ಇದು ಭಾರತದ ಶಕ್ತಿ : ಶತ್ರು ರಾಷ್ಟ್ರಗಳ ಉಪಗ್ರಹಗಳನ್ನು ಅಂತರಿಕ್ಷದಲ್ಲಿ ಹೊಡೆದು ಉರುಳಿಸುವ ಶಕ್ತಿ ಸಾಬೀತು.

ಬಾಹ್ಯಾಕಾಶದಲ್ಲೇ ಶತ್ರುಗಳ ಉಪಗ್ರಹಗಳನ್ನು
ಹೊಡೆದುರುಳಿಸುವ ಮಹತ್ವವ ಸಾಧನೆ ಮೂಲಕ ಭಾರತದ
ವಿಜ್ಞಾನಿಗಳು ಮಹತ್ತರ ಸಾಧನೆ ಮಾಡಿ ಹೆಮ್ಮೆ ಮೂಡಿಸಿದ್ದಾರೆ,
ಹೌದು,. ಭಾರತದ ಡಿ ಆರ್ ಡಿ ಓ ಈ ಸಾಧನೆ ಮಾಡಿದೆ.
ನಮ್ಮ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ 300 ಕಿ.ಮಿ.ದೂರ led
(ಲೋ ಅರ್ಥ್ ಆರ್ಬಿಟ್)ದಲ್ಲಿರುವ ಸಕ್ರಿಯ ಉಪಗ್ರಹವನ್ನು
ಕೇವಲ 3 ನಿಮಿಷಗಳ ಕಾರ್ಯಾಚರಣೆಯಲ್ಲಿ ಹೊಡೆದು
ಉರುಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ಇಂದು ಈ ವಿಷಯವನ್ನು
ಅಧಿಕೃತವಾಗಿ ಪ್ರಕಟಿಸಿ ಡಿಆರ್ ಡಿಓ(DRDO)ವಿಜ್ಞಾನಿಗಳನ್ನು
ಅಭಿನಂದಿಸಿದರು.

“ಮಿಷನ್ ಶಕ್ತಿ”ಎಂಬ ಹೆಸರಿನ ಈ ಕಾರ್ಯಾಚರಣೆ ಮೂಲಕ
ಭಾರತ ಅಂತರಿಕ್ಷ ಕ್ಷೇತ್ರದಲ್ಲಿ ವಿಶ್ವದ ಬಲಿಷ್ಠ ದೇಶ ಎನ್ನಿಸಿದೆ.
ಈ ಕಾರ್ಯಾಚರಣೆ ಯಾರವಿರುದ್ದವು ಅಲ್ಲ ನಮ್ಮ ರಕ್ಷಣೆಗೆ
ಮಾತ್ರ ಎಂದು ಪ್ರಧಾನಿ ಈ ಸಂಧರ್ಭದಲ್ಲಿ ಹೇಳಿದ್ದಾರೆ.
ಭಾರತದ DRDO(ಡಿಫೆನ್ಸ್ ರಿಸರ್ಚ್‌ ಡೆವಲಪ್ಟೆಂಟ್
ಆರ್ಗನೈಸೇಷನ್) ವಿಜ್ಞಾನಿಗಳಿಗೆ ಒಂದು ಸಲಾಂ ಹೇಳಿ.

Leave a Reply

Your email address will not be published. Required fields are marked *