ಎಟಿಎಂ ಗಳಲ್ಲಿ ಹಣ ಇಲ್ಲದಿದ್ದರೆ ಬ್ಯಾಂಕ್ ಗಳಿಗೆ ದಂಡ:RBI ಎಚ್ಚರಿಕೆ
ತುರ್ತು ಸಂರ್ಭಗಳಲ್ಲಿ ನಾವು ಎಟಿಎಂ ಗಳಲ್ಲಿಯೂ ಹಣ ಸಿಗದೆ ಪರದಾಡಿದ ಸಂಧರ್ಭ ಎಲ್ಲರಿಗೂ ಒಂದಿಲ್ಲೊಂದು ಬಾರಿ ಅನುಭವಕ್ಕೆ ಬಂದಿರುತ್ತದೆ. ಇಂಥ ಪ್ರಸಂಗಗಳಲ್ಲಿ ಬ್ಯಾಂಕ್ ಗಳ ನಿರ್ಲಕ್ಷಕ್ಕೆ ಹಿಡಿ ಶಾಪ ಸಹ ಹಾಕುತ್ತೇವೆ.ನಮ್ಮ ಹಣ ಪಡೆಯಲು ನಾವು ಇಂಥ ಸ್ಥಿತಿ ಎದುರಿಸಬೇಕು ಎಂದು ಗೊಣಗಿಕೊಂಡು ಬಂದಿರುತ್ತೇವೆ.
ಈಗ ಇದಕ್ಕೆ ಕಡಿವಾಣ ಬೀಳಲಿದೆ.
ಎಷ್ಟೋ ಸಂದರ್ಭಗಳಲ್ಲಿ ಅನೇಕ ದಿನಗಳ ಕಾಲ ಎಟಿಎಂ ನಲ್ಲಿ ಹಣ ಇಲ್ಲದೆ ಗ್ರಾಹಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಉಂಟು.ಆದರೆ ಇನ್ನುಮುಂದೆ ಹೀಗೆ ಆಗದು.
ಒಂದು ವೇಳೆ ಎಟಿಎಂ ಗಳು ಹಣವನ್ನ ಸದಾ ಹೊಂದಿರಲೇಬೇಕು.ಇಲ್ಲದಿದ್ದಲ್ಲಿ ಸಂಬಂಧಿಸಿದ ಬ್ಯಾಂಕ್ ಗಳಿಗೆ ದಂಡ ವಿಧಿಸಲಾಗುವುದು ಎಂದು RBI ಎಚ್ಚರಿಸಿದೆ.
ಕೇವಲ ಅನಿವಾರ್ಯ ಸಂಧರ್ಭದಲ್ಲಿ ಅದೂ ಕೇವಲ 3 ಗಂಟೆ ವರೆಗೆ ಮಾತ್ರ ಸಕಾರಣದಿಂದ ಎಟಿಎಂ ಗಳಲ್ಲಿ ಹಣ ಇಲ್ಲದೆ ಇರಬಹುದು ಅಷ್ಟೆ.
ಎಟಿಎಂ ಗಳಲ್ಲಿ ಹಣ ಇದೆಯೋ ಇಲ್ಲವೋ ಎಂಬುದನ್ನು ಸೆನ್ಸಾರ್ ಗಳ ಮೂಲಕ ಬ್ಯಾಂಕ್ ಗಳವರು ತಿಳಿದುಕೊಳ್ಳುತ್ತಾರೆ.ಹೀಗೆ ಹಣ ಖಾಲಿಯಾಗಿರುವ ಬಗ್ಗೆ ತಿಳಿದರು ಸಹ ಸಿಬ್ಬಂದಿ ನಿರ್ಲಕ್ಷ್ಯ ವಹಿಸುವುದೇ ಹೆಚ್ಚು.
ಇಂಟರ್ ಚೇಂಜ್ ಶುಲ್ಕವೂ ಸೇರಿ ಸೇವಾ ಶುಲ್ಕವನ್ನು ಸಹ ಗ್ರಾಹಕರು ಭರಿಸುವುದರಿಂದ ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ ಸಹಿಸಲು ಆಗದು ಎಂದು ಸಹ ಅರ್. ಬಿ. ಐ.ಎಚ್ಚರಿಕೆ ನೀಡಿದೆ.
ಇನ್ನುಮುಂದೆ ಯಾದರು ಗ್ರಾಹಕರಿಗೆ ಎಟಿಎಂ ಗಳ ತಡೆರಹಿತ ಸೇವೆ ಸಿಗುವುದೇ ಕಾದು ನೋಡಬೇಕಿದೆ.