ಇನ್ನೊಂದು ತಿಂಗಳು ಧರ್ಮಸ್ಥಳಕ್ಕೆ ಹೋಗಬೇಡಿ.

ನಿತ್ಯ ಸಾವಿರಾರು ಭಕ್ತರಿಗೆ ವಸತಿ ,ಊಟ ನೀಡುವ ಧರ್ಮ ಕ್ಷೇತ್ರ ಧರ್ಮಸ್ಥಳ ಕ್ಕು “ಬರ”ದ ಛಾಯೆ ಆವರಿಸಿದೆ.
ಯಾವುದೇ ಕಾರಣಕ್ಕೂ ಇನ್ನೂ ಒಂದು ತಿಂಗಳಕಾಲ ಭಕ್ತಾದಿಗಳು ಹೋಗುವುದು ಬೇಡ.

ಹೌದು, ಅಲ್ಲಿ ಭಕ್ತರಿಗೆ ನೀರಿನ ಸೌಲಭ್ಯ ಇಲ್ಲ ಹಾಗಾಗಿ ಸ್ವತಃ ಅಲ್ಲಿನ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಈ ಮನವಿ ಮಾಡಿದ್ದಾರೆ. .ಸದಾ ಹರಿಯುತ್ತಿದ್ದ ನೇತ್ರಾವತಿ ನದಿಯು ಬತ್ತಿ ಹೋಗಿದ್ದು ನಿತ್ಯ ಆಗಮಿಸುವ ಸಹಸ್ರಾರು ಭಕ್ತರಿಗೆ ಪುಣ್ಯ ಸ್ನಾನವು ಸಹ ಆಗುತ್ತಿಲ್ಲ. ಕೊಠಡಿ ಪಡೆಯುವ ಭಕ್ತರಿಗೆ ಸ್ನಾನ ಹಾಗೂ ಇತರೆ ಬಳಕೆಗೂ ನೀರಿನ ತೀವ್ರ ಅಭಾವ ಇದೆ.

ಹಾಗಾಗಿ ಮಳೆ ಬರುವ ತನಕ ಅಂದರೆ ಕನಿಷ್ಠ ಒಂದು ತಿಂಗಳವರೆಗಾದರೂ ಭಕ್ತರು ಧರ್ಮಸ್ಥಳಕ್ಕೆ ಬಾರದೇ ಇರುವುದೇ ಒಳಿತು ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *