ಒಂದು ಅಪೂರ್ವ ಪ್ರೇಮ ಕಥೆಗೆ ಸಾಕ್ಷಿಯಾಗಿ ನಿಂತಿರುವ ಮದಲಿಂಗನ ಕಣಿವೆ…..

ಮದಲಿಂಗನ ಕಣಿವೆ ಒಂದು ನಿಸ್ವಾರ್ಥ ಪ್ರೇಮ ಕಥೆಗೆ ಸಾಕ್ಷಿಯಾಗಿ ನಿಂತಿದೆ,ತುಮಕೂರ ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಸಮೀಪದಲ್ಲಿ ಈ ಕಣಿವೆ ಇದೆ.ಮದಲಿಂಗನ ಗುಡ್ಡದಿಂದ ಪ್ರಾರಂಭವಾಗುವ ಗಿರಿವನಗಳ ಸಾಲುಗಳಿವೆ , ಮಳೆಗಾಲದ‌ ದಿನದಲ್ಲಂತೂ ಈ ದೃಶ್ಯವನ್ನು ನೋಡುವುದೆ ಕಣ್ಣಿಗೆ ಒಂದು ಹಬ್ಬ, ಅಚ್ಚ – ಹಸಿರಿನಿಂದ ಕಂಗೊಳಿಸುತ್ತದೆ ಮೊಡವನ್ನು ತಬ್ಬಿರುವಂತೆ ಕಾಣಿಸುತ್ತದೆ, ” ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ ಎನ್ ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪನಿಂದಳೋ,” ಪ್ರಕೃತಿ ದೇವಿ ಗಿರಿಯ ರೂಪವನ್ನು ತಾಳಿನಿಂತಿರುವಂತೆ ಕಾಣಿಸುತ್ತದೆ ಎಂದು ಪಂಜೆ ಮಂಗೇಶರಾಯರು ಪ್ರಕೃತಿಯನ್ನು ಕುರಿತು ವರ್ಣಿಸಿದ್ದಾರೆ, ಆ ವರ್ಣನೆ ಈ ಬೆಟ್ಟಗಳ ಸಾಲಿಗೆ ಅನ್ವಯಿಸುತ್ತದೆ,

ಚಳಿಗಾಲದಲ್ಲಂತೂ ಹಿಮ ಸುರಿಯುತ್ತಿರುವ ದೃಶ್ಯ ನವ ವಧು – ವರರಿಗೆ , ಪ್ರೇಮಿಗಳಿಗೆ ಕಣ್ಮನವನ್ನು ಸುರೆಗೊಳಿಸುವಂತಹ ದೃಶ್ಯ ಅದು, ಹಸಿರನ್ನೇ ಹಾಸಿ ಹಸಿರನ್ನೇ ಹೊದ್ದಿರುವ ಬೆಟ್ಟಗಳ ಸಾಲು, ಸುತ್ತ ಕಣಿವೆಯನ್ನು ದಾಟಿ ಹೋದರೆ ಜಾನೇಹಾರು , ಅಜ್ಜಿಗುಡ್ಡ, ಮದನಮಡು ಎಂಬ ಸ್ಥಳಗಳನ್ನು ಕಾಣಬಹುದು…
ಪ್ರೇಮ ಕಾವ್ಯದ ಪ್ರತೀಕವಾದ ಮದಲಿಂಗನ ಕಣಿವೆ ಆ ಮಾರ್ಗದಲ್ಲಿ ಸಾಗುವವರಿಗೆ ಆ ಮದಲಿಂಗನ ಪ್ರೇಮ ಕಥೆ ನೆನಪಿಸಿಕೊಳ್ಳುವಂತೆ ಮಾಡುತ್ತದೆ,

ಸುತ್ತ ಕಣಿವೆಯನ್ನು ದಾಟಿ ಹೋದರೆ ಸಿಗುವ ಊರು ಮದಲಿಂಗನ ಊರು. ಮದಲಿಂಗ ಎಂದರೆ ಮದುವೆಯಾದ ಹೊಸ ಗಂಡು. ಈ ಮದಲಿಂಗ ಒಬ್ಬ ಸುಂದರ ತರುಣ ಗರಡಿ ಮನೆಯಲ್ಲಿ ಸಾಮಾ ಮಾಡಿ ಒಳ್ಳೆಯ ದೇಹವನ್ನು ಪಡೆದಿದ್ದನು.ಆವನು ತನ್ನ ಚೆಲುವಿಕೆಗೆ ಒಪ್ಪುವಂತಹ ಗುಣವಂತಳಾದ ಚೆಲುವೆಯನ್ನು ಚಿಕ್ಕನಾಯಕನಹಳ್ಳಿಯಲ್ಲಿ ಹಳೆಯೂರು ಆಂಜನೇಯ ಸ್ವಾಮಿ ರಥೋತ್ಸವ ಜಾತ್ರೆ ವೈಭವದಿಂದ ಪ್ರತಿ ವರ್ಷ ನಡೆಯುತ್ತದೆ, ಹೊಸದಾಗಿ ಮದುವೆಯಾದಂತಹ ಜೋಡಿಗಳು ಜಾತ್ರೆಗೆ ಬಂದು‌ ರಥ ಎಳೇದು ರಥಕ್ಕೆ ಬಾಳೆಹಣ್ಣನ್ನು ಎಸೆದರೆ ವರ್ಷ ತುಂಬುವುದರೊಳಗೆ ಅವರಿಗೆ ಸಂತಾನ ಭಾಗ್ಯ ಪ್ರಾಪ್ತೀಯಾಗುತ್ತದೆ ಎಂಬುದು ಒಂದು ಪ್ರಥಿತಿ, ಹಿಗಾಗಿ ಪ್ರತಿ ವರ್ಷ ಜಾತ್ರೆಯಲ್ಲಿ ನವದಪಂತಿಗಳೆಲ್ಲರೂ ಬಂದಿರುತ್ತಾರೆ , ಜಾತ್ರೆಯಲ್ಲಿ ಬಂದು ಬಾಳೆಹಣ್ಣನ್ನು ಎಸೆದು ರಥವನ್ನು ಎಳೆಯುತ್ತಾನೆ, ಜಾತ್ರೆಯಲ್ಲಿ ತನ್ನ ಹೆಂಡತಿ ,ನಾದಿನಿ ಮತ್ತು ಅತ್ತೇ ಗೆ ಪ್ರಿಯವಾಗಿರುವಂತ ವಸ್ತುಗಳನ್ನು ಕೊಡಿಸುತ್ತಾನೆ.ಜಾತ್ರೆ ಮುಗಿದಮೇಲೆ ಸ್ವಲ್ಪ ದಿನಗಳ ಕಾಲ ಅಲ್ಲಿಯೇ ಉಳಿದುಕ್ಕೊಳ್ಳುತ್ತಾನೆ.ಇನ್ನು ತನ್ನ ಊರಿಗೆ ಹೋಗುತ್ತಿರುವಾಗ ಹೆಂಡತಿ ಜೊತೆಯಲ್ಲಿ ಅತ್ತೇ, ನಾದಿನಿಯನ್ನು ಕೆಲುವು ದಿನಗಳ ಕಾಲ ನಮ್ಮ ಊರಿನಲ್ಲಿ ಇದ್ದುಬರುವಿರಂತೆ ಬನ್ನಿ ಎಂದು ತನ್ನ ಗಾಡಿಯಲ್ಲಿ ಕೂರಿಸಿಕೊಂಡು ಹೊಗುತ್ತಾನೆ , ತನ್ನ ನಾದಿನಿಯ ಚೆಲುವು ಸ್ವಭಾವ ಅವನನ್ನು ಬಹಳ ಆಕರ್ಷಿಸುತ್ತದೆ.ತನ್ನ ಗಂಡ ಹಾಗು ತನ್ನ ತಂಗಿಯನ್ನು ಮದುವೆಯಾಕ ಆಗಬಾರದು ಅಂತ ಯೋಚಿಸುತ್ತಾಳೆ, ನೀವು ನನ್ನ ತಂಗಿಯನ್ನು ಮದುವೆಯಾದರೆ ಒಟ್ಟಿಗೆ ಇರಬಹುದು ಎಂದು ಗಂಡನನ್ನು ಪೀಡಿಸುತ್ತಾಳೆ , ಅಕ್ಕನಿಗೆ ತಂಗಿಯನ್ನು ಬಿಟ್ಟಿರುವುದಕ್ಕೆ ಆಗ್ತಿರಲಿಲ್ಲ, ಹೀಗೆ ಗಾಡಿಯಲ್ಲಿ ‌ಹೊಗತಿರ್ತಾರೆ ಗಾಡಿ ಮುಂದೆ – ಮುಂದೆ ಸಾಗುತಿರುತ್ತೆ.ಮದಲಿಂಗನ ಆಸೆ ಕೂಡ ಚಿಗುರುತ್ತೆ. ಪ್ರಯಾಣದುದ್ದಕು ಒಬ್ಬರನ್ನೊಬ್ಬರು ತಮಾಷೆ ಮಾಡಿಕೊಂಡು ಸಾಗುತ್ತಿದ್ದರು , ಆಗ ಅಳಿಯ ಇದೆ ಸರಿಯಾದ ಸಮಯ‌ ಎಂದು ಅತ್ತೆ ಜಾಣೆನ ನನಗೆ ಮದುವೆಮಾಡಿ ಕೊಡಿ .ನಾನು ಅವಳನ್ನು ಚೆನ್ನಾಗಿ ನೋಡಕೊತಿನಿ ಅಂತ ಹೇಳುತ್ತಾನೆ.ಆಗ ಅತ್ತೆ ನಿನ್ಏನೋ ಚೆನ್ನಾಗಿಯೇ ನೋಡಕೊತಿಯಾ ಆದರೆ ನನ್ ದೊಡ್ಡ ಮಗಳ ಬಾಳ್ ಹಾಳಾಗುತ್ತೆ ಕಣಪ್ಪಾ ಎಂದು ಹೇಳುತ್ತಾಳೆ. ಆಗ ಮಗಳು ಹೇಳುತ್ತಾಳೆ ಯಾಕ್ ಅವ್ವ ಹಿಂಗ್ಅಂತಿಯಾ.ನಿನು ಮದುವೆ ಮಾಡ್ಕೊಟ್ಟ ನೋಡು ನಾವಿಬ್ಬರು ಹೆಂಗ ಇರತಿವಿ ಅಂತ ಜಾಣೆನ ಬಿಟ್ಟು ನನಗೂ ಇರಕ್ಕ ಆಗಲ್ಲ ಅವಳನ್ನು ಇವಳಿಗೆ ಮದುವೆ ಮಾಡಿಕೊಟ್ಟಬಿಡು ಅಂತ ಮಗಳು ಕೂಡ ತನ್ನ ತಾಯಿಯನ್ನು ಬೇಡಿಕೊಳ್ಳುತ್ತಾಳೆ.ಮೊದಲು ಎಲ್ಲಾ ಚೆನ್ನಾಗಿರುತ್ತೆ ಆಮೇಲ್ ನೀನೆ ಕಷ್ಟ ಪಡಬೇಕಾಗುತ್ತದೆ. ಜಾಣೆಗೆ ಬೇರೆ ಗಂಡು ನೋಡಿ ಮದುವೆ ಮಾಡ್ತಿನಿ ಎಂದು ಹೇಳುತ್ತಾಳೆ. ಇವರ ಸಂಭಾಷಣೆ ಕೇಳಿ ಜಾಣೆ ನಿಚಿ ನಿರಾಗೂತ್ತಾಳೆ.ಇವಳಿಗೂ ತನ್ನ ಭಾವನ ಮೇಲೆ ಮನಸ್ಸಾಗುತ್ತದೆ.ಅಳಿಯ ಮಗಳು ಒತ್ತಾಯಿಸುತ್ತಿದ್ದಾರೆ ಇವರಿಗೆ ಹೇಗ್ ಹೇಳಲಿ ಏನ್ ಉತ್ತರಕೊಡಲಿ ಅಳಿಯನಿಗೆ ಜಾಣೆ ಮೇಲೆ ನಿಜವಾಗಲು ಪ್ರೀತಿ ಇದಿಯಾ ಇಲ್ವೋ ಪರೀಕ್ಷೆ ಮಾಡಬೇಕು ಎಂದು ಅಂದುಕೊಳ್ಳುತ್ತ ಸುತ್ತ ಮುತ್ತ ನೋಡತಿರುತ್ತಾಳೆ ಎದುರಿಗೆ ಒಂದು ಗುಡ್ಡ ಕಾಣಿಸುತ್ತದೆ ಅದು ಕಿರುಚಲು ಬೆಳೆದಿರುವಂತಹ ಬೆಟ್ಟ ಆಗ ಅಳಿಯನಿಗೆ ಹೇಳುತ್ತಾಳೆ ನೋಡಪ್ಪಾ ಅಳಿಮಯ್ಯ ಈ ಗುಡ್ಡನ ನೀನು ಹಿಂದ್ ಮುಂದಾಗಿ ಹತ್ತಿ ಇಳಿಬೇಕು.ನೀನು ಈ ಪರೀಕ್ಷೆಯಲ್ಲಿ ಗೆದ್ದರೆ ಜಾಣೆ ನಾ ನಿನಗೆ ಕೊಟ್ಟ ಮದುವೆ ಮಾಡ್ತಿನಿ ಅಂತ ಸವಾಲು ಹಾಕುತ್ತಾಳೆ.ಆ ಮಗಳು ಈ ಗುಡ್ಡನ ಹೇಂಗ ಹತ್ತಬೇಕು ಅವ್ವ ಇಂತ ಕಷ್ಟದ ಪರೀಕ್ಷೆ ಕೊಡಬೇಡ ಅಂತ ತನ್ನ ತಾಯಿಯನ್ನು ಕೇಳಿಕೊಳ್ಳುತ್ತಾಳೆ,ಆಗ ಅಳಿಯ ತನ್ನ ಹೆಂಡತಿಗೆ ಹೇಳುತ್ತಾನೆ ನೀ ಏನ್ ಹೇದರಬೇಡ ಅತ್ತೆ ಕೊಟ್ಟ ಪರೀಕ್ಷೆಯಲ್ಲಿ ನಾನು ಗೆದ್ದಬರತಿನಿ ನೀ ಯೋಚಿಸಬೇಡ ಅಂತ ಹೇಳಿ.ಜಾಣೆಯನ್ನು ಪಡಿಬೇಕು ಅಂತ ಗುಡ್ಡವನ್ನು ಹತ್ತಲು ಪ್ರಾರಂಭಿಸುತ್ತಾನೆ.ಒಮ್ಮೊಮ್ಮೆ ಕಲ್ಲುಗಳ ಮೇಲೆ ಕಾಲು ಇಟ್ಟು ಬೀಳುವ ತರ ಆಗಿರುತ್ತೇ ಅದನ್ನು ನೋಡಿ ನಾದಿನಿಯಾದಂತಹ ಜಾಣೆ ಭಾವನಿಗೆ ನೀವು ಇಷ್ಟ್ ಕಷ್ಟ ಪಡಬೇಡಿ ನಿಮಗ್ ಏನಾದ್ರು ಆದ್ರೆ ನಾವ್ ಯಾರು ಉಳಿಯಲ್ಲಾ ಸಾಕು ಬಿಡಿ ಹತ್ತಬೇಡಿ ಬನ್ನಿ ನನ್ನ ಆಸೆಯನ್ನು ಬಿಟ್ಟ ಬಿಡಿ ಅಕ್ಕ ನೀನು ಸುಖವಾಗಿರಿ ಅಂತ ಜೋರಾಗಿ ಕೂಗಿ ಹೇಳುತ್ತಾಳೆ .ಆಗ ಅವನು ಜಾಣೆ ನನಗೆ ಏನು ಆಗುವುದಿಲ್ಲ ಪರೀಕ್ಷೆಯಲ್ಲಿ ಗೆದ್ದು ಬಂದು ಮದುವೆಯಾಗತಿನಿ ನನಗೆ ನೀನು ಮತ್ತು ನಿಮ್ಮ ಅಕ್ಕ ಇಬ್ಬರೂ ಇಷ್ಟ ನೀವಿಬ್ಬರೂ ನನ್ನ ಎರಡೂ ಕಣ್ಣುಗಳು ಎಂದು ಕೂಗಿ ಹೇಳುತ್ತಾ ಬೆಟ್ಟ ಹತ್ತತಿರುತ್ತಾನೆ.ಹೀಗೆ ಆಯಾಸಗೊಳ್ಳುತ್ತ ಬೆಟ್ಟವನ್ನು ಹತ್ತಿ ಇಳಿಯುತಿರುತ್ತಾನೆ .ಜಾಣೆ ನಾನ್ ಗೆದ್ದೆ ನಿನ್ನನ್ನು ನಾನು ಮದುವೆ ಮಾಡಿಕೊಳ್ಳುವೆ ಅಂತ ಹೇಳುತ್ತಾ ಧ್ವನಿ ಕ್ಷಿಣಿಸುತ್ತಾ ನೀರು ಕೊಡಿ ಎಂದು ಕೇಳುತ್ತಾನೆ. ಆಗ ಅತ್ತೆ ಗಾಡಿಯಲ್ಲಿದ್ದ ನೀರಿನ ಚಂಬನ್ನು ತೆಗೆಯುವಾಗ ಕೈ ಜಾರಿ ಚಂಬು ಕೆಳಗೆ ಬಿದ್ದು ನೀರು ಮಣ್ಣು ಪಾಲಾಗುತ್ತದೆ ಅಯ್ಯೋ ಅವ್ವ ಎಂತ ಕೆಲಸ ಮಾಡಿಬಿಟ್ಟಿ ನೀರೆಲ್ಲ ಚೆಲ್ಲಿ ಹೋಯಿತು ಎಂದು ಮೊದಲನೇಯ ಮಗಳೂ ಗಾಬರಿಯಿಂದ ಕೂಗೂತ್ತಾಳೆ.ಅವನು ನೀರಿಗಾಗಿ ಹಂಬಲಿಸುತ್ತ ಹಾಗೆ ಕುಸಿದುಬಿಳುತ್ತಾನೆ ಜಾಣೆ ಹಿಡಿದುಕೊಂಡು ತನ್ನ ತೊಡೆಯ ಮೇಲೆ ಮಲಗಿಸಿಕೊಳ್ಳುತ್ತಾಳೆ.ಜಾಣೆ ನಾ ನಿನ್ನ ತೋಡೆಯ ಮೇಲೆ ಮಲಗಿದಿನಿ ನೀ ನನಗ ಸಿಕ್ಕಿದಿಯಾ ನಾನ್ ಗೆದ್ದೆ ನಿನ್ ಮೇಲೆ ಇಟ್ಟಿದ್ದ ನನ್ ಪ್ರೀತಿ ಗೆದ್ದಿತ್ತು ಅಂತ ಹೇಳೀ ಅಕ್ಕ -ತಂಗಿಇಬ್ಬರನ್ನು ತನ್ನ ತೋಳಲ್ಲಿ ಬಳಸಿಕೊಂಡು ನೀವಿಬ್ಬರೂ ನನ್ನ ಪ್ರಾಣ ಅಂತ ಹೇಳಿ ತನ್ನ ಪ್ರಾಣವನ್ನು ಬಿಡುತ್ತಾನೆ. ಭಾವ ಅಂತ ಜೋರಾಗಿ ಕೂಗಿ ಜಾಣೆ ಅಳುತ್ತಾಳೆ.ಅಯ್ಯೋ ನಮ್ಮಿಬ್ಬರನ್ನೂ ಬಿಟ್ಟು ಹೋದರಾ ಅಂತ ಹೆಂಡತಿಯು ರೋಧಿಸುತ್ತಾಳೆ.ಈ ಮೂವರ ಆಕ್ರಂದನ ಸುತ್ತಲೂ ಕಣಿವೆಗೂ ಕೇಳಿಸಿ ಅಲ್ಲಿದ್ದ ಜನರು ಇವರ ಹತ್ತಿರ ಬರುತ್ತಾರೆ ಇವರಿಗೆ ಸಮಾಧಾನ ಪಡಿಸಿ ಎಲ್ಲರೂ ಸೇರಿ ಆ ಕಣಿವೆಯಲ್ಲಿಯೇ ಮದಲಿಂಗನ ಶವ ಸಂಸ್ಕಾರ ಆಗುತ್ತದೆ.ಅಕ್ಕ – ತಂಗಿಯರಿಬ್ಬರು ಕೂಡ ಮದಲಿಂಗನನ್ನು ಕಳೆದುಕೊಳ್ಳುತ್ತಾರೆ ಈ ಘಟನೆಯನ್ನು ಸಹಿಸಲಾಗದೆ ಜಾಣೆನು ಹೋಗುವ ದಾರಿಯಲ್ಲಿ ಮಡುವಿಗೆ ಬಿದ್ದು ಸಾಯುತ್ತಾಳೆ.ಆ ಸ್ತ್ರಳವನ್ನು ” ಜಾಣೆಹಾರಾ” ಅಂತ ಕರೇಯುತ್ತಾರೆ, ಮಗಳ ‌ಮತ್ತು ಅಳಿಯನ ಸಾವನ್ನು ಅರಗಿಸಿಕೊಳ್ಳಲಾಗದೆ ಹೋಗುವ ದಾರಿಯಲ್ಲಿ ಅವಳು ಕೂಡ ಒಂದು ಹಳ್ಳಕ್ಕೆ ಬಿದ್ದು ಸಾಯುತ್ತಾಳೆ ಆ ಸ್ಥಳವನ್ನು ” ಹತ್ಯಾಳು ” ಎಂದು ಕರೆಯಲಾಗುತ್ತದೆ, ಇವರೆಲ್ಲರ ಅಗಲಿಕೆಯನ್ನು ಸಹಿಸಲಾಗದೆ ಮದಲಿಂಗನ ಹೆಂಡತಿಯು ಒಂದು ಮಡುವಿಗೆ ಬಿದ್ದು ಸಾಯುತ್ತಾಳೆ ಆ ಸ್ಥಳವನ್ನು” ಮದನಮಡು” ಎಂದು ಕರೆಯುತ್ತಾರೆ,

ಈ ವಿಶಾಲವಾದ ಬೆಟ್ಟದಷ್ಟು ಪ್ರೀತಿಯನ್ನು ತನ್ನ ಹೆಂಡತಿ ಮತ್ತು ನಾದಿನಿಯ ಮೇಲೆ ಇಟ್ಟಿದ್ದ.ಹೀಗಾಗಿ ಆ ಬೆಟ್ಟ ಪ್ರೇಮ ಕಾವ್ಯದ ಕುರುವಾಗಿದೆ.ಒಂದು ದುರಂತ ಪ್ರೇಮ ಕಥೆಗೆ ಸಾಕ್ಷಿಯಾಗಿದೆ….

ದೇವಿಕಾ ಮ್ಯಾಕಲ್
ವಿಳಾಸ -ಗೋಗಿ
ತಾ ಶಹಾಪುರ ಜಿ-ಯಾದಗಿರ

Leave a Reply

Your email address will not be published. Required fields are marked *