ಇದನ್ನು ಓದಿದಾಗ ನನಗೆ ಅರಿವಿಲ್ಲದೆ ಕಣ್ಣಂಚುಗಳು ಒದ್ದೆಯಾದವು
ಹಣ ದುಬಾರಿಯೆಂದು ವಿಮಾನದಲ್ಲಿ ಊಟ ಮಾಡದ ಸೈನಿಕರು ಕೊನೆಗೆ ಏನಾದರೂ… 2 ನಿಮಿಷ ಸಮಯವಿದ್ದರೆ ತಪ್ಪದೇ ಓದಿ… ಕಣ್ಣೀರು ಜಾರುವ ಕಥೆ.
ವಿಮಾನದಲ್ಲಿ ನನ್ನ ಜಾಗದಲ್ಲಿ ಕುಳಿತೆ ಡೆಲ್ಲಿ ತಲುಪಲು ಐದಾರು ಗಂಟೆಗಳ ಪ್ರಯಾಣ ಒಂದು ಉತ್ತಮವಾದ ಪುಸ್ತಕ ಓದುವುದು, ಒಂದು ಗಂಟೆ ನಿದ್ರೆ ನನ್ನ ಪ್ರಯಾಣದ ಕಾರ್ಯಕ್ರಮ. ವಿಮಾನ ಹೊರಡುವುದಕ್ಕೆ 5 ನಿಮಿಷಗಳ ಮುಂಚೆ ನನ್ನ ಅಕ್ಕ ಪಕ್ಕದ ಸೀಟುಗಳಲ್ಲಿ ಹತ್ತು ಜನ ಯೋಧರು ಕುಳಿತು ಕೊಂಡಿದ್ದರು. ವಿಮಾನ ತುಂಬಿತ್ತು. ಕಾಲಕ್ಷೇಪಕ್ಕೆ ನನ್ನ ಪಕ್ಕದಲ್ಲಿ ಕುಳಿತ ಯೋಧನನ್ನು “ಎಲ್ಲಿಗೆ ಪ್ರಯಾಣ” ಎಂದು ವಿಚಾರಿಸಿದೆ. “ಆಗ್ರಾಗೆ ಸಾರ್. ಅಲ್ಲಿ ಎರಡು ವಾರ ಶಿಕ್ಷಣ, ನಂತರ ಆಪರೇಷನ್ ಗೆ ಕಳಿಸುತ್ತಾರೆ” ಎಂದನು.
ಒಂದು ಗಂಟೆ ಕಳೆಯಿತು. ಅನೌನ್ಸ್ ಮೆಂಟ್ “ಬೇಕಾದವರು ಹಣ ಕೊಟ್ಟು ಊಟ ಪಡೆಯಬಹುದು” ಎಂದು. ಸರಿ ತುಂಬಾ ಸಮಯವಿದೆ ಊಟ ಮುಗಿಸಿದರೆ ಒಂದು ಕೆಲಸವಾಗುತ್ತದೆ. ಎಂದು ನನ್ನ ಪರ್ಸ್ ತೆಗೆದು ಊಟ ಖರೀದಿಸಲು ಮುಂದಾದಾಗ ಈ ಮಾತುಗಳು ನನ್ನ ಕಿವಿಗೆ ಬಿದ್ದವು.
ನಾವು ಸಹ ಊಟ ಮಾಡೋಣವೇ? ಎಂದು ಒಬ್ಬ ಯೋಧ ಮತ್ತೊಬ್ಬನನ್ನು ಕೇಳುತ್ತಾನೆ. ಅದಕ್ಕೆ ಆತನು “ಬೇಡ… ಇಲ್ಲಿ ಊಟ ದುಬಾರಿ ವಿಮಾನದಿಂದ ಇಳಿದ ತಕ್ಷಣ ಯಾವುದಾದರೂ ಸಾಧಾರಣವಾದ ಕಡೆ ಊಟ ಮಾಡೋಣ” ಎಂದನು. ಅದಕ್ಕೆ ಆ ಮೊದಲಿನ ಯೋಧ ಸರಿಯೆಂದು ಸುಮ್ಮನಾದನು. ನಾನು ವಿಮಾನದ ಪರಿಚಾರಕಿಯ ಬಳಿ ಹೋಗಿ ದಯವಿಟ್ಟು ನೀವು ಆ ಯೋಧರೆಲ್ಲರಿಗೂ ಊಟ ಕೊಡಿ ಅದರ ಹಣ ನಾನು ಸಂದಾಯಿಸುತ್ತೇನೆ ಎಂದೇನು.
ಹಣ ಪಡೆದು ಎಲ್ಲರಿಗೂ ಊಟದ ಡಬ್ಬಿಗಳನ್ನು ಕೊಟ್ಟರು. ಆ ಪರಿಚಾರಕಿ ಕಣ್ಣಲ್ಲಿ ನೀರು “ಸಾರ್ ನನ್ನ ತಮ್ಮ ಕಾರ್ಗಿಲ್ ನಲ್ಲಿ ಇದ್ದಾನೆ ಅವನಿಗೆ ಊಟ ಬಡಿಸಿದಷ್ಟು ಸಂತಸವಾಗುತ್ತಿದೆ” ಎನ್ನುತ್ತಾ ಕೈ ಮುಗಿದಳು. ನನಗೆ ಕಣ್ಣೀರು ತಡೆಯಲಾಗಲಿಲ್ಲ. ದುಃಖದಿಂದ ಬಂದು ನನ್ನ ಸೀಟಿನಲ್ಲಿ ಕುಳಿತೆ. ನಾನು ಊಟ ಮುಗಿಸಿ ಕೈತೊಳೆಯಲು ವಾಶ್ ರೂಂ ಕಡೆ ಹೊರಟೆ ನನ್ನ ಹಿಂದೆಯೇ ಒಬ್ಬ ವಯಸ್ಸಾದವರು ಬಂದು “ನಾನು ನಡೆದದ್ದೆಲ್ಲವನ್ನೂ ಗಮನಿಸಿದ್ದೇನೆ ನಿಮಗೆ ಅಭಿನಂದನೆಗಳು. ಈ ನಿಮ್ಮ ಸಂತೋಷದಲ್ಲಿ ನನಗೂ ಸ್ವಲ್ಪ ಪಾಲು ಕೊಡಿ” ಎಂದು ಐದು ನೂರು ರೂಪಾಯಿಯ ಹೊಸ ನೋಟನ್ನು ನನ್ನ ಕೈಯಲ್ಲಿ ತುರುಕಿ ನಿಮ್ಮ ಆನಂದದಲ್ಲಿ ನನ್ನ ಭಾಗ್ಯ ಎಂದರು. ನಾನು ನನ್ನ ಸೀಟಿನಲ್ಲಿ ಬಂದು ಕುಳಿತ ಒಂದು, ಕಾಲು ಗಂಟೆ ಕಳೆದಿರಬಹುದು, ವಿಮಾನದ ಕ್ಯಾಪ್ಟನ್ ಯಾರನ್ನೋ ಹುಡುಕುತ್ತಾ ಸೀಟು ನಂಬರ್ ಗಳನ್ನು ನೋಡುತ್ತ ನನ್ನ ಬಳಿ ಬಂದು ನನ್ನನ್ನು ನೋಡಿ ಮುಗುಳುನಗೆ ಬೀರುತ್ತಾ” ನಿಮಗೆ ಶೇಕ್ ಹ್ಯಾಂಡ್ ಕೊಡಬಹುದೇ ಎಂದು ನನ್ನ ಕೈ ಕುಲುಕಿದರು”. ನಾನು ನನ್ನ ಸೀಟಿನ ಪಟ್ಟಿಯನ್ನ ಕಳಚಿ ನಿಂತುಕೊಂಡೆ ಆತನು “ನಾನು ಹಲವು ವರ್ಷ ಪೈಲೆಟ್ ಆಗಿ ಕೆಲಸ ಮಾಡಿದ್ದೇನೆ. ಆಗ ಯಾರೋ ಒಬ್ಬರು ಊಟ ಕೊಡಿಸಿದರು. “ಅದು ನಿಮ್ಮ ಪ್ರೇಮದ ಕುರುಹು. ನಾನು ಅದನ್ನು ಎಂದೆಂದಿಗೂ ಮರೆಯಲಾರೆ” ಎಂದರು. ಸಹ ಪ್ರಯಾಣಿಕರೆಲ್ಲ ಚಪ್ಪಾಳೆ ತಟ್ಟುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ನನಗೆ ತುಂಬ ಸಂಕೋಚವಾಯಿತು.
ನಾನು ಒಂದು ಉತ್ತಮವಾದ ನಡವಳಿಕೆ ತೋರಿರಬಹುದು. ಆದರೆ ಹೊಗಳಿಕೆಗೆ ಅಲ್ಲ. ನಾನು ನನ್ನ ಸೀಟಿನಿಂದ ಮುಂದಿನ ಸೀಟುಗಳತ್ತ ಬಂದೆ. ಒಬ್ಬ ಹದಿನೆಂಟು ವರ್ಷದ ಹುಡುಗ ನನ್ನ ಕೈ ಕುಲುಕುತ್ತಾ ಒಂದು ನೋಟನ್ನು ಕೊಟ್ಟ. ಪ್ರಯಾಣ ಮುಗಿಯಿತು. ನಾನು ವಿಮಾನದಿಂದ ಹೊರ ಬರಲು ಬಾಗಿಲ ಬಳಿ ನಿಂತಿದ್ದೆ. ಯಾರೋ ಒಬ್ಬರು ನನ್ನ ಜೇಬಿನಲ್ಲಿ ಏನನ್ನೋ ಇಟ್ಟರು ಮತ್ತೊಂದು ನೋಟು. ನಾನು ಹೊರಬಂದು ನೋಡಿದಾಗ ಆ ಯೋಧರೆಲ್ಲರೂ ಒಂದು ಕಡೆ ನಿಂತಿದ್ದರು. ನಾನು ಬೇಗ ಬೇಗ ಅವರ ಹತ್ತಿರ ಹೋಗಿ ವಿಮಾನದಲ್ಲಿ ಸಹಪ್ರಯಾಣಿಕರು ಬಲವಂತದಿಂದ ನಂಗೆ ಕೊಟ್ಟ ಹಣವನ್ನು ಜೇಬಿನಿಂದ ತೆಗೆದು ಅವರಿಗೆ ಕೊಡುತ್ತಾ ನೀವು ನಿಮ್ಮ ಶಿಕ್ಷಣ ನಡೆಯುವ ಊರು ತಲುಪುವ ಮುಂಚೆ ಏನನ್ನಾದರು ತಿನ್ನಲು ಪ್ರಯೋಜನವಾಗುತ್ತದೆ. ನೀವು ನಮ್ಮ ದೇಶವನ್ನು ರಕ್ಷಿಸಲು ಪಡುತ್ತಿರುವ ಶ್ರಮದ ಮುಂದೆ ಈ ನಮ್ಮ ಸಹಾಯ ಬಹಳ ಚಿಕ್ಕದು. ನಿಮ್ಮಗಳಿಗೆ ಆ ಭಗವಂತನು ದಯೆ ತೋರಲಿ. ನಿಮ್ಮ ಪರಿವಾರದ ಸದಸ್ಯರೆಲ್ಲರೂ ಸುಖವಾಗಿರಲಿ. ಎಂದಾಗ ನನಗೆ ಅರಿವಿಲ್ಲದೆ ಧಾರಾಕಾರವಾಗಿ ಕಣ್ಣೀರು.
ಆ ಹತ್ತು ಜನ ಯೋಧರು ಸಹಪ್ರಯಾಣಿಕರ ಒಲವನ್ನು ಸೂರೆಗೊಂಡಿದ್ದರು. ನಾನು ಕಾರು ಹತ್ತುತ್ತಾ ನಮ್ಮ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಧಾರೆ ಎರೆಯಲು ಸಿದ್ಧರಾದ ಈ ಯುವಕರಿಗೆ ನೂರುಕಾಲ ಸುಖವಾಗಿ ಬಾಳುವಂತೆ ಹರಸು ಸ್ವಾಮಿ ಎಂದು ಭಗವಂತನಲ್ಲಿ ಕೇಳಿಕೊಂಡೆ. ಸೈನಿಕನೆಂದರೆ ತನ್ನ ಬಾಳನ್ನು ನಾಡಿಗಾಗಿ ತ್ಯಾಗ ಮಾಡುವ ಬ್ಲಾಂಕ್ ಚೆಕ್ ನಂತೆ. “ಬಾಳೆಲ್ಲವೂ ತನ್ನ ಬದುಕನ್ನ ಮುಡುಪಾಗಿಡುವ ಬ್ಲಾಂಕ್ ಚೆಕ್ಕು” ಎಷ್ಟು ಸಾರಿ ಓದಿದರೂ ಈ ಪ್ರಸಂಗ ಮನತಣಿಸುತ್ತದೆ. ಭಾರತಮಾತೆಯ ಈ ಮುದ್ದು ಮಕ್ಕಳನ್ನು ಗೌರವಿಸುವುದು ನಮ್ಮನ್ನು ನಾವೇ ಗೌರವಿಸಿಕೊಂಡಂತೆ .
ಜೈ ಜವಾನ್ ಜೈ ಭಾರತ್ ಮಾತಾಕಿ ಜೈ
(ಇದು ಸಾಧಕರ ಸಂಗ್ರಹದಿಂದ ಆಯ್ದ ಬರಹ)