ಉತ್ತರ ಕರ್ನಾಟಕದ ಸಹ್ಯಾದ್ರಿ ಬೆಟ್ಟ ಕಪ್ಪತ್ ಗುಡ್ಡ

ಎಪ್ಪತ್ತಾಗಿರಿ ನೋಡೋದಕ್ಕಿಂತ ಬಂದು ಕಪ್ಪತ್ತಗಿರಿ ನೋಡು ಎಂಬ ಮಾತಿದೆ. ಕಣ್ಣು ಹಾಯಿಸಿದಷ್ಟೂ ದೂರ ಹಸಿರಿನ ಹೊದಿಕೆ ಹೊತ್ತ ಬೆಟ್ಟಗುಡ್ಡ. ಹಲವು ಶರಣರ, ಸಿದ್ದರ ತಪೋನಿಷ್ಠೆಯ ಶಕ್ತಿಯಿಂದ ಪರಮಪಾವನವಾದ ಶ್ರಿಗಿರಿಯ ಶತಕೋಟಿ ಸಿದ್ದಗಿರಿ ಎಂದೇ ಪ್ರಸಿದ್ದಿ ಪಡೆದಿದೆ. ಇಲ್ಲಿ ನೆಲೆಸಿರುವ ಕಪ್ಪತ್ ಮಲ್ಲಯ್ಯನಿಗೆ ಶ್ರಾವಣ ಮಾಸದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತವೆ. ಶ್ರಾವಣ ಕೊನೆಯ ಗುರುವಾರ ಜರುಗುವ ಜಾತ್ರಾ ಮಹೋತ್ಸವ ನಾಡಿನ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿದೆ.

ಗದಗ ಜಿಲ್ಲೆಯ ಹಸಿರು ಹೊದಿಕೆಯ ಕಳಸ

ಉತ್ತರ ಕರ್ನಾಟಕದ ಸಹ್ಯಾದ್ರಿಯ ಪರ್ವತ ನಮ್ಮ ಗದಗ ಜಿಲ್ಲೆಯ ಕಳಸ. ಲಕ್ಷ ಲಕ್ಷ ಗಿಡ ಮೂಲಿಕೆಗಳಿರುವ ತಾಣ ಏಪ್ಪತ್ತಗಿರಿಗಿಂತ ಕಪ್ಪತಗಿರಿ ಮೇಲೆ ನಮ್ಮ ಕಪ್ಪತ್ತಗುಡ್ಡ ನೋಡಲು ಬಲು ಚಂದ ನಿಸರ್ಗದ ಮಡಿಲು ಸ್ವರ್ಗದ ಐಸಿರಿಯ ನೋಡುವ ಭಾಗ್ಯ ನಮ್ಮದು.

ಉತ್ತರ ಕರ್ನಾಟಕದ ಸಹ್ಯಾದ್ರಿ ಬೆಟ್ಟವೆಂದೇ ಕರೆಯುವ ಗದಗ ಜಿಲ್ಲೆಯ ಕಪ್ಪತ್ ಗುಡ್ಡದ ತಪ್ಪಲಿನಲ್ಲಿ ಹಸಿರ ಸಿರಿಯ ನಡುವೆ ನಾವು ಇದ್ದೇವೆ ಈಗ. ಸ್ವರ್ಗವೆಂಬುದು ಹೀಗೆ ಇರಬಹುದೇನೊ‌ ಕಾಣೆ… ಈ ಹಸಿರ ಮಡಿಲಲ್ಲಿ ಮನವಂತೂ ರೆಕ್ಕೆಯ ಹಂಗಿಲ್ಲದೆ ಹಾರುತಿದೆ.

ಸೌಂದರ್ಯವಷ್ಟೇ ಅಲ್ಲ ಇಲ್ಲಿ, ನಿಜಕ್ಕೂ ಕಪ್ಪತ್ ಗುಡ್ಡವೆಂದರೆ, ಇಲ್ಲಿ ಲಕ್ಷಾಂತರ ಸಸ್ಯಗಳ ಗಿಡಮೂಲಿಕೆಗಳು ಇಲ್ಲಿವೆ. ಸಾದು ಸನ್ಯಾಸಿಗಳು ಕೂಡ ಈ ಕಪ್ಪತ್ತಗಿರಿಯಲ್ಲಿ ತಪಸ್ಸುಗಳನ್ನು ಮಾಡಿ ಇಲ್ಲಿ ಪುಣ್ಯವನ್ನು ಪಡೆದಂತಹ ಪುಣ್ಯಾತ್ಮರು ಉದ್ಭವವಾದಂತಹ ಕಥೆಗಳಿವೆ.

ಇಲ್ಲಿ ಗಾಳಿಗುಡಿ ಬಸವಣ್ಣ ಕಪ್ಪತ್ ಮಲ್ಲಯ್ಯ ಅಂದರೆ ಭಕ್ತರಿಗೆ ಇಷ್ಟಾರ್ಥ ಈಡೇರಿಸುವ ಅದ್ಭುತ ಶಕ್ತಿ. ಕಪ್ಪತ ಗುಡ್ಡವೆಂದರೆ, ಇಲ್ಲಿ ವೈಭವ ಸಿರಿಯನ್ನು ನೋಡಲು ಬರಬೇಕು. ಸೌಂದರ್ಯಾರಾಧನೆ ಮಾಡಿ ಸಾರ್ಥಕಥೆ ಪಡೆಯಬೇಕೇ ವಿನಃ ಅದರ ವಿನಾಶಕ್ಕೆ ಪ್ರಯತ್ನಿಸಬಾರದು. ಇಲ್ಲಿಗೆ ಎಷ್ಟೋ ಜನ ಸಹ್ಯಾದ್ರಿ ಬೆಟ್ಟವೆಂದು ಖುಷಿಯಿಂದ ಹೋಗ್ತಾರೆ. ಪ್ರಕೃತಿ ಸೌಂದರ್ಯ ಸವಿಯುತ್ತಾರೆ. ಆದರೆ ವಿಪರ್ಯಾಸವೆಂದರೆ ಕೆಲವು ಕಿಡಿಗೇಡಿ ಜನರು ಅಲ್ಲಿ ಇಲ್ಲಿ ಬೆಂಕಿ ಹಚ್ಚವಂತಹ ನೀಚ ಕೆಲಸ ಮಾಡಿ, ಕಪ್ಪತಗಿರಿ ನಾಶವಾಗುವಂತರೆ ಮಾಡುತ್ತಿದ್ದಾರೆ. ಇದರ ದುಷಪರಿಣಾಮ ನಮಗೆ ಆಗುತ್ತಿದೆ. ಹೇಗೆಂದರೆ ಕಾಡು ನಾಶವಾಗುತ್ತಿದ್ದಂತೆ ಆಮ್ಲಜನಕದ ಕೊರತೆ ಹೆಚ್ಚಾಗುತ್ತದೆ. ಜೀವ ಸಂಕುಲದಲ್ಲಿ ಏರಿಳಿತ ಉಂಟಾಗುತ್ತದೆ. ಈ ವಿಚಾರಗಳನ್ನು ಇಂದಿನ ಯುವಕರು ಸರಿಯಾಗಿ ತಿಳಿದುಕೊಳ್ಳಬೇಕು.

ಕಪ್ಪತ್ತಗಿರಿಯನ್ನು ಬೆಳಸಬೇಕಾದರೆ ನಾವೆಲ್ಲರೂ ಕಂಕಣ ಬದ್ಧರಾಗಿ ನಿಲ್ಲಬೇಕು. ನಮ್ಮ ಪರಿಸರವನ್ನು ನಾವು ಬೆಳೆಸಲಾಗದಿದ್ದರೂ ಉಳಿಸಲೆತ್ನಿಸಬೇಕು. ಈ ಹಸಿರ ಸಿರಿಯ ಮಡಿಲು ಜಗತ್ಪ್ರಸಿದ್ಧಿಯಾಗಲು ನಮ್ಮ ಸೇವೆ ಮತ್ತು ಶ್ರದ್ಧೆಯ ಅಗತ್ಯವಿದೆ. ಬನ್ನಿ ಎಲ್ಲರೂ ಕೈ ಜೋಡಿಸೋಣ. ಸದಾ ನಮಗೆ ಉಸಿರಾಗಿರುವ ಹಸಿರನು ನಮಗಾಗಿ ಉಳಿಸೋಣ… ಬೆಳೆಸೋಣ…

ಇಲ್ಲಿಯ ಮತ್ತಷ್ಟು ವಿಶೇಷಗಳೆಂದರೆ ಹರಕೆಯ ಮನೆಯನ್ನ ಕಟ್ಟಿದರೆ ಮನೆ ಆಗುತ್ತೆ ಮತ್ತು ಇಲ್ಲಿ ಬಾರಿಗಿಡ ಅಂತ ಇದೆ ಇಲ್ಲಿಯೂ ಕೂಡ ಇಷ್ಟಾರ್ಥಗಳನ್ನು ಈಡೇರಿಸುವ ಹಲವಾರು ದಾರಿಗಳಿವೆ. ಮದುವೆ ಆಗದವರಿಗೆ ಮದುವೆಯಾಗುತ್ತೆ, ಮಕ್ಕಳಾಗದವರಿಗೆ ಮಕ್ಕಳಾಗುತ್ತೆ ಎಂಬ ನಂಬಿಕೆಗಳಿವೆ. ಅದೇ ರೀತಿ ಇಲ್ಲಿನ ಗಾಳಿಗುಡಿ ಬಸವಣ್ಣನಿಗೆ ಪೇರಲ ಹಣ್ಣು ತಗೊಂಡು ಹೋಗಿ ನೈವಿದ್ಯ ಮಾಡಿದರೆ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತಹ ಪ್ರತೀತಿ ಇದೆ. ದಿನವಿಡೀ ದುಡಿದ ತನುಮನಗಳ ಬಳಲಿಕೆ ದೂರಾಗಲೂ ಇದಕ್ಕಿಂತ ಬೇರ್ಯಾವ ದಾರಿ ಇರಲು ಸಾಧ್ಯ? ಅದಕ್ಕೆಂದೆ ಇವತ್ತೆಲ್ಲ ನಮ್ಮ ಸೈನ್ಯ ಬಂದಿದೆ ಈ ಒಂದು ಅದ್ಭುತವನ್ನು ಸವಿಯಲೆಂದೇ. ಈ ಖುಷಿಗೆ ಪಾರವಿಲ್ಲಂತ ಹೇಳಿದ್ರೆ ತಪ್ಪಾಗಲಿಕ್ಕಿಲ್ಲ. ಅದಕ್ಕೆ ನಾವೆಲ್ಲರೂ ಕಪ್ಪತ್ ಗಿರಿಯನ್ನು ನೋಡಿ ನಿಮಗೂ ಸ್ವಾಗತಿಸುತ್ತಿದ್ದೇವೆ. ನೀವು ಕೂಡ ಈ ಕಪ್ಪತ್ತಗಿರಿಗೆ ಆಗಮಿಸಿ ಕಪ್ಪತಗುಡ್ಡವನ್ನು ನೋಡಿ. ಕಪ್ಪತ್ ಗುಡ್ಡಕ್ಕೆ ನಿಮ್ಮದೇ ಆದಂತಹ ಸಸಿಗಳನ್ನು ನೆಡಿ. ದೇಶಾದ್ಯಂತ, ವಿಶ್ವಾದ್ಯಂತ ಇದನ್ನು ಪ್ರಚಾರ ಮಾಡಿ ಕಪ್ಪತ್ ಗುಡ್ಡಕ್ಕೆ ವಿಶೇಷ ಸ್ಥಾನಮಾನವನ್ನು ತಾವು ಕೊಡಬೇಕಂತ ಹೇಳಿ ತಮ್ಮಲ್ಲಿ ಸವಿನಯ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ವನ್ಯಜೀವಿಧಾಮವಾಗಿ ಮಾಡಿ ಘೋಷಣೆ ಮಾಡಬೇಕೆಂದು ನಾವೆಲ್ಲರೂ ಈ ಮೂಲಕ ವಿನಂತಿಯನ್ನು ಮಾಡಿಕೊಳ್ಳುತ್ತೇವೆ..🙏🙏

✍️ ಚಂದ್ರಶೇಖರ ಎನ್ ಮಜ್ಜಗಿ

Leave a Reply

Your email address will not be published. Required fields are marked *