ಈಕೆ 19 ವರ್ಷಕ್ಕೇ ಪುರಸಭೆ ಸದಸ್ಯೆ..!

ಇನ್ನೂ ಓದುವ ವಯಸ್ಸು,ಆದರೂ ಜನ ಸೇವೆ ಮಾಡುವ ಹುಮ್ಮಸ್ಸು.ಕಡೆಗೂ ತನ್ನ 19 ನೇಯ ವಯಸ್ಸಿನಲ್ಲೇ ಚುನಾವಣೆಗೆ ಸ್ಪರ್ಧಿಸಿದ್ದರು..ಮತ್ತು ಜಯಗಳಿಸಿ ಪುರಸಭಾ ಸದಸ್ಯ ರಾಗಿ ಆಯ್ಕೆಯೂ ಆದರೂ.
ಹೌದು,ಇದು ಕೋಲಾರದ ಅಂತಿಮ ವರ್ಷದ BA ವಿದ್ಯಾರ್ಥಿನಿ ಸುಮಿತ್ರ ಅವರ ಹೆಗ್ಗಳಿಕೆ.
ಮಾಲೂರು ಪಟ್ಟಣದ 27 ನೆಯ ವಾರ್ಡ್ನಿಂದ ಬಿಜೆಪಿ ಅಭ್ಯರ್ಥಿ ಯಾಗಿ ಕಣಕ್ಕೆ ಇಳಿದಿದ್ದ ಅವರು ಜೆಡಿಎಸ್ ಅಭ್ಯರ್ಥಿ ವಿರುದ್ಧ 373 ಮತಗಳ ಅತರದಿಂದ ಜಯಗಳಿಸಿದ್ದಾರೆ.
ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ಇತಿಹಾಸದಲ್ಲೇ ಈ ಗೆಲುವು ದಾಖಲೆ ಆಗಿದೆ.
ಅತ್ಯಂತ ಕಿರಿಯ ವಯಸ್ಸಿನ ಪುರಸಭಾ ಸದಸ್ಯರು ಎಂಬ ಕೀರ್ತಿಗೆ ಸುಮಿತ್ರ ಪಾತ್ರರಾಗಿದ್ದಾರೆ.

Leave a Reply

Your email address will not be published. Required fields are marked *