ಏನಿದು ಗೌಡರೇ..ಮರಿ ಮೊಮ್ಮೊಗಳ ವಯಸ್ಸಿನ ಬಾಲಕಿಯ ಬಗ್ಗೆ ಸ್ವಲ್ಪವೂ ಅನುಕಂಪ ಬೇಡವೇ?

ಜೆಡಿಎಸ್ ಚುನಾವಣಾ ಪ್ರಚಾರದ ವೇಳೆ ತಮ್ಮ ಮರಿ ಮೊಮ್ಮೊಗಳ ವಯಸ್ಸಿನ ಬಾಲಕಿಯೊಬ್ಬಳನ್ನು ಹೊರೆ ಹೊತ್ತ ರೂಪದರ್ಶಿ ತರ ದೇವೇಗೌಡರು ಬಳಸಿಕೊಂಡಿರುವುದು ಈಗ ತೀವ್ರ ಟೀಕೆಗೆ ಗುರಿಯಾಗಿದೆ.
ಪಕ್ಷಗಳು, ಚುನಾವನೆ,ಈ ರಾಜಕೀಯ ಡೊಂಬರಾಟ,ಹೊಲಸು ಎನ್ನಿಸುವ ಅರ್ಥಹೀನ ಟೀಕೆಗಳು,ಮೈತ್ರಿ,ಕಿತ್ತಾಟ…ಇವುಗಳ ಪರಿವೇ ಇಲ್ಲದ ಮುಗ್ಧ ಮನಸ್ಸಿನ ಮಕ್ಕಳನ್ನು ಹೀಗೆ ಪ್ರಚಾರದ ತೀಟೆಗೆ ಬಳಸಿಕೊಳ್ಳುವ ಪರಿ ಸರಿಯಲ್ಲ.ಪಕ್ಷ ಯಾವುದೇ ಇರಬಹುದು,..ಇಂಥ ಮಕ್ಕಳ ಬಳಕೆ ಅಪರಾಧ.
ಮಕ್ಕಳ ಹಕ್ಕುಗಳ ರಕ್ಷಣೆ,ಬಾಲಕಾರ್ಮಿಕ ಕಾಯ್ದೆ ಉಲ್ಲಂಘನೆ ಇದಕ್ಕೆ ಅನ್ವಯ ಆಗುವುದಿಲ್ಲವೇ ಎಂಬುದನ್ನು ಈಗ ಅಧಿಕಾರಿಗಳು ಹೇಳಬೇಕು.

ತಿಳುವಳಿಕೆ ಇಲ್ಲದ ಎಳಸು ವ್ಯಕ್ತಿಯೋರ್ವ ಎಂಥದ್ದು ಮಾಡಿದ್ದರೆ ಅದನ್ನು ನಿರ್ಲಕ್ಷಿಸಿ ಬಿಡಬಹುದಿತ್ತು.ಆದರೆ ದೇಶದ ಮಾಜಿ ಪ್ರಧಾನಿ, ಹಾಲಿ ಸಂಸದ ಹಾಗೂ ಒಂದುವೇಳೆ ನಿವೃತ್ತಿ ವಯಸ್ಸಿಗೆ ಸುಮ್ಮನೆ ಮನೆಯಲ್ಲಿ ಕೂತಿರುತ್ತಿದ್ದರೆ ಹೀಗೆ ಕೂತು ದಶಕಗಳೇ ಆಗುತ್ತಿದ್ದವೇನೋ..ಅಂಥ ವ್ಯಕ್ತಿ ಕನಿಷ್ಠ ಈ ಬಾಲಕಿ ಮೇಲೆ ಅನುಕಂಪ ತೋರಿಸಿ ಆಕೆಯನ್ನು ಕೇಳಗಿಳಿಸಿ ಸೌಜನ್ಯ ಮೆರೆಯಬಹುದಿತ್ತು.

ಯಾರೇ ಆಗಲಿ ಮುಗ್ಧ ಮಕ್ಕಳನ್ನು ಹೊಸಲು ರಾಜಕೀಯಕ್ಕೆ ಬಳಸಿದರೆ ಅದನ್ನು ಖಂಡಿಸುವ ಹಾಗೂ ಸ್ವಯಂ ಪ್ರೇರಿತ ದೂರು ದಾಖಸುವುದು ಕಡ್ಡಾಯವಾಗಬೇಕಿದೆ.
ದೇವೇಗೌಡರ ಈ ನಡವಳಿಕೆ ತೀವ್ರ ಟೀಕೆಗೆ ಗುರಿಯಾಗಿದ್ದು ಕಾರ್ಮಿಕ ಇಲಾಖೆ ಹಾಗೂ ಮಕ್ಕಳ ಹಕ್ಕುಗಳ ಆಯೋಗ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ನೋಡಬೇಕಿದೆ.

Leave a Reply

Your email address will not be published. Required fields are marked *