ಈ ಬದಲಾವಣೆ ಯಾವಾಗ ಆಯಿತು?

( translated some of it from original Marathi)

ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ, ನೌಕರಿ ಮಾಡುವ ಮಗ , ಸಂಬಳವನ್ನ ತಂದೆಯ ಕೈಲಿ ಕೊಡುತ್ತಾ ಇದ್ದ. ಆಮೇಲೆ ತಂದೆ ಅದರಲ್ಲಿ ಸ್ವಲ್ಪ ಖರ್ಚು ಮಾಡಿ , ಕೊಂಚ ಬಚತ್ ಮಾಡಿ, ಮಗನಿಗೆ ದಿನದ ಖರ್ಚಿಗೆ ದುಡ್ಡು ಕೊಡೋರು!!!

ಈಗ ಮಗನ ಸ್ಯಾಲರಿ ಎಷ್ಟು , ಅದನ್ನು ಅವನೇನು ಮಾಡ್ತಾನೆ ಅಂತ ಕೇಳೋ ಧೈರ್ಯ ತಂದೆ ತಾಯಿಯರಿಗೆ ಇರೋಲ್ಲ. ಈ ಬದಲಾವಣೆ ಯಾವಾಗ ಆಯಿತು🤔

ಕಾಲೇಜಿನಲ್ಲಿ ಇದ್ದಾಗ ಸೀರೆ ಬದಲು ಪಂಜಾಬಿ ಡ್ರೆಸ್ ಹಾಕೋದಕ್ಕೆ ಅವಕಾಶ ಸಿಕ್ಕಿದರೆ ಖುಷಿ ಪಡುತ್ತಿದ್ದ ಮಗಳು, ಈಗ ತನ್ನ ಮಗಳು half pantನಲ್ಲಿ ಓಡಾಡೋದನ್ನ ನೋಡ್ತಾಳೆ. ಮನಸ್ಸಿಗೆ ಕಷ್ಟ ಆದರೂ”ಮೈ ತುಂಬ ಬಟ್ಟೆ ಹಾಕ್ಕೋ” ಅನ್ನುವ ಧೈರ್ಯ ಇಲ್ಲ. ಈ ಬದಲಾವಣೆ ಯಾವಾಗ ಆಯಿತು?😱😇

ವಯಸ್ಸಿಗೆ ಬಂದ ಹುಡುಗಿ ಮುಸ್ಸಂಜೆಯ ಒಳಗೆ ಮನೇಲಿ ಇರೋಳು. ಅಮ್ಮನಿಗೆ ಅಡುಗೆ ಮನೇಲಿ ಸಹಾಯ ಮಾಡೋಳು. ಈಗ ಅಡುಗೆ ಮನೆಯಲ್ಲಿ ಒಂದು ಸಲ ತಲೆ ಹಾಕಿ , ಏನಿದೆ ಅಂತ ನೋಡಿ, ತನ್ನ ರೂಮಿಗೆ ಹೋಗಿ, zomato ನಲ್ಲಿ ಆರ್ಡರ್ ಮಾಡ್ತಾಳೆ ಈ ಬದಲಾವಣೆ ಯಾವಾಗ ಆಯಿತು?😱😇

ಮದುವೆಯ ಮುಂಚೆ ಹುಡುಗ ಹುಡುಗಿ ಒಂದೆರಡು ಸಲ ಭೇಟಿಯಾಗುವದೇ ಆಧುನಿಕತೆಯ ಲಕ್ಷಣ ಅಂದುಕೊಂಡವರು ಈಗ ಮೊಮ್ಮಕ್ಕಳ live in relationship ಒಪ್ಪಕೋತಾರೆ. ಈ ಬದಲಾವಣೆ ಯಾವಾಗ ಆಯಿತು?😱😇

ಹಿರಿಯರನ್ನು ಗೌರವಿಸುವ ಸಂಪ್ರದಾಯಸ್ಥ ತಂದೆತಾಯಂದಿರ ಹೆಣ್ಣು ಮಕ್ಕಳು ಎಲ್ಲರ ಮುಂದೆ ಗಂಡನ ಅಪಮಾನ ಮಾಡುತ್ತಾರೆ, ಕುಂದುಗಳನ್ನು ಎತ್ತಿ ತೋರಿಸುತ್ತಾರೆ. ಆಗ ಹುಡುಗಿಯ ತಂದೆ ತಾಯಿ ಸುಮ್ಮನೇ ಇರುತ್ತಾರೆ. ಹುಡುಗನ ತಂದೆತಾಯಿ ಅಸಹಾಯಕರಾಗಿರುತ್ತಾರೆ. ( helpless) ಈ ಬದಲಾವಣೆ ಯಾವಾಗ ಆಯಿತು?😱😇

ತರುಣ ಮಕ್ಕಳು ಒಂದು ಕೆಲಸ ಬಿಟ್ಟು ಇನ್ನೊಂದು ಹಿಡಿಯುತ್ತಾರೆ, ಇದ್ದೂರಿಂದ ಮತ್ತೊಂದೂರಿಗೆ ಹೋಗುತ್ತಾರೆ . ಆದರೆ ಎಲ್ಲಾ ಠಳಾಯಿಸಿದ ನಂತರ ತಂದೆತಾಯಂದಿರಿಗೆ ಹೇಳುತ್ತಾರೆ. ಸಾಧಾರಣ ವಿಷಯಗಳನ್ನು ಬಿಡಿ, ಮಹತ್ವದ ವಿಷಯಗಳನ್ನೂ ಅವರಿಗೆ ತಿಳಿಸುವ ಅವಶ್ಯಕತೆಯೇ ಕಂಡುಬರುವದಿಲ್ಲ . ಸಿನಿಮಾಕ್ಕೋ ಟ್ರಿಪ್ಗೋ, ಪಾರ್ಟಿಗೋ ಹೋಗುವುದು, ಖರೀದಿ ಮಾಡುವುದು, break up ಇಂಥ ವಿಷಯಗಳಲ್ಲೂ ಹಸ್ತಕ್ಷೇಪ ಮಕ್ಕಳಿಗೆ ಹಿಡಿಸುವದಿಲ್ಲ. ಈ ಬದಲಾವಣೆ ಯಾವಾಗ ಆಯಿತು?😱😇

ಸಂಬಂಧಿಕರ ಮನೆಗೆ ಹೋಗುವುದು, ಅಕ್ಕ ಪಕ್ಕದವರು ಕಷ್ಟದಲ್ಲಿದ್ದರೆ ಅವರಲ್ಲಿಗೆ ಹೋಗುವುದು, , ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದು, ದೇವಸ್ಥಾನಕ್ಕೆ ಹೋಗುವುದು , ಪೂಜೆ ಮಾಡುವುದು ಇತ್ಯಾದಿ ವಿಷಯಗಳ ನಿಮಿತ್ತದಿಂದ, ಈಗ ಕೆಲವು ಮನೆಗಳಲ್ಲಿ, ಕೋಪ , ಜಗಳ ಆಗುತ್ತೆ. ಯಾಕೆ? ಈ ಬದಲಾವಣೆ ಯಾವಾಗ ಆಯಿತು🤔😱😇

Generation gap ಇರುವುದು ಸಹಜವೇ. ಒಪ್ಪೋಣ. ಒಂಬತ್ತು ವಾರಿನ ಸೀರೆ ಉಡುವ ಅತ್ತೆಗೆ, ಆರು ವಾರಿನ ಸೀರೆ ಉಡುವ ಸೊಸೆಯ ಬಗ್ಗೆ, ಆಗಲೂ ಅಸಂತುಷ್ಟಿ ಇರುತ್ತಿತ್ತು. ಹೇಳಿಯೂ ತೋರಿಸುತ್ತಿದ್ದಳು. ಈಗ ಮಾತ್ರ ಅರವತ್ತು ದಾಟಿದ ಪೀಳಿಗೆಯ ಮತ್ತು ಅವರ ಮಕ್ಕಳ ಪೀಳಿಗೆಯ ಮಧ್ಯ ಸಣ್ಣ ಅಂತರವಲ್ಲ, ಒಂದು ಕಂದಕವೇ ನಿರ್ಮಾಣವಾಗಿದೆ.😭😭😭😭😭😭😭 ಈ ಬದಲಾವಣೆ exactly ಯಾವಾಗ ಆಯಿತು ತಿಳಿಯಲೇ ಇಲ್ಲ 🤷‍♀️😱😱😱😱😱😇😇😇😇😇

2 thoughts on “ಈ ಬದಲಾವಣೆ ಯಾವಾಗ ಆಯಿತು?

 • July 21, 2021 at 3:03 pm
  Permalink

  ಪರಮ ಸತ್ಯ …ಲೇಖನವು ಸಕಾಲಿಕವಾಗಿದೆ

  Reply
 • July 23, 2021 at 2:16 am
  Permalink

  ವಾಸ್ತವಿಕ ನೆಲೆಗೆ ಕನ್ನಡಿದ ಹಿಡಿದಂತಹ ಬರಹ

  Reply

Leave a Reply

Your email address will not be published. Required fields are marked *