ಎಲ್ಲಿದ್ದೀಯಮ್ಮ ರಮ್ಯ…? ಇನ್ನುವ ಮೂಲಕ ಪದ್ಮಾವತಿ ಗೆ ಟಾಂಗ್ ನೀಡಿದ ಶಿಲ್ಪಾ ಗಣೇಶ್

ಇಲ್ಲಿಯವರೆಗೆ “ಎಲ್ಲಿದ್ದೀಯಪ್ಪ ನಿಖಿಲ್‌?” ಎಲ್ಲೆಡೆ ಸಾಮಾಜಿಕ ಜಾಲ ತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಹೇಗೆ ಹರಿದಾಡಿತು ಎಂಬುದುಎಲ್ಲರಿಗೂ ತಿಳಿದ ವಿಷಯ. ಅದರಲ್ಲೂ ಸುಮಲತಾ
ವಿರುದ್ದ ನಿಖಿಲ್ ಕುಮಾರಸ್ವಾಮಿ ಅತ್ಯಂತ ಹೀನಾಯವಾಗಿ ಸೋತು ಹೋದ ಬಳಿಕವಂತೂ ಇಂತಹ ಇನ್ನಷ್ಟು ಅಣಕಗಳು ವ್ಯಾಟ್ಸಪ್ಗಳಲ್ಲಿ ಹಾಗೂ ಫೇಸ್‌ಬುಕ್ಗಳಲ್ಲಿ ನವನವೀನವಾಗಿ, ಚಿತ್ರವಿಚಿತ್ರ ಹಾಗೂ ಆಕರ್ಷಕವಾಗಿ, ಟೀಕೆ ಹಾಗೂ ವ್ಯಂಗ್ಯಗಳೊಂದಿಗೆ ಹೆಚ್.ಡಿ.ರೇವಣ್ಣ ಅವರ ಹೇಳಿಕೆ ಹಾಗೂ ಶಿವರಾಮೇಗೌಡಅವರ ಮಾತುಗಳ ತುಣುಕುಗಳು ಸಹ ಮೂಡಿಬರುತ್ತಿವೆ.

ಇದೀಗ ನಟಿ ಹಾಗೂ ಕಾಂಗ್ರೆಸ್‌ನ ಪ್ರಚಾರ ಸಮಿತಿಯವಕ್ತಾರೆ ರಮ್ಯಾ ಅವರ ಸರದಿ. ಮೋದಿಯವರನ್ನು ಸಹ ಅನೇಕ ಬಾರಿ ಟೀಕಿಸಿ ತೀವ್ರ ಟೀಕೆಗೆ ಗುರಿಯಾಗಿದ್ದ ರಮ್ಯಾ ಅವರನ್ನು ನಟ ಗಣೇಶ್‌ ಪತ್ನಿ ಶಿಲ್ಪಾ ಅನೇಕ ಬಾರಿ ಕುಟುಕಿದ್ದರು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಕೇಂದ್ರದಲ್ಲೂ ಸಹ ಹೀನಾಯ ಸೋಲು ಕಂಡಿದೆ. ಇದು ತಕ್ಕ ಸಮಯವೆಂದು ರಮ್ಯಾ ಈಹಿಂದೆ ಆಡಿದ್ದ ಅಸಂಬದ್ಧ ಮಾತುಗಳು ಹಾಗೂ ಟೀಕೆಗಳಿಗೆ “ಕೌಂಟರ್” ಹಾಗೂ ಭಾರೀ ಹೊಡೆತವನ್ನೇ ಕೊಟ್ಟಿದ್ದಾರೆ. ಅವರು ಈಗ “ಎಲ್ಲಿದ್ದೀಯಮ್ಮ ರಮ್ಯಾ?…
ಎಲ್ಲಿ ನಿಮ್ಮ ಪಕ್ಷದ ಅಧ್ಯಕ್ಷ ರಾಹುಲ್?” ಎಂದು ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.
ಇದೀಗ ಮೋದಿ ಅಬ್ಬರದ ಫಲಿತಾಂಶದ ಬಳಿಕ ಗಪ್‌ಚುಪ್ ಆಗಿ ಸದ್ದಿಲ್ಲದೇ ಕುಳಿತಿರುವ ರಮ್ಯ ಇದಕ್ಕಿನ್ನೂ ಪ್ರತಿಕ್ರಿಯಿಸಿ ಟ್ವೀಟ್ ಮಾಡಿಲ್ಲ.

ನಿಮ್ಮ ಫೇಕ್ ಅಕೌಂಟ್ ಫೇಸ್ಬುಕ್ ಸೈನ್ಯ ಎಲ್ಲಿಹೋಯಿತು?, ತಳಬುಡವಿಲ್ಲದ ಟ್ವೀಟ್‌ಗಳು ಎಲ್ಲಿ ಹೋದವು?ಸಮಯ ಸಂದರ್ಭಗಳು ಹೀಗೇ ಇರುವುದಿಲ್ಲ. ಹಾಗಾಗಿ ಟ್ವೀಟ್ ಮಾಡುವಾಗ ಮತ್ತು ಮೋದಿಯವರಂತಹ ಮೇರು ವ್ಯಕ್ತಿತ್ವದ ನಾಯಕರುಗಳನ್ನು ಟೀಕಿಸುವ ಮೊದಲು ನೀವು ಒಂದಿಷ್ಟು ಯೋಚಿಸಿದ್ದರೆ ಈಗ ಚುನಾವಣಾ ಫಲಿತಾಂಶದ ಬಳಿಕ ಭೂಗತವಾಗುವ ಪ್ರಮೇಯವೇ ಇರಲಿಲ್ಲ ಅಲ್ಲವೇ ಎಂದು ಶಿಲ್ಪಾ ಗಣೇಶ್ ಟ್ವೀಟ್ ಮಾಡಿದ್ದಾರೆ. ಅದೀಗ ಭಾರೀ ವೈರಲ್ ಆಗಿದೆ.

Leave a Reply

Your email address will not be published. Required fields are marked *