಕೂಡಾ ಚಲನಶೀಲತೆಯನ್ನು ಕಂಡು ಕೊಳ್ಳಬೇಕೆನ್ನುವ ಮಹದಾಸೆ ಮನಸಿನಲ್ಲಿ ಕೊರೆಯಲು ಆರಂಭಿಸಿತು. ಹಗಲು -ಇರಳು ಅದರ ಯೋಚಿಸುತ್ತಾ ಅಂತೂ ಕೊನೆಗೂ ತಲೆಯಲ್ಲಿ ಒಂದು ಐಡಿಯಾ ಹೊಳೆಯಿತು., ಅದೇ ಕೃತಕ ಚಲನೆಯ ವ್ಯವಸ್ಥೆ ! ಅದನ್ನು ನಿರ್ಮಿಸಿದ್ದು ಮಾತ್ರ ಅಚ್ಚರಿತರಿಸುವಂತದ್ದು.

ಒಂದು ಸಣ್ಣ ಪಿವಿಸಿ ಪೈಪ್ ಗೆ ಎರಡು ಲಘು ತೂಕದ ಚಕ್ರ ಅಳವಡಿಸಿ,ಬೆಲ್ಟ್ ಮೂಲಕ ಬಿನ್ನಿಗೆ ಕಟ್ಟಿದ್ದು,ವೀಲ್ ಚೇರ್ ಮಾದರಿಯಲ್ಲಿ ರೂಪುಗೊಂಡು ,ನಾಯಿಯು ಸುಲಭವಾಗಿ ಮುಂದಿನ ಕಾಲುಗಳಿಂದ ತೆವಳಲು ಅನುಕೂಲವಾಗಿದೆ.ಈ ದಿವ್ಯ ಆಲೋಚನೆಗೆ ಶಹಬ್ಬಾಸ್ ಅನ್ನಲೇಬೇಕು ನಾಯಿ ಈಗ ಇದರ ಬಲದಿಂದ ಊರಿಡೀ ಸುತ್ತುತ್ತಿದೆ .ಈ ವಿಧ್ಯಾರ್ಥಿನಿಯ ಹ್ರದಯ ವೈಶಾಲ್ಯತೆ ,ಮಾನವೀಯ ಕಾರ್ಯಕ್ಕೆ ಮುಚ್ಚುಗೆ ಸಿಕ್ಕಿದೆ !

ಪ್ರಾಣಿ ಪ್ರೀಯೆ ಪ್ರೀಯ : ಕುಂದಾಪುರ ತಾಲೊಕಿನ ಹೊಸಂಗಡಿ ವಿದ್ಯುತ್ ನಿಗಮದ ಉದ್ಯೋಗಿಯಾಗಿರುವ ಕೆ. ರಾಮಸ್ವಾಮಿಯವರ ಹೆಮ್ಮೆಯ ಮಗಳಾದ ಪ್ರೀಯಾ ಪ್ರಸ್ತುತ ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿಧ್ಯಾರ್ಥಿನಿ ಬಾಲ್ಯದಿಂದಲೂ ಪ್ರಾಣಿ -ಪಕ್ಷಿಗಳೆಂದರೆ ಪಂಚಪ್ರಾಣವಂತೆ ಕಂಡ -ಕಂಡಲ್ಲಿ ಪ್ರಾಣಿಗಳನ್ನು ಮುದ್ದು ಮಾಡುವ ಈಕೆ ತಾನು ತಿನ್ನುದನ್ನು ಬಿಟ್ಟು ಪ್ರಾಣಿಗಳಿಗೆ ಅಧಿಕ ಪ್ರಮಾಣದಲ್ಲಿ ಮೀಸಲು ಇರಿಸುತ್ತಾಳಂತೆ. ದಿನಚರಿ ಆರಂಭ ಮತ್ತು ಅಂತ್ಯಗೊಳ್ಳುವುದು ಪ್ರಾಣಿಗಳ ಆರೈಕೆ ಗಳಿಂದಲೇ !.

“ಪ್ರಾಣಿಗಳಿಗೂ ನಮ್ಮಂತೆ ಜೀವ, ಜೀವನವಿದೆ ನಾವು ಕಷ್ಟ ಬಂದಾಗ,ನೋವು ಅನುಭವಿಸಿದಾಗ ಇನ್ನೊಬ್ಬರಲ್ಲಿ ಹೇಳಿಕೊಳ್ಳುತ್ತೇವೆ ಆದರೆ ಪ್ರಾಣಿ-ಪಕ್ಷಿಗಳಿಗೆ ಮಾತು ಬರುವುದಿಲ್ಲ ಮೂಖ ಜೀವಿಗಳ ರೋಧನೆಗೆ ಬೆಲೆ ಇಲ್ಲವೇ?ಅವುಗಳ ನೋವು-ನಲಿವಿನಲ್ಲಿ ಬಾಗಿಯಾಗಬೇಕು. ಅವುಗಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು” ಎನ್ನುತ್ತಾಳೆ ಪ್ರೀಯಾ.

-ಶಿವಕುಮಾರ್ ಹೊಸಂಗಡಿ

Leave a Reply

Your email address will not be published. Required fields are marked *