ಒಂದು ವಾರ ಇವೆಲ್ಲಾ ” ಬಂದ್ ” ; ರಾಜ್ಯ ಸರ್ಕಾರದ ಮಹತ್ವದ ಕ್ರಮ
ನಾಳೆಯಿಂದಲೇ ರಾಜ್ಯಾದ್ಯಂತ ಸಿನೆಮಾ ಮಂದಿರ,ಮದುವೆ ಸಮಾರಂಭ,ಪಬ್ ಹಾಗೂ ಬಾರ್,ಇತರೆ ಕ್ಲಬ್ ಗಳು, ಹಾಗೂ ಮಾಲ್ ಗಳು ಅಥವಾ ಯಾವುದೇ ಸಮಾರಂಭಗಳು,ಕಾಲೇಜು ಹಾಗೂ ಶಾಲೆಗಳು ಬಂದ್ ಆಗಲಿವೆ.
ರಾಜ್ಯ ಸರ್ಕಾರ ಮಹತ್ವದ ಆದೇಶದ ಮೇರೆಗೆ
ಕ್ರೀಡಾ ಕಾರ್ಯಕ್ರಮಗಳು ಸೇರಿ ಇತರೆ ಗುಂಪು ಕಾರ್ಯಕ್ರಮ ಸಹ ಬಂದ್ ಆಗಲಿವೆ.
ರಾಜ್ಯ ಸರ್ಕಾರ ಇದೀಗ ಮಹತ್ವದ ಆದೇಶ ಹೊರಡಿಸಿದೆ. ಪರೀಕ್ಷಾ ದಿನಾಂಕ ಬದಲಾವಣೆ ಇಲ್ಲ. ನಡೆಯುತ್ತಿರುವ ಪರೀಕ್ಷೆಗಳು ಎಂದಿನಂತೆ ಮುಂದುವರೆಯುತ್ತವೆ.
ಮುಖ್ಯಮಂತ್ರಿ ಬಿ.ಎಸ್. ಎಡೆಯೂರಪ್ಪ ಇಂದು ಈ ಕುರಿತು ಅಧಿಕೃತ ಪ್ರಕಟಣೆ ನೀಡಿದ್ದಾರೆ.
ಆದರೆ, ಈ ಬಂದ್ ನಲ್ಲಿ ಜಿಮ್ ಹಾಗೂ ಸ್ವಿಮ್ಮಿಂಗ್ ಪೂಲ್ ಗಳು ಸಹ ಸೇರಿವೆ.
ವಾರದ ಬಳಿಕವೂ ಈ ಬಂದ್ ಮುಂದುವರಿಸಬೇಕೇ ಅಥವಾ ಬೇಡವೇ ಎಂಬುದನ್ನು ಎಂಬುದನ್ನು ನಿರ್ಧರಿಸಿ ಮತ್ತೆ ಪ್ರಕಟಿಸಲಾಗುವುದು.
ಪೂರ್ವ ನಿಗದಿತ ಮದುವೆ ನಡೆಸುವುದಾದರೆ ನೂರಕ್ಕೂ ಹೆಚ್ಚು ಜನ ಸೇರುವಂತಿಲ್ಲ.