ಈ ಘಟನೆ ಉಳ್ಳವರಿಗೂ ಮಾದರಿ
ಮಿತರೇ, ನಮ್ಮಲ್ಲಿ ಬಹಳಷ್ಟು ಜನರಿಗೆ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಭಾವಚಿತ್ರವನ್ನು ತೆಗೆಸಿಕೊಂಡು ಅದನ್ನು ತಮ್ಮ ಜಾಲತಾಣಗಳ ಗೋಡೆಯಲ್ಲಿ ಅಂಟಿಸಿಕೊಂಡು ಸಂಭ್ರಮಿಸುವ ಖಯಾಲಿ ಇದೆ. ಆದರೆ, ಅದೇ ಒಬ್ಬ ಪ್ರಸಿದ್ಧ ವ್ಯಕ್ತಿಯೇ ನಮ್ಮನ್ನು ಆಹ್ವಾನಿಸಿ, ಆತಿಥ್ಯವನ್ನು ನೀಡಿದರೆ….
ಯೋಗೀಶ್ ಮತ್ತು ಸುಮೇಧ ಚಿತ್ತಾಲೆ ಎಂಬ ದಂಪತಿಗಳನ್ನು ಪ್ರಧಾನಿ ಮೋದಿ ಅವರು ಆಹ್ವಾನಿಸಿ, ಸತ್ಕಾರವನ್ನು ನೀಡಿರುವುದನ್ನು ನೀವು ಈ ಭಾವಚಿತ್ರದಲ್ಲಿ ನೋಡುತ್ತಿರುವಿರಿ.
ಹಾಗೆಂದು ಚಿತ್ತಾಲರು ಪ್ರಧಾನ ಮಂತ್ರಿಯಿಂದ ಯಾವುದೇ ಸಹಾಯವನ್ನು ಬಯಸುತ್ತಿಲ್ಲ. ಬದಲಾಗಿ, ಅವರ ಉದಾತ್ತ ಕಾರ್ಯಕ್ಕಾಗಿ ಪಿ. ಎಂ ಆಹ್ವಾನಿಸಿ ಅವರನ್ನು ಗೌರವಿಸಿದ್ದಾರೆ.
ಈ ನಿವೃತ್ತ ದಂಪತಿಗಳು ಸಿಯಾಚಿನ್ ಮೂಲ ಆಸ್ಪತ್ರೆಯಲ್ಲಿ ಆಮ್ಲಜನಕವನ್ನು ಉತ್ಪಾದಿಸುವ ಘಟಕಕ್ಕೆ ಹಣವನ್ನು ಸಂಗ್ರಹಿಸಲು Rs 1.25 ಕೋಟಿ ಮೌಲ್ಯದ ತಮ್ಮ ಇಡೀ ಕುಟುಂಬದ ಆಭರಣಗಳನ್ನು ಮಾರಿದ್ದರು. ಇಂತಹ ಉದಾತ್ತ ಗುಣ ನಮ್ಮಲ್ಲಿ ಎಷ್ಟು ಜನ ಉಳ್ಳವರಲ್ಲಿ ಕಾಣಬಹುದು… ನೀವೇ ಹೇಳಿ! ಆದರೆ, ಈ ದಂಪತಿಗಳು ತಮ್ಮ ಬಳಿ ಇರುವ ಅಲ್ಪ ಹಣದಲ್ಲೇ ದೊಡ್ಡ ಮೊತ್ತವನ್ನು ದೇಶಕ್ಕಾಗಿ ನೀಡುವ ಕಾರ್ಯಮಾಡಿದ್ದಾರೆ.
ಈ ಘಟಕವು ಈಗ ಸಿಯಾಚಿನ್ ಮತ್ತು ಸಮೀಪದ 20,000 ಭಾರತೀಯ ಸೈನಿಕರಿಗೆ ಸಾಕಷ್ಟು ಆಮ್ಲಜನಕವನ್ನು ಒದಗಿಸುತ್ತದೆ.
ಅವರ ಹೆಸರು ಮತ್ತು ಅವರ ದೇಶಭಕ್ತಿಯನ್ನು ಕೃತಜ್ಞತಾಪೂರ್ವಕವಾಗಿ ರಾಷ್ಟ್ರವು ನೆನಪಿನಲ್ಲಿಟ್ಟುಕೊಳ್ಳಲು ಅರ್ಹವಾಗಿದೆ. ಆದ್ದರಿಂದ, ಅವರನ್ನು ಪಿ.ಎಂ ಮೋದಿ ಅವರ ಕಚೇರಿಯಲ್ಲಿ ಕರೆದು ಗೌರವಿಸಿದರು.
ಇಂತವರ ಸಂಖ್ಯೆ ನಾಡಿನ ತುಂಬಾ ಹೆಚ್ಚಾಗಲಿ 🙏
(ಚಿತ್ರ/ಮಾಹಿತಿ ಕೃಪೆ, ರಂಗರಾಜನ್ ಪಾರ್ಥಸಾರಥಿ)