ಇಂತಹ ಕ್ರೂರ ತಾಯಿಯನ್ನು ನೀವೆಂದು ನೋಡಿರಲಾರಿರಿ

ಮಗು ಒಂದಿಷ್ಟಾದರೂ ತಿನ್ನಲಿ ಎಂಬ ಕಾರಣದಿಂದ ಅದನ್ನು ಆಟವಾಡಿಸಿಕೊಂಡು, ಹೊರಗಡೆ ಚಂದಮಾಮನನ್ನು ತೋರಿಸುತ್ತಾ ಅದು ಬಾಯಿತೆಗೆದರೆ ಸಾಕು ತಕ್ಷಣ ಒಂದು ತುತ್ತು ಬಾಯಿಗಿಟ್ಟು ತಿನ್ನಿಸುವ ತಾಯಂದಿರ ಬಗ್ಗೆ ನಮಗೆಲ್ಲಾ ಗೊತ್ತು. ಆದರೆ, “ಹಸಿವಾಗಿದೆ ನನಗೆ ಹಾಲು ಕೊಡು” ಎಂದು ಕೇಳಿದ ಮಗುವನ್ನೇ ಕತ್ತು ಸೀಳಿ ತಾಯಿಯೊಬ್ಬಳು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಥಾರ್ ಜಿಲ್ಲೆಯಲ್ಲಿ ನಡೆದಿದೆ.
ಈ ಕ್ರೂರ ತಾಯಿಯ ಹೆಸರು ಅನಿತಾ. ಈಕೆ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ತನ್ನ ಒಂದು ವರ್ಷದ ಪುಟ್ಟ ಮಗಳು ಹಾಲು ನೀಡುವಂತೆ ಕಾಡುತ್ತಿದ್ದಳು. ತಾಯಿ ನಿರ್ಲಕ್ಷಿಸಿದಾಗ ತುಂಬಾ ಹಸಿವು ತಕ್ಷಣ ಕೊಡು ಎಂದು ಹಠ ಮಾಡಿತು. ಅದೇನಾಯಿತೋ ಮೈಮೇಲೆ ದೆವ್ವ ಬಂದವಳ ಹಾಗೆ ಅಡುಗೆ ಮನೆಯಲ್ಲಿದ್ದ ಹರಿತವಾದ ಚಾಕುವಿನಿಂದ ಮಗಳ ಕತ್ತು ಸೀಳಿದಳು. ಏನಾಯಿತೆಂದು ನೋಡುವ ಸೌಜನ್ಯವು ಇಲ್ಲದ ಆಕೆ ಅಳುತ್ತಿದ್ದ ಮಗುವನ್ನು ಅಲ್ಲೇ ಬಿಟ್ಟು ತನ್ನ ಸಂಬಂಧಿಕರ ಮನೆಗೆ ತೆರಳಿದಳು.
ಕೆಲ ಹೊತ್ತಿನವರೆಗೆ ಮಗುವಿನ ಕಿರುಚಾಟ, ಗೋಳಾಟ ಅಕ್ಕಪಕ್ಕದ ಮನೆಯವರಿಗೂ ಕೇಳಿಸಿತು. ತಾಯಿ ಮನೆಯಿಂದ ಹೊರ ಹೋದದ್ದನ್ನು ಗಮನಿಸಿದ್ದ ನೆರೆಯವರು ಮಗುವಿನ ಅಳು, ನರಳಾಟ, ತಣ್ಣಗಾದ ನಂತರ ಅನುಮಾನಗೊಂಡು ಮನೆ ಒಳಹೊಕ್ಕು ನೋಡಿದರೆ ಆ ಮಗು ರಕ್ತದ ಮಡುವಿನಲ್ಲಿ ಸತ್ತು ಬಿದ್ದಿತ್ತು. ತಕ್ಷಣವೇ ಆಸ್ಪತ್ರೆಗೆ ಸೇರಿಸುವ ಪ್ರಯತ್ನವನ್ನು ಅವರು ಮಾಡಿದರಾದರೂ ಆಗಲೇ ಮಗು ಮೃತಪಟ್ಟಿತ್ತು.
ಸದ್ಯೆ ಆರೋಪಿ ಮಹಿಳೆ ಅನಿತಾಳನ್ನು ಪೊಲೀಸರು ಬಂಧಿಸಿದ್ದಾರೆ.
ಅಮ್ಮಂದಿರ ಬಗ್ಗೆ ದಿನ ಬೆಳಗಾದರೆ ಫೇಸ್ ಬುಕ್, ವಾಟ್ಸಪ್‍ಗಳಲ್ಲಿ, ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇರುತ್ತವೆ. ಅಮ್ಮನಿಗೆ ಸಾಟಿಯೇ ಇಲ್ಲ ಎಂಬ ಭಾವನೆ ಮಾಡುವ, ಹೆಣ್ಣು ಮಕ್ಕಳ ತ್ಯಾಗ,ನಿಸ್ವಾರ್ಥ ಸೇವೆ ಹಾಗೂ ಕ್ಷಮಾಗುಣಗಳನ್ನು ಬಿಂಬಿಸುವ ವಾಕ್ಯಗಳು, ಲೇಖನಗಳು ಬರುತ್ತಲೇ ಇವೆ. ಇಂಥ ಸಂದರ್ಭದಲ್ಲಿ “ತಾಯಿ” ಎಂಬ ಶಬ್ದಕ್ಕೇ ಕಳಂಕ ತರುವ ಇಂಥ ತಾಯಂದಿರಿಗೆ ಧಿಕ್ಕಾರ ಇರಲಿ.
ಕೇವಲ ಹಡೆಯುವುದು ಮಾತ್ರ ತನ್ನ ಕೆಲಸ ಎಂಬಂತೆ ಲಕ್ಷಕ್ಕೊಬ್ಬರು ಹೆಂಗಸು ಇದ್ದಿರಬಹುದು, ಬರೀ “ಹೆರುವುದೇ” ಆದರೆ ಹಂದಿ – ನಾಯಿಗಳೂ ಸಹ ಈ ಕೆಲಸವನ್ನು ತುಸು ಹೆಚ್ಚಾಗಿಯೇ ಮಾಡುತ್ತವೆ ಅಲ್ಲವೇ?

Leave a Reply

Your email address will not be published. Required fields are marked *