ಕರ್ನಾಟಕಕ್ಕೂ ಇದೆಯೇ ಉಗ್ರಗಾಮಿ ನಂಟು?

ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹುನ್ನಾರ ನಡೆಸಿದ್ದ ಆರೋಪದಡಿ ಅಜೀಜ್ (45 ವರ್ಷ) ಎಂಬಾತನನ್ನು ಬಂಧಿಸಿ ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದ ಅಜೀಜ್ ಎಂಬಾತನನ್ನು ಹಿಂಬಾಲಿಸಿ ಆತನನ್ನು ಬಂಧಿಸಿದಾಗ ಆತನ ಬಳಿ ಜಿಲೆಟಿನ್ ಕಡ್ಡಿಗಳು, ಸ್ಫೋಟಕಗಳು, ಹಾಗೂ ಪೆಟ್ರೋಲ್ ಬಾಂಬ್ಗಳು ಸಹ ಲಭ್ಯವಾಗಿವೆ .

ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಈತನಿಗೆ ಉಗ್ರಗಾಮಿ ಸಂಘಟನೆಗಳ ಜೊತೆ ನಂಟೇನಾದರೂ ಇದೆಯೇ, ಸ್ಫೋಟಕಗಳು ಹಾಗೂ ಪೆಟ್ರೋಲ್ ಬಾಂಬ್ಗಳನ್ನು ಈತ ಏಕೆ ಸಂಗ್ರಹಿಸಿದ್ದ ಎಂಬ ಕುರಿತು ವಿಚಾರಣೆ ಮುಂದುವರೆದಿದೆ.

Leave a Reply

Your email address will not be published. Required fields are marked *