ಕತ್ತೆಗೆ ದೊರಕಿದೆ ಪರಮ ವಿಶಿಷ್ಟ ಸೇವಾ ಪದಕ

ಈ ಫೋಟೋದಲ್ಲಿರುವ ಕತ್ತೆಯ ಹೆಸರು ಪೆದೊಂಗಿ. ಇದು ಮಾಡಿದ ದೇಶಸೇವೆಗಾಗಿ ಭಾರತೀಯ ಸೇನೆ ಇದಕ್ಕೆ ಪರಮ ವಿಶಿಷ್ಟ ಸೇವಾ ಪದಕ & ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಿದೆ.

ಸೇನೆಗೆ ಇದರ ಸೇವೆ :

32ವರ್ಷಗಳ ತನ್ನ ಜೀವನದಲ್ಲಿ 25ವರ್ಷಕ್ಕೂ ಹೆಚ್ಚು ಕಾಲ ಪೆದೊಂಗಿ ಪರ್ವತ ಪ್ರದೇಶದಲ್ಲಿ ಯೋಧರ ಆಹಾರ ವಸ್ತುಗಳು, ಆಯುಧಗಳನ್ನು ಹೊತ್ತು ಸೇವೆ ಸಲ್ಲಿಸಿತ್ತು. ಒಂದು ಸಲ ಯುದ್ಧದ ಸಂದರ್ಭದಲ್ಲಿ ಈ ಗಾರ್ದಭರಾಣಿ ಆಕಸ್ಮಿಕವಾಗಿ ಪಾಕಿಸ್ತಾನದ ಕಡೆ ಹೋಗಿಬಿಟ್ಟಳಂತೆ. ಆಗ ಪಾಕಿ ಸೈನ್ಯ ಇದನ್ನು ವಶಪಡಿಸಿಕೊಂಡು ತಮ್ಮ ಸೇವೆಗೆ ಉಪಯೋಗಿಸಿಕೊಳ್ಳತೊಡಗಿದರು.

ಒಂದು ದಿನ ಪೆದೊಂಗಿ ತನ್ನ ಬೆನ್ನ ಮೇಲೆ ಹೊರಿಸಿದ್ದ ಪಾಕ್ ಆಯುಧಗಳ ರಾಶಿಯನ್ನು ಹೊತ್ತು ನಮ್ಮ ಭಾರತೀಯ ಸೈನ್ಯದ ಕ್ಯಾಂಪ್‌ಗೆ ಹಿಂದಿರುಗಿತು ! ಇದರ ಈ ದೇಶಭಕ್ತಿಯನ್ನು ಕಂಡ ನಮ್ಮ ಸೈನ್ಯದ ಅಧಿಕಾರಗಳು ಬೆರಗಾದರು. ಅದಕ್ಕೆ ಗೌರವ ವಂದನೆ ಕೊಟ್ಟು ಪುನಃ ಭಾರತ ಮಾತೆಯ ಸೇವೆಗೆ ಸೇರಿಸಿಕೊಂಡರು.

1997ರಲ್ಲಿ ಈ ಶ್ರೇಷ್ಠ ಗಾರ್ದಭ ಭರತಭೂಮಿಯ ಮಣ್ಣಿನಲ್ಲಿ ಮಣ್ಣಾಯಿತು.

ವಿಚಿತ್ರಕಾರಿ ಸಂಗತಿ ಏನೆಂದರೆ – “ಈ ಕತ್ತೆಗಿರುವ ದೇಶಭಕ್ತಿ, ನಿಯತ್ತು, ಬುದ್ಧಿಶಕ್ತಿ ಭಾರತದಲ್ಲಿ ಹುಟ್ಟಿ, ಇಲ್ಲಿನ ಅನ್ನ ತಿನ್ನುವ ನರರೂಪಿ ಕತ್ತೆಗಳಿಗಿಲ್ಲ ಅನ್ನೋದೇ ದುರಂತ…

ವಾಟ್ಸಾಪ್ ಕ್ರಪೆ

Leave a Reply

Your email address will not be published. Required fields are marked *