ಎಲೆಗಳಲ್ಲಿ ಅಡಗಿರುವ ದೇವನದಾರು?

ಭಗವಂತನು ಸಕಲ ಚರ-ಚರಾ ವಸ್ತುಗಳಲ್ಲಿ ಇದ್ದಾನೆ ಎನ್ನುವುದು ನಮ್ಮ ಹಿಂದೂಗಳ ನಂಬಿಕೆ. ಇದೇ ಭಕ್ತ ಪ್ರಹಲ್ಲಾದನ ನಂಬಿಕೆಯೂ ಆಗಿತ್ತು. ಹಾಗಾಗಿಯೇ ಆತನೂ ಇದನ್ನೇ ಪ್ರತಿಪಾದಿಸುತ್ತಾ ತನ್ನ ತಂದೆ ಹಿರಣ್ಯ ಕಷಿಪುವಿಗೆ ಕಂಬದಲ್ಲೂ ಭಗವಂತ ಇದ್ದಾನೆ ಎಂಬ ಮಾತನ್ನು ಹೇಳುತ್ತಾನೆ. ಇದನ್ನು ಕೇಳಿ ಕೋಪಾವಿಷ್ಟನಾದ ಹಿರಣ್ಯಕಶಿಪು ಕಂಬವನ್ನು ತನ್ನ ಗದೆಯಿಂದ ಹೊಡೆಯಲು ಅಲ್ಲಿ ಸಾಕ್ಷಾತ್ ಶ್ರೀ ನರಸಿಂಹ ದೇವರು ಅವತರಿಸಿದ ಕಥೆಯನ್ನು ನಾನು ನೀವೆಲ್ಲರೂ ಕೇಳಿದ್ದೇವೆ.

ಭಗವಂತ ಅಣು-ರೇಣು-ತೃಣ-ಕಾಷ್ಟದಲ್ಲಿಯೂ ಇದ್ದಾನೆ ಎಂಬುದನ್ನು ನಾವು ಈಗಲೂ ಕಾಣಬಹುದು ಎಂಬ ಸತ್ಯವು ನಮಗೆ ರೋಮಾಂಚನವನ್ನು ಉಂಟು ಮಾಡುವ ಸಂಗತಿಯು ಆಂದ್ರ ಪ್ರದೇಶದ ಶ್ರೀ ಶೈಲ ಅರಣ್ಯದಲ್ಲಿ ಕಂಡುಬಂದಿದೆ. ಆ ಅರಣ್ಯದಲ್ಲಿ ಕಂಡುಬರುವ ಒಂದು ರೀತಿಯ ವಿಶಿಷ್ಟ ಗಿಡದ ಎಲ್ಲಾ ಎಲೆಗಳಲ್ಲಿಯೂ ಶ್ರೀ ಹನುಮಂತನ ಚಿತ್ರವೂ ಮೂಡಿರುವುದು ಸೊಜಿಗವನ್ನು ಉಂಟುಮಾಡಿದೆ. ಒಂದು ರೀತಿಯಲ್ಲಿ ಪೈಂಟ್ ಮಾಡಿರುವಂತೆ ಮೂಡಿರುವುದು ಅದ್ಭುತ, ಅಪರೊಪದ ಮತ್ತು ಊಹೆಗೂ ಮೀರಿದ ಚಿತ್ರಣವಿದೆ.

ಆಂಧ್ರಪ್ರದೇಶದ ಶ್ರೀಶೈಲ ಅರಣ್ಯದಲ್ಲಿ ಕಂಡುಬರುವ ಹನುಮಂತ ವೀರ ಹೆಸರಿನ ಎಲ್ಲಾ ಎಲೆಗಳಲ್ಲಿಯೂ ಶ್ರೀ ಹನುಮಾನ್ ಜೀ ಅವರ ಅದ್ಭುತ, ಅಪರೂಪದ, ಊಹೆಗೂ ನಿಲುಕದ ಚಿತ್ರಣವಿದೆ.

ಹೀಗೆ ನಮ್ಮ ಸುತ್ತಲೂ ಅನೇಕ ವಿಷಯಗಳು ಇದ್ದು ಅವುಗಳನ್ನು ನೋಡುವ ಭಾಗ್ಯ ನಮ್ಮದಾಗಬೇಕಷ್ಟೆ. ನಮ್ಮ ಹಿಂದೂ ಸಂಸ್ಕೃತಿಯ ರಾಮಾಯಣ-ಮಹಾಭಾರತವು ಸರ್ವ ಕಾಲಕ್ಕೂ ಮಾನ್ಯತೆ ಪಡೆದಿದೆ ಮತ್ತು ಪದೇ ಪದೇ ಇಂತಹ ಸೊಜಿಗಗಳ ಮೂಲಕ ಅದು ಮತ್ತೊಮ್ಮೆ ಸಾಬೀತು ಪಡಿಸುತ್ತಿದೆ.

-ಡಾ. ಸಿ. ಕೆ. ಆನಂದತೀರ್ಥಾಚಾರ್, ದಾವಣಗೆರೆ

Leave a Reply

Your email address will not be published. Required fields are marked *