ಕಲ್ಲಿನ ಗಿರಿ ಕೋಟೆಗಳ ಐತಿಹಾಸಿಕ ಸ್ಥಳ – ಚಂದ್ರಗುತ್ತಿ ಯಲ್ಲಮ್ಮ

( ಮೈ ಮನ ರೋಮಾಂಚನಗೊಳ್ಳುವ ಪ್ರವಾಸ ಕಥನ)

                ಪ್ರಾಚೀನ ಮತ್ತು ಐತಿಹಾಸಿಕ ಕಾಲದಲ್ಲಿ ಎಲ್ಲಿ ಶಿಲೆಗಳು ಇವೆ ಅಲ್ಲಿ ಕಲ್ಲಿನ ಕಲೆಗಳಿವೇ  ಅವು ಈಗ ಐತಿಹಾಸಿಕ ಸ್ಥಳಗಳಾಗಿವೆ. ಅಂತಹ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳ ಪುರಾಣವೇ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಚಂದ್ರಗುತ್ತಿ ಅನೇಕ ಪ್ರವಾಸಿಗರನ್ನು ಮತ್ತು ಗುತ್ತಿಯಮ್ಮನ ದೇವಸ್ಥಾನವಿರುವ ಈ ಪ್ರದೇಶ ಅಸಂಖ್ಯಾತ ಭಕ್ತರನ್ನು ಸಳೆಯುವ ಪ್ರದೇಶವಾಗಿದೆ. ಗಿರಿ ಕಂದಕ ಹೊಂದಿದ ಈ ಗಿರಿಕೋಟೆ ಚಂದ್ರಗುತ್ತಿ ಚಾರಣೆಗರಿಗೆ ಒಳ್ಳೆಯ ಅನುಭವ ಮತ್ತು ರಮಣೀಯ ನೈಸರ್ಗಿಕ ಪ್ರದೇಶ ವೀಕ್ಷಣೆಯ ರಮ್ಯ ಸ್ಥಳವಾಗಿದೆ. ಸಹ್ಯಾದ್ರಿಯ ಸರಣಿಯ ಶ್ರೇಣಿಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ನಿಚಳವಾಗಿ ಮಲಗಿದ ವನ ಗಿರಿಯಾಗಿದೆ. ಅನೇಕ ದೇವಸ್ಥಾನಗಳ ತೊಟ್ಟಿಲಾಗಿದೆ. ಈ ಗುಡ್ಡ ಏಳು ಸುತ್ತಿನ ಐತಿಹಾಸಿಕ ಕೋಟೆ ಮತ್ತು ಅರಸರ, ಸೈನಿಕರ, ರಾಜ ಕುಟುಂಬದ ತರಬೇತಿ ಕೇಂದ್ರ ಹಾಗೂ ಮದ್ದು ಗುಂಡು, ಶಸ್ತ್ರಾಸ್ತ್ರ ಸಂಗ್ರಹಿಸುವ ಪ್ರದೇಶವಾದ ಐತಿಹಾಸಿಕ ಸ್ಥಳವಾಗಿದೆ. 

-: ಸ್ಥಳ ಇತಿಹಾಸ :- 

                 ಚಂದ್ರಗುತ್ತಿ ಎಂಬ ಸ್ಥಳ ಬಹಳ ಹಳೆಯ ಪೌರಾಣಿಕ ಸ್ಥಳವಾಗಿದೆ. ಈ ಸ್ಥಳ ಶಿವಮೊಗ್ಗದಿಂದ 17 ಕಿ.ಮಿ ದೂರದಲ್ಲಿದೆ. ಇದು ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಗಡಿಯಲ್ಲಿದೆ. ಮಲೆನಾಡಿನ ಪ್ರಕೃತಿಯ ರಮ್ಯ ಸ್ಥಳಗಳಲ್ಲಿ ಒಂದಾಗಿದೆ. ದ್ವಾಪಾರ ಯುಗದಲ್ಲಿ ವಿಷ್ಣು ಅವತಾರ ಪುರುಷ ಕೃಷ್ಣ ಮತ್ತು ಜರಾಸಂಧರ ನಡುವೆ ಘನ ಘೋರ ಯುದ್ಧ ನಡೆದಾಗ ಕೃಷ್ಣ ಈ ಚಂದ್ರಗುತ್ತಿ ಗುಹೆಯಲ್ಲಿ ಬಂದು ಅಡಗಿದ ಜರಾಸಂಧ ಕೃಷ್ಣನನ್ನು ಹುಡುಕಿದರು ಸಿಗದೆ ಹೋದಾಗ ಇಡಿ ಚಂದ್ರಗುತ್ತಿ ಬೆಟ್ಟವನ್ನು ಎತ್ತಿ ಅಲ್ಲಾಡಿಸಿ ಬಿಟ್ಟ. ಇದನ್ನು ನೋಡಿ ಚಂದ್ರ ನಕ್ಕನ್ನು ಆದ್ದರಿಂದ ಜರಾಸಂಧನ ಹುಮ್ಮತನಕ್ಕೆ ನಕ್ಕ ಚಂದ್ರನ ಕಾರಣದಿಂದ ಈ ಬೆಟ್ಟಕ್ಕೆ ಚಂದ್ರಗುತ್ತಿ ಎಂದು ಹೆಸರು ಬಂತು ಅಂತಾ ಪುರಾಣದಲ್ಲಿ ಉಲ್ಲೇಖವಿದೆ. 

                ವರದಾ ನದಿಯ ದಂಡೆಯ ಮೇಲೆ 3 ಕಿ.ಮಿ ಅಂತರದಲ್ಲಿ ಇದೆ ಸಮುದ್ರ ಮಟ್ಟದಿಂದ 3 ಸಾವಿರ ಅಡಿ ಎತ್ತರದಲ್ಲಿದೆ. ಇದು ಜ್ವಾಲಾಮುಕಿ ಸ್ಪೋಟದಿಂದ ಈ ಪರ್ವತ ನಿರ್ಮಾಣವಾಗಿದೆ. ಈ ಬೆಟ್ಟ ಅನೇಕ ಕಲ್ಲಿನ ಆಗರದ ಸಾಗರವಾಗಿದೆ. 3ನೇ ಶತಮಾನದಲ್ಲಿ ಬನವಾಸಿಯ ಕದಂಬರು ಆಳ್ವಿಕೆಗೆ ಒಳಪಟ್ಟ ಪ್ರದೇಶವಾಗಿ ಅವರ ಅಧಿನದಲ್ಲಿ ಅನೇಕ ವರ್ಷಗಳ ಕಾಲ ಇತ್ತು. ಬನವಾಸಿಯಿಂದ 14 ಕಿ.ಮಿ ಅಂತರವಿರುವ ಈ ಚಂದ್ರಗುತ್ತಿ ಇಲ್ಲಿ ಬನವಾಸಿಯ ವರೆಗೆ ಗುಹೆ, ಸುರಂಗಮಾರ್ಗವಿತ್ತು ಅಂತಾ ಪೂರ್ವಿಕರ ಮಾತಾಗಿದೆ. ರೇಣುಕಾ ಯಲ್ಲಮ್ಮನ ದೇವಸ್ಥಾನದ ಹಿಂದಿನಿಂದ ಗಿರಿ ಹತ್ತಲು ದಾರಿಯಿದ್ದು ಇದು ಚಾರಣೆಗರಿಗೆ ಸ್ವರ್ಗವಾಗಿದೆ. ಯಲ್ಲಮ್ಮ ಭಕ್ತರ ಭಕ್ತಿಯ ಸದರಾಗಿದೆ. ಈ ದಾರಿಯಿಂದ ಹಿಂದೆ ಹೋದಂತೆ ಏಳು ಸುತ್ತಿನ ಹಳೆಯ ಕೋಟೆಗಳಿವೆ. ದಾರಿಯಲ್ಲಿ ಪಿರಂಗಿಗಳು, ಶಸ್ತ್ರಾಸ್ತ್ರ ಸಂಗ್ರಹ ಕೊಠಡಿಗಳು, ಮದ್ದು ಅರಿಯುವ, ಸಂಗ್ರಹಿಸುವ, ತುಂಬುವ ಪುರಾತನ ಕೊಠಡಿಗಳಿವೆ. 5 ಬಾವಿ, 1 ಶುದ್ಧ ಕುಡಿಯುವ ಬಾವಿ, ಭೀಮ ಹೆಜ್ಜೆಯಿಟ್ಟು ಹೋದ ಕೊಳ ಅಂತಾ ನಂಬಿದ ಗುಂಡಿಯಿದೆ. ಈ ಬೆಟ್ಟ ಎತ್ತರ ಪ್ರದೇಶವಾದ ದುರ್ಗಿ ದ್ವೀಪದ ಮೇಲೆ ನಿಂತು ನೋಡಿದರೆ ಚಂದ್ರಗುತ್ತಿ ಸುತ್ತಲಿನ ಪ್ರದೇಶ ರಮ್ಯವಾಗಿ, ರುದ್ರಮಯವಾಗಿ, ವೀರಾಟ್ ರೂಪದಲ್ಲಿ ಕಾಣುತ್ತದೆ. 

                    1396 ರ ಶಾಸನದ ಪ್ರಕಾರ ವಿಜಯ ನಗರದ ದೊರೆ ಹರಿಹರ ಆಳುತ್ತಿದ್ದ ಅಂತಾ ತಿಳಿಸುತ್ತದೆ. ಕ್ರಿ.ಶ 1377 ರಿಂದ 1404 ರ ವರೆಗೆ ಸ್ಥಳೀಯ ಮುಖ್ಯಸ್ಥನು ಬಚ್ಚಣ ಎಂಬ ಮಾಂಡಲಿಕ ಆಳುತ್ತಿದ್ದ ಅಂತಾ ತಿಳಿಸುತ್ತದೆ. ನಂತರ ಚಂದ್ರಗುತ್ತಿಯನ್ನು ಕೆಲಾಡಿ ನಾಯಕರು ನಿಯಂತ್ರಣಕ್ಕೆ ಒಳಪಟ್ಟಿತ್ತು ಅಂತಾ ಸ್ಥಳ ಇತಿಹಾಸ ತಿಳಿಸುತ್ತದೆ. 

-: ಚಂದ್ರಗುತ್ತಿ ರೇಣುಕಾಂಬೆ ( ಗುತ್ತಿಯಮ್ಮ) :-

                    ದ್ವಾಪಾರ ಯುಗದಲ್ಲಿ ಚಂದ್ರಗುತ್ತಿ ರಾಜನಿಗೆ ರೇಣುಕಾದೇವಿ ಅಂತಾ ಮಗಳಿದ್ದಳು. ಅವಳನ್ನು ಸವದತ್ತಿಯ ಜಮದಗ್ನಿ ಮಹಾ ಋಷಿಗೆ ಮದುವೆ ಮಾಡಿ ಕೊಡಲಾಗಿತ್ತು. ಮರಳಿನ ಮಡಿಕೆ ಮತ್ತು ಹಾವಿನ ಸಿಂಬೆಯಿಂದ ಪೂಜೆಗೆ ನೀರು ತರಲು ಜಮದಗ್ನಿ ಕಳಿಸಿದ ಆದರೆ ರಾಜ ಪರಿವಾರದ ವಿಲಾಸಿ ಜೀವನ ನೋಡಿ ಮನಸ್ಸು ಕೆದಕಿದ್ದರಿಂದ ಮಡಿಕೆ ಒಡೆದು ಹಾವು ಹರಿದು ಹೋಯಿತು. ಜಮದಗ್ನಿಯ ಮಹಾ ಕ್ರೌರ್ಯಕ್ಕೆ  ಒಳಗಾಗಿ ರೇಣುಕಾಗೆ ಶಾಪವಿಟ್ಟ. ಕಾಡುಮೇಡು ಅಲಿಯುತ್ತಾ ರೇಣುಕಾ ದೇವಿ ಚಂದ್ರಗುತ್ತಿ ಪರ್ವತಕ್ಕೆ ಬಂದು ಗುಹೆಯಲ್ಲಿ ನೆಲೆಸುತ್ತಾಳೆ. ಜಮದಗ್ನಿಗೆ ರೇಣುಕಾದೇವಿಯ ಮೇಲೆ ಕೋಪ ಕಡಿಮೆಯಾಗದೆ. ಅವಳ ಶಿರಶ್ಚೇದನ ಮಾಡಲು ತನ್ನ ಮಕ್ಕಳಿಗೆ ಕೇಳುತ್ತಾನೆ. ಇವರು ನಿರಾಕರಿಸಿದಾಗ ಇವರನ್ನು ಭಸ್ಮ ಮಾಡುತ್ತಾನೆ. ನಂತರ ಮಹಾ ವಿಷ್ಣುವಿನ ಅವತಾರ ಪುರುಷ ಭಾರ್ಗವ ಪರಸುರಾಮನನ್ನು ಕರೆದು ತಾಯಿ ರುಂಡ ಚಂಡಾಡಲು ತಿಳಿಸುತ್ತಾನೆ. ತಂದೆಯ ಆಜ್ಞೆಯಂತೆ ರೇಣುಕಾ ದೇವಿ ಚಂಡನ್ನು ಚಂದ್ರಗುತ್ತಿ ಬೆಟ್ಟದ ಗುಹೆಯಲ್ಲಿ ರುಂಡ ಚಂಡಾಡಿ ಶಿರದಿಂದ ಬೇರ್ಪಡಿಸಿದ ಅಂತಾ ನಂಬಿಕೆಯಿದೆ. ಅಲ್ಲಿಂದ ದೇಹ ಅಲ್ಲೇ ಬಿಟ್ಟು ರುಂಡ ತೆಗೆದುಕೊಂಡು ಹೋಗುತ್ತಾನೆ. ನಂತರ ಮೂರು ವರ ಕೇಳುವಂತೆ ಜಮದಗ್ನಿ ಆಜ್ಞಾಪಿಸುತ್ತಾನೆ. ತನ್ನ ತಾಯಿ ರೇಣುಕಾ ದೇವಿ ಜನ್ಮ ಬರುವಂತೆ ಬೆಡುತ್ತಾನೆ. ಮಾನಸ ಪುತ್ರ ತಮ್ಮದಿಂರ ಪುನರ್ ಜನ್ಮವೆತ್ತುವಂತೆ ಹಾಗೂ ತಮ್ಮ ತಂದೆ ಜಮದಗ್ನಿ ಮಹಾ ಕೊಪ್ಪ ತ್ಯೆಜಸುವಂತೆ ವರ ಕೇಳುತ್ತಾನೆ. ಅಲ್ಲಿಂದ ಈ ಸ್ಥಳದಲ್ಲಿ ಚಂದ್ರಗುತ್ತಿ ರೇಣುಕಾ ದೇವಿ, ಯಲ್ಲಮ್ಮ, ಗುತ್ತಿಯಮ್ಮ, ಅಂತಾ ಹೆಸರಿನಿಂದ ಪ್ರಖ್ಯಾತಳಾಗಿದ್ದಾಳೆ. ಇದೆ ಚಂದ್ರಗುತ್ತಿ ರೇಣುಕಾ ದೇವಿ ಶಿರಶ್ಚೇದನವಾದ ಸ್ಥಳವಾಗಿದೆ ಅಂತಾ ಐತಿಹಾಸಿಕ ಪುರಾಣ ತಿಳಿಸುತ್ತದೆ.

                       ರೇಣುಕಾ ದೇವಿ ವಚನ ಭ್ರಷ್ಟಳಾಗಿ ಕುಷ್ಠರೋಗದಿಂದ ಬಳಲಿ ವಸ್ತ್ರವಿಲ್ಲದೆ ಬೆವಿನ ಸೊಪ್ಪು ಕಟ್ಟಿಕೊಂಡು ಕಾಡಿನಲ್ಲಿ, ಚಂದ್ರಗುತ್ತಿಯಲ್ಲಿ ನಡೆದಾಡಿದ ಪ್ರತೀಕವಾಗಿ ಇಲ್ಲಿ ಜೋಗತಿಯರು ಹಿಂದಿನ ಕಾಲದಲ್ಲಿ ಬೆತ್ತಲ ಸೇವೆ ಮಾಡುತ್ತಿದ್ದರು. ( ಈಗ ನಿಷೇಧಿಸಿದೆ) ದೇವಿಗೆ ಉಡಿ ತುಂಬುವದು, ಮುತ್ತು ಮತ್ತು ಕಿವಿ ಚುಚ್ಚುವದು, ಪಡ್ಡಲಿಗೆ ತುಂಬಿಸುವದು, ಹರಕೆ, ಹವಣ ಮತ್ತು ಜೋಗತಿ ಹೊರುವದು ಮಾಡುತ್ತಾರೆ.

                           ಚಂದ್ರಗುತ್ತಿ ಗುಹೆಯಲ್ಲಿ ಎಲ್ಲಮ್ಮನ ನಿಜವಾದ ಗರ್ಭಗುಡಿಯಿದೆ. ಅಲ್ಲಿ ನಿತ್ಯ ಪೂಜೆ ಪುನಸ್ಕಾರ ನಡೆಯುತ್ತದೆ. ಅಮಾವಾಸ್ಯೆ ಹುಣ್ಣಿಮೇಯ ದಿನ ಸಾಕಷ್ಟು ಭಕ್ತರು ಬರುತ್ತಾರೆ. ಮಂಗಳವಾರ, ಶುಕ್ರವಾರ ಬೆಳಿಗ್ಗೆ 6 ರಿಂದ ಸಂಜೆ 7 ವರೆಗೆ ತೆರೆದಿರುತ್ತದೆ. ಮಾರ್ಚ್ ತಿಂಗಳಿನಲ್ಲಿ ಗುತ್ತಿಯಮ್ಮನ ಜಾತ್ರೆ ನಡೆಯುತ್ತದೆ. ಮಹಾನವಮಿಯಲ್ಲಿ ಸಡಗರದಿಂದಲೇ ದೀಪ ಹಾಕುತ್ತಾರೆ. ಆಗ ಭಕ್ತರ ಸಂಖ್ಯೆ ಅಧಿಕವಾಗಿ ಬರುತ್ತದೆ.

                150 ಕ್ಕೂ ಹೆಚ್ಚು ಮೆಟ್ಟಿಲುಗಳು ಹತ್ತಿ ದೇವಸ್ಥಾನಕ್ಕೆ ಹೋಗಬೇಕು. ದಾರಿಯಲ್ಲಿ ಕಾಲಭೈರವನ ದರ್ಶನವಾಗುತ್ತದೆ. ನಂತರ ಏಳು ಹೇಡೆಯ ನಾಗೇಂದ್ರ ದೇವನ ದರ್ಶನವಾಗುತ್ತದೆ. ಅತ್ತ ಐತಿಹಾಸಿಕ ಕೋಟೆಗೆ ದಾರಿಯಿದೆ. ನಂತರ ಮೇಲೆ ಬಂದರೆ ಮಾತಂಗಿಯ ಗುಹೆ ಬರುತ್ತದೆ. ಬಂಡೆಯ ಮಡಿಲಿನಲ್ಲಿ ಶಾಂತವಾಗಿ ಭಕ್ತರನ್ನು ಉದ್ದರಿಸುತ್ತಿದ್ದಾಳೆ. ದೇವಸ್ಥಾನದ ಮುಂಭಾಗದಲ್ಲಿ ಪರಶುರಾಮನ ದೇವಸ್ಥಾನವಿದೆ. ದೇವಸ್ಥಾನದ ಹಿಂಭಾಗದಲ್ಲಿರುವ ದಾರಿಯಿಂದ ಹೋದರೆ ಹಳೆಯ ಕೋಟೆಗೆ ಹೊಗಬಹುದು. ದೇವಸ್ಥಾನದ ಮುಂದಿನ ದಾರಿಯಲ್ಲಿ ಮೆಟ್ಟಿಲುಗಳನ್ನು ಇಳಿದು ಹೋದರೆ ಒಂದು ಕೋಳ ಬರುತ್ತದೆ. ಇದು ಸದಾ ಕಾಲ ನೀರಿನಿಂದ ತುಂಬಿ ಹರಿಯುತ್ತದೆ.  ಇದರ ಮುಂದೆ ತ್ರಿಶೂಲ ಬೀರಪ್ಪನ ದೇವಸ್ಥಾನವಿದೆ. ಇದು ಕಾಲ ಗರ್ಭದಲ್ಲಿ ಉದಯಿಸಿದ ಉದ್ಭವ ಮೂರ್ತಿ ದೇವಸ್ಥಾನವಾಗಿದೆ. ಅನೇಕ ತ್ರಿಶೂಲಗಳಿಂದ ಈ ದೇವಸ್ಥಾನ ಕುಡಿದೆ. ಹಾಗೆ ಮುಂದೆ ಬಂದಂತೆ ಕಾಲುದಾರಿ ದೇವಸ್ಥಾನದಿಂದ ಇಳಿಯಲು ಇದೆ ಚಂದ್ರಗುತ್ತಿ ಸರಣಿ ಪರ್ವತದ ಎತ್ತರ ಪ್ರದೇಶದ ಗಿರಿಗಳು ಕಾಣುತ್ತವೆ. 

-: ಐತಿಹಾಸಿಕ ಕೋಟೆಗಳು :- 

               ಈ ಪ್ರದೇಶದಲ್ಲಿ ಲಕ್ಷಾಂತರ ವರ್ಷಗಳ ಹಿಂದೆ ಇಲ್ಲಿ ನೈಸರ್ಗಿಕ ಮೆರೆಗಳು ನಿರ್ಮಾಣವಾದವು. ಅದರಲ್ಲಿ ಚಂದ್ರಗುತ್ತಿ ಬೆಟ್ಟವು ಒಂದಾಗಿದೆ. ಈ ಕಪ್ಪು ಶಿಲೆಯ ಗ್ರೇನೈಟ್  ಬಂಡೆಗಳ ಮೇಲೆ ಕದಂಬ ಅರಸರು ಏಳು ಸುತ್ತಿನ ಕೋಟೆ ಕಟ್ಟಿದರು ಅಂತಾ ಕುರುಹುಗಳಿವೆ. ಅಪಾರ ಖನಿಜಾಂಶ ಸಂಪತ್ತು, ಅರಣ್ಯ, ವನ್ಯಜೀವಿ ಮತ್ತು ಆಡಳಿತದ ದೃಷ್ಟಿಯಿಂದ, ಶತ್ರು ರಾಜ್ಯದ ಅರಸರ  ದಾಳಿ ತಡೆಯಲು ಹಾಗೂ ಗುಡ್ಡ ಹತ್ತಿ ಗುಪ್ತವಾಗಿ ಬರಬಹುದು ಅಂತಾ ಕದಂಬ ಅರಸರು ಈ ಏಳು ಸುತ್ತಿನ ಕೋಟೆ ಕಟ್ಟಿರಬಹುದು ಅಂತಾ ಐತಿಹಾಸಿಕವಾಗಿ ತಿಳಿಯುತ್ತದೆ.

                ದೊಡ್ಡ ದೊಡ್ಡ ಬಂಡೆಗಳ ಮೇಲೆ ಕೆತ್ತಿದ ಕಲ್ಲುಗಳಿಂದ ಬೃಹದಾಕಾರವಾಗಿ ಕೋಟೆಯ ಗೋಡೆಗಳನ್ನು ಕಟ್ಟಲಾಗಿದೆ. ಮತ್ತು ಮಧ್ಯದಲ್ಲಿ ಸಂಚಾರ ಮಾಡಲು ದಾರಿ ಮಾಡಲಾಗಿದೆ. ಅವುಗಳಿಗೆ ಮೆಟ್ಟಿಲುಗಳನ್ನು ಮಾಡಲಾಗಿದೆ. ಇಲ್ಲಿ ಶತ್ರುಗಳನ್ನು ಪತ್ತೆಹಚ್ಚಿ ವೀಕ್ಷಣೆ ಮಾಡಲು ಗಮನ ಸರಿಸಲು ಈ ಗಿರಿ ಬಳಸಿಕೊಳ್ಳಲ್ಲಾಗಿತ್ತು. ಈ ಕೋಟೆಗಳು ನಾದುರಸ್ಥಿ ಹೊಂದಿದ್ದರು ಇವು ಐತಿಹಾಸಿಕತೆಯನ್ನು ಸಾರುತ್ತಿವೆ. ದಟ್ಟಕಾಡು ಈ ಕೋಟೆಗಳನ್ನು ಆವರಿಸಿವೆ. ಇವುಗಳನ್ನು ಬೆಳಕಿಗೆ ತರುವ ಅಗತ್ಯವಿದೆ.

-: ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು :- 

            ವರ್ಷದ ಪೂರ್ತಿ ನಡೆಯುವ ಎಲ್ಲಮ್ಮನ ಹರ ಜಾತ್ರೆ ಚಂದ್ರಗುತ್ತಿ ಗುಡ್ಡ ವೀಕ್ಷಣೆಗೆ ಮತ್ತು ಕೋಟೆಗಳನ್ನು, ಐತಿಹಾಸಿಕ ಸ್ಥಳಗಳನ್ನು, ರಮ್ಯ ಪರಿಸರ, ಕಾಡು ಇತ್ಯಾದಿ ಸವಿಯಲು ಅನೇಕ ಭಕ್ತರು, ಪ್ರವಾಸಿಗರು, ಚಾರಣ ಪ್ರೀಯರು ಬರುತ್ತಾರೆ. ಇವರಿಗೆ ಅನುಕೂಲವಾಗುವ ರೀತಿ ಸರ್ಕಾರ ಪ್ರವಾಸೋದ್ಯಮಕ್ಕೆ ಈ ಕ್ಷೇತ್ರದಲ್ಲಿ ಒತ್ತು ನೀಡಬೇಕು. ಪ್ರವಾಸಿಗರಿಗೆ ಭಕ್ತರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹ, ಶೌಚಾಲಯ, ಮಾರುಕಟ್ಟೆ, ಉಪಹಾರ ಗೃಹ, ಹೋಟೆಲ್, ಸಾರಿಗೆ ಸಂಪರ್ಕ ಇತ್ಯಾದಿ ಸವಲತ್ತುಗಳನ್ನು ಒದಗಿಸಬೇಕು. ಐತಿಹಾಸಿಕ ಕೋಟೆಗಳನ್ನು, ಸ್ಮಾರಕಗಳನ್ನು ಪತ್ತೆ ಹಚ್ಚಿ ಅವುಗಳ ಪುನರ್ ನಿರ್ಮಾಣಕ್ಕೆ ಆದ್ಯತೆಯ ಮೇರೆಗೆ ಒತ್ತು ನೀಡಿ ಐತಿಹಾಸಿಕ ಕೋಟೆಗಳನ್ನು ಉಳಿಸಬೇಕು. ಪುರಾತತ್ವ ಇಲಾಖೆಯ ಅಡಿಯಲ್ಲಿ ಈ ಸ್ಥಳ ಮತ್ತು ಜಿರ್ಣೋದ್ದಾರಕ್ಕೆ ಒಳಪಡಿಸಿ ಪ್ರವಾಸಿಗರಿಗೆ ಉತ್ತಮ ವೀಕ್ಷಣಾ ಸ್ಥಳವಾಗಿ ಮಾಡಬೇಕು. ಚಂದ್ರಗುತ್ತಿಯು ಚಂದ್ರನ ರೀತಿ ಸುಂದರವಾಗಿ ಹೊಳೆಯುವಂತೆ ಕ್ರಮ ಕೈಗೊಳ್ಳಬೇಕು. 


ಲೇಖಕರು:- ಶರೀಫ ಗಂ ಚಿಗಳ್ಳಿ( ಸಾಹಿತಿ)
ಸಾ/ ಬೆಳಗಲಿ ತಾ/ ಹುಬ್ಬಳ್ಳಿ ಜಿ/ ಧಾರವಾಡ

 

Leave a Reply

Your email address will not be published. Required fields are marked *