ಕಣ್ಣು ತುಂಬುತ್ತದೆ ಈತರ ವಿಷಯ ಕೇಳಿದಾಗ…

ಅದ್ಯಾಕೋ ಏನೋ ಎಷ್ಟೋ ತಂದೆಯರ ಜವಾಬ್ದಾರಿ ಅವರು ನಿವೃತ್ತಿ ಹೊಂದಿದರೂ ಮುಗಿದಿರುವುದಿಲ್ಲ ಅಲ್ವಾ!

ದೊಡ್ಡ ಕಂಪನಿಯ ಮ್ಯಾನೇಜರ್ ಆಗಿದ್ದ ಕೃಷ್ಣ ಪ್ರಸಾದ್ ಅವರಿಗೆ ಅಂದು ನಿವೃತ್ತಿಯ ದಿನ. ಮ್ಯಾನೇಜರ್ ಬೇರೆ, ಆಫೀಸ್ ನ ಸ್ಟಾಪ್ ದೊಡ್ಡ ಪಾರ್ಟಿಯನ್ನೇ ಆಯೋಜಿಸಿದ್ದರು ಒಳ್ಳೆಯ ಗಿಫ್ಟ್ ಕೊಟ್ಟರು. ದುಬಾರಿ ಹೂವಿನ ಹಾರ, ಹೂವಿನ ಗುಚ್ಛ, ಹಣ್ಣಿನ ಬುಟ್ಟಿ ಜೊತೆಗೆ ನಾನಾ ಖಾದ್ಯಗಳ ಸವಿಯೂಟ.

ಸಹೋದ್ಯೋಗಿಗಳೆಲ್ಲ ಅಭಿನಂದಿಸಿದರು. ಬಹಳ ಖುಷಿಯಿಂದ ಮನೆಗೆ ಬಂದ. ನಿವೃತ್ತಿ ಆಗುವಾಗ ಕಂಪನಿಯ ಕಡೆಯಿಂದ ಲಕ್ಷಾಂತರ ಹಣ ಬೇರೆ ಬಂದಿತ್ತು .‌

ಎಲ್ಲರೂ ಅಭಿನಂದಿಸಿ ಹ್ಯಾಪಿಯಾಗಿರಿ ಸರ್ ಎಂದು ಬೀಳ್ಕೊಟ್ಟರು. ಬಹಳ ಸಂತೋಷದಿಂದ ಮನೆಗೆ ಬಂದ ಕೃಷ್ಣ ಪ್ರಸಾದ್.

ಮಾರನೆಯ ದಿನ ಎಂದಿನಂತೆ ಆಫಿಸ್ ಓಪನ್ ಆಯ್ತು. ಅಲ್ಲಿನ ಕೆಲಸಗಾರರೆಲ್ಲಾ ಆಫೀಸಿನ ಒಳಗೆ ಹೋಗುವಾಗ ಗೇಟ್ ಕೀಪರ್ ಸೆಲ್ಯೂಟ್ ಹೊಡೆದ. ಅವರೂ ನಗುತ್ತಾ ಗುಡ್ ಮಾರ್ನಿಂಗ್ ಅಂತ ಆ ಗೇಟ್ ಕೀಪರ್ ಮುಖ ನೋಡಿದಾಗ ಆಶ್ಚರ್ಯ ಕಾದಿತ್ತು. ನಿನ್ನೆ ಯಾರನ್ನು ಮ್ಯಾನೇಜರ್ ಸ್ಥಾನದಿಂದ ನಿವೃತ್ತಿ ಕೊಟ್ಟು ಬೀಳ್ಕೊಟ್ಟಿದ್ದರೋ ಅದೇ ಕೃಷ್ಣ ಪ್ರಸಾದ್.

ಎಲ್ಲರಿಗೂ ಆಶ್ಚರ್ಯ! ಅಯ್ಯೋ ಸಾರ್ ನೀವಾ? ಇದೇನ್ ಸಾರ್ ಈ ಯೂನಿಫಾರ್ಮ್ ಅಂದಾಗ ಹ್ಯಾಟ್ ತೆಗೆದ ಕೃಷ್ಣ ಪ್ರಸಾದ್ ಈಗ ಇವತ್ತು ನನ್ನ ಜೀವನ ಶುರು ಅಂದಾಗ…

ಎಲ್ಲರೂ ಅಯ್ಯೋ ಸಾರ್, ಲಕ್ಷಾಂತರ ರೂಪಾಯಿ ಹಣ ಇದೆ. ದೊಡ್ಡ ಕೆಲಸಗಳಲ್ಲಿ ಮಕ್ಕಳಿದ್ದಾರೆ. ನಿಮಗೇನು ಕಷ್ಟ ಅಂದಾಗ…

ಹೌದಪ್ಪಾ, ಕಷ್ಟ ಇಲ್ಲ. ಇಷ್ಟು ದಿನ ನನ್ನ ಮಕ್ಕಳಿಗಾಗಿ ದುಡಿತಿದ್ದೆ. ಈಗ ನನಗಾಗಿ ನನ್ನ ಹೆಂಡತಿಗಾಗಿ ದುಡಿಯಬೇಕು.

ಇಷ್ಟು ದಿನ ಸಂಪಾದಿಸಿದ್ದರಲ್ಲಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದೆ. ಕೆಲಸ ಕೊಡಿಸಿ, ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆ ಮಾಡಿಸಿದೆ. ಮಗನನ್ನು ವಿದೇಶಕ್ಕೆ ಕಳಿಸಿ ಓದಿಸಿದೆ. ಅವನು ಅಲ್ಲೇ ಸೆಟಲ್ ಆದ. ಎಲ್ಲಾ ಹಣ ಮಕ್ಕಳ ಭವಿಷ್ಯಕ್ಕಾಗಿ ಖರ್ಚಾಯ್ತು.

ಮಕ್ಕಳ ಹತ್ತಿರ ಹಣ ಕೇಳಲು ಮನಸ್ಸು ಬರುತ್ತಿಲ್ಲ. ಇಷ್ಟು ದಿನ ಮಕ್ಕಳ ಪೋಷಣೆಯಲ್ಲಿದ್ದೆ. ಈಗ ನನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು .

ವಯಸ್ಸಾದ ನನಗೆ ಎಲ್ಲಿ ಕೆಲಸ ಸಿಗುತ್ತದೆ ನನಗೆ? ಅದಕ್ಕೆ ಇಲ್ಲಿ ಕೆಲಸ ಖಾಲಿ ಇತ್ತು. ಬಾಸ್ ಹತ್ತಿರ ಮೊದಲೇ ಮಾತನಾಡಿದ್ದೆ. ನನ್ನ ಕಂಪನಿಯ ಕಾವಲುಗಾರನಾಗಲು ನನಗೆ ಮುಜುಗರವಿಲ್ಲ ಎಂದು ಹ್ಯಾಟ್ ಹಾಕಿ ಬಿಸಿಲಿನಲ್ಲಿ ಗೇಟ್ ಬಳಿ ನಿಂತ. ಅಲ್ಲಿನವರೆಲ್ಲರ ಕಣ್ಣುಗಳು ತೇವ ಗೊಂಡವು.

ಇವರು ಮಾತ್ರವಲ್ಲ ಎಷ್ಟೋ ಬಡ ಅಪ್ಪಂದಿರಿಗೆ ವಯಸ್ಸಾದರೂ ಜವಾಬ್ದಾರಿಗಳು ಕಡಿಮೆಯಾಗದೆ ಉಳಿದು ಕೊಂಡು ಬಿಡುತ್ತವೆ. ಪಾಪ ಅವರಿಗಾಗಿ ಬದುಕುವುದೇ ಇಲ್ಲ. ಸದಾ ಕುಟುಂಬಕ್ಕಾಗಿಯೇ ಮುಡಿಪು ಜೀವನ.

Leave a Reply

Your email address will not be published. Required fields are marked *