ಒಂದು ವಿಚಿತ್ರ ಕತೆ

ಒಂದು ಕತ್ತೆಯನ್ನು ಮರಕ್ಕೆ ಕಟ್ಟಲಾಗಿತ್ತು …

ಒಂದು ದೆವ್ವವು ಬಂದು ಕತ್ತೆಯನ್ನು ಬಿಚ್ಚಿತು.

ಕತ್ತೆ ಒಂದು ಹೊಲವನ್ನು ಪ್ರವೇಶಿಸಿ ಬೆಳೆಯನ್ನು ತಿಂದು ಹಾಳುಗೆಡವಿತು.

ಇದನ್ನು ನೋಡಿದ ಆ ಹೊಲದ ರೈತನ ಹೆಂಡತಿ ಕೋಪಗೊಂಡು ಕತ್ತೆಗೆ ಗುಂಡು ಹಾರಿಸಿದಳು.

ಅದರ ಶವವನ್ನು ನೋಡಿದ ಕತ್ತೆಯ ಮಾಲೀಕ ಅವನ ಕೋಪವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಕೂಡಲೆ ಮಹಿಳೆಯನ್ನು ಗುಂಡಿಕ್ಕಿ ಕೊಂದ.

ತನ್ನ ಹೆಂಡತಿಯ ಹತ್ಯೆ ನೋಡಿದ ಬೇಸರಗೊಂಡ ರೈತ ಕತ್ತೆಯ ಮಾಲೀಕನನ್ನು ಕೊಂದ.

ಸುದ್ದಿಯನ್ನು ಕೇಳಿದ ಕತ್ತೆಯ ಮಾಲೀಕನ ಹೆಂಡತಿ ರೈತ ನರಕದಲ್ಲಿ ಸಾಯಲೆಂದು ಶಪಿಸುತ್ತಾ ಆ ರೈತನ ಮನೆಯನ್ನು ಸುಟ್ಟು ಆ ಮೂಲಕ ಗಂಡನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ತನ್ನ ಮಕ್ಕಳನ್ನು ಕೇಳಿಕೊಂಡಳು.

ತನ್ನ ಸುಟ್ಟ ಮನೆಯನ್ನು ನೋಡಿದ ರೈತ ಕ್ರೋಧಗೊಂಡು ಕತ್ತೆ ಮಾಲೀಕನ ಹೆಂಡತಿ ಮತ್ತು ಪುತ್ರರನ್ನು ಕೊಂದನು.

ನಂತರ ರೈತನು ತೀವ್ರ ಪಶ್ಚಾತ್ತಾಪ ಪಟ್ಟನು ಮತ್ತು ಈ ಅನಾಹುತ ಏಕೆ ಸಂಭವಿಸಿತು ಎಂದು ಎದುರಿಗಿದ್ದ ದೆವ್ವವನ್ನು ಕೇಳಿದನು.

ದೆವ್ವವು ಉತ್ತರಿಸಿ “ನಾನು ಕತ್ತೆ ಬಿಚ್ಚುವುದನ್ನು ಬಿಟ್ಟರೆ ಏನನ್ನೂ ಮಾಡಿಲ್ಲ…. ಆದರೆ ನೀವೆಲ್ಲರೂ ಯೋಚಿಸದೆ ಪ್ರತಿಕ್ರಿಯಿಸಿದಿರಿ ಮತ್ತು ನಿಮ್ಮಲ್ಲಿರುವ ಕಟ್ಟಿರುವ ದೆವ್ವವನ್ನು ಬಿಚ್ಚಿಬಿಟ್ಟಿರಿ”

ಮುಂದಿನ ಬಾರಿ ತಕ್ಷಣವೇ ಪ್ರತಿಕ್ರಿಯಿಸುವ ಮೊದಲು ಮತ್ತು ಯಾವುದೇ ಸೇಡಿನ ಭಾವವನ್ನು ಹೊಂದುವ ಮೊದಲು ಪರಿಸ್ಥಿತಿಯನ್ನು ಶಾಂತವಾಗಿ ಪರಿಶೀಲಿಸಿ.

ಪ್ರತಿದಿನವೂ ನ್ಯೂಸ್ ಚಾನೆಲ್‌ಗಳು ಮತ್ತು ಸಮೂಹ ಮಾಧ್ಯಮಗಳು ಕೆಲವು ಕತ್ತೆಗಳನ್ನು ಬಿಚ್ಚುತ್ತಿರುತ್ತವೆ…

ಇದನ್ನು ನಾವೆಲ್ಲರೂ ಕಿಂಚಿತ್ತೂ ಯೋಚಿಸದೇ ಪ್ರತಿಕ್ರಿಯಿಸುತ್ತೇವೆ.

ಇದರಿಂದಾಗಿಯೆ ವಾಟ್ಸಾಪ್ ಗ್ರೂಪ್ ನ ಸದಸ್ಯರು ತಮ್ಮ ನಡುವೆ ಮನಸ್ತಾಪ ಮತ್ತು ಜಗಳವನ್ನು ಮಾಡಿಕೊಳ್ಳುತ್ತಾರೆ.

ಸ್ನೇಹಿತರೇ… ಒಟ್ಟಿಗೆ ಇರಿ ಮತ್ತು ಸಂತೋಷವಾಗಿರಿ.

ನೆನಪಿಡಿ: ಸಂಬಂಧಗಳನ್ನು ಪ್ರಚೋದಿಸುವುದು ಮತ್ತು ಮುರಿಯುವುದು ತಂಬಾ ಸುಲಭ ಆದರೆ ಸಂಘಟಿತವಾಗಿ ಉಳಿಯುವುದು ಯಾವಾಗಲೂ ಕಷ್ಟ.

ಈ ಕತೆ ಅರ್ಥವಾಯಿತೆಂದು ಭಾವಿಸುವೆ.

Leave a Reply

Your email address will not be published. Required fields are marked *