ಒಬ್ಬರೇ ಹಕ್ಕಿಯಂತೆ ಹಾರುವ ಕನಸು ಇದೀಗ ನನಸಾಗುತ್ತಿದೆಯೆ….! ಒಬ್ಬರೇ ಹಾರಾಡುವ ಪುಟ್ಟ ವಿಮಾನ ಟೆಕ್ಸಾಸ್‌ನಿಂದ ಅಭಿವೃದ್ಧಿ
ಟೆಕ್ಸಾಸ್,ಆ.4(ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ)- ಮಾನವನಿಗೆ ತಾನೂ ಒಂಟಿಯಾಗಿ ಹಕ್ಕಿಯಂತೆ ಹಾರುವ
ಕನಸು ಇನ್ನೇನು ನನಸಾಗುತ್ತಿದೆಯೆ.
ಹೌದು, ಸ್ಕೂಟರ್, ಕಾರು ಮತ್ತು ಬಸ್ಸುಗಳು ವಿದ್ಯುತ್‌ಮಯವಾಗುತ್ತಿವೆ. ಹಾಗೆಯೇ ಪರಿಸರ ಸ್ನೇಹಿ ವಿದ್ಯುತ್
ವಾಹನಗಳು ಜನಪ್ರಿಯವಾಗುತ್ತಿವೆ. ಇದೇ ವೇಳೆ ವಿದ್ಯುತ್‌ನಿಂದ ಚಲಿಸುವ ಪುಟ್ಟ ವಿಮಾನವೊಂದನ್ನು ಅಮೆರಿಕದಲ್ಲಿ
ಅಭಿವೃದ್ಧಿಗೊಳಿಸಲಾಗಿದೆ.
ಅಮೆರಿಕದ ಟೆಕ್ಸಾಸ್‌ನ ನವೋದ್ಯಮ ಕಂಪನಿಯೊಂದು ಏಕ ಆಸನದ ಎಲೆಕ್ಟ್ರಿಕ್ ಏರ್‌ಕ್ರಾಫ್ಟ್ ಅಭಿವೃದ್ಧಿಗೊಳಿಸಿದೆ.
ಇದು ಮನರಂಜನೆ ಮತ್ತು ಪ್ರಯಾಣಕ್ಕೆ ಯೋಗ್ಯವಾಗಿದೆ.
ವೈಮಾಂತರಿಕ್ಷ ಕ್ಷೇತ್ರದ ಮುಂಚೂಣಿ ಸಂಸ್ಥೆ ಬೋಯಿಂಗ್ ಕೋ ಅಂಡ್ ಏರ್‌ಬಸ್ ಈ ಯೋಜನೆಗೆ ಸಾಥ್
ನೀಡಿದೆ. ಈ ಹೊಸ ವಿಮಾನಕ್ಕೆ ಹೆಕ್ಸಾ ಎಂಬ ಹೆಸರಿಡಲಾಗಿದೆ. ಇದು ಲಂಬವಾಗಿ ಮೇಲೇರುತ್ತದೆ ಹಾಗೂ
ಸುಲಭವಾಗಿ ಕೆಳಗಿಳಿಯುತ್ತದೆ.
ಈ ವಿಮಾನ ಚಾಲನೆ ಮಾಡಲು ಪೈಲೆಟ್ಗೆ ಲೈಸನ್ಸ್ ಬೇಕಿಲ್ಲ. ಏಕೆಂದರೆ ಇದು ಜಾಯ್ಸ್ಟಿಕ್‌ನಿಂದ ನಿಯಂತ್ರಿಸಲ್ಪಡುತ್ತದೆ.
ಅತ್ಯಂತ ಲಘು ವಿಮಾನಕ್ಕೆ ಅನೇಕ ತಿರುಗುವ ರೋಟರ್‌ಗಳನ್ನು ಅಳವಡಿಸಲಾಗಿದ್ದು, ಮೇಲೆತ್ತಲು ಸಹಕಾರಿಯಾಗಿದೆ.
ಇದು ಮಾನವರಹಿತ ಡ್ರೋಣ್ ಗಳು ಮತ್ತು ಹಾರುವ ಯಂತ್ರ ಗಳನ್ನು ಹೊಲುತ್ತದೆ ಯಾರೂ ಇದರ ಕಾರ್ಯ
ನಿರ್ವಹಣೆ ಭಿನ್ನ. ಇದು ತುಂಬಾ ಹಗುರದ ಆಲ್ಪಾ ಲೈಟ್ ವಿಮಾನ, ಇದರ ತೂಕ 196 ಕೆಜಿ. ಗಂಟೆಗೆ 65
ಕಿಲೋಮೀಟರ್ ವೇಗದಲ್ಲಿ ಇದು ಹಾರಬಲ್ಲದು.
18 ರೋಟರ್‌ಗಳ ಹೆಕ್ಸಾ ಅಪಾಯದ ಸಂದರ್ಭದಲ್ಲಿ ನೀರಿನಲ್ಲಿ ತೇಲುತ್ತದೆ. ಪೈಲೆಟ್ ಸುರಕ್ಷತೆಗಾಗಿ ಪ್ಯಾರಾಚೂಟ್
ಸೌಲಭ್ಯ ಸಹ ಇದೆ ಎನ್ನುತ್ತಾರೆ ಇದನ್ನು ಅಭಿವೃದ್ಧಿ ಗೊಳಿಸಿರುವ ಲಿಫ್ಟ್ ಸಂಸ್ಥೆಯ ಸಂಸ್ಥಾಪಕ ಮ್ಯಾಟ್ ಚೆಸೆನ್.
ಈ ವರ್ಷಾಂತ್ಯದಲ್ಲಿ ಅಮೆರಿಕದ ಪ್ರಮುಖ ನಗರ ಗಳಿಗೆ ಹಾಕಿ ವಿಮಾನವನ್ನು ಮಾರಾಟ ಮಾಡಲು ಮ್ಯಾಟ್
ಉದ್ದೇಶಿಸಿದ್ದಾರೆ. ಈ ಪುಟ್ಟ ವಿಮಾನ ಚಾಲನೆ ಮಾಡಲು ಚಾಲಕರು ಅಥವಾ ಪ್ರಯಾಣಿಕರಿಗೆ ಕೆಲ ಗಂಟೆಗಳ ಕಾಲ
ತರಬೇತಿ ನೀಡಲಾಗುತ್ತದೆ.
ಏಕ ವ್ಯಕ್ತಿಯ ಪ್ರಯಾಣಕ್ಕೆ ಇದು ಸೂಕ್ತ. ಟ್ರಾಫಿಕ್ ಸಮಸ್ಯೆ ಇರುವ ನಗರಗಳಲ್ಲೂ ಪ್ರಯಾಣಕ್ಕೆ ಇದು ತುಂಬಾ
ಸಹಕಾರಿ.