ಅತ್ಯಾಚಾರಿಗಳಿಗೆ ಗಲ್ಲಶಿಕ್ಷೆ ಮಾತ್ರ ಸೂಕ್ತ ಶಿಕ್ಷೆ; ಸಂತೋಷ್ ಹೆಗಡೆ

ಅತ್ಯಾಚಾರಿ ಅಪರಾಧಿಗಳಿಗೆ ಗಲ್ಲಶಿಕ್ಷೆ ಮಾತ್ರ ಸೂಕ್ತ ಶಿಕ್ಷೆ ಎಂದು ಹಿಂದಿನ ಲೋಕಾಯಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅಭಿಪ್ರಾಯಿಸಿದರು .
ಹುನಗುಂದ ವಕೀಲರ ಸಂಘ ದಲ್ಲಿನಡೆದ ಕಾರ್ಯಕ್ರಮ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇತರೆ ಅಪರಾಧಗಳಿಗೆ ಸೂಕ್ತ ಶಿಕ್ಷೆ ಎಷ್ಟು ಮುಖ್ಯವೋ ಇಂತಾ ಅತ್ಯಾಚಾರ ,ಕೊಲೆ ಪ್ರಕರಣದಲ್ಲಿ ಯಾವುದೇ ವಿಳಂಬ ತೋರದೆ ಆದಷ್ಟು ಬೇಗ ಶಿಕ್ಷೆ ಪ್ರಕಟಿಸಿ ಗಲ್ಲಿಗೆ ಏರಿಸಬೇಕು ಎಂದರು.
ಸಮಾಜದಲ್ಲಿ ಅಪರಾಧಿಗಳನ್ನು ಮುಲಾಜಿಲ್ಲದೆ ಭಾಹಿಸ್ಕರಿಸುವ ವ್ಯವಸ್ಥೆ ಹಾಗೂ ಜಾಗೃತಿ ಮೊದಲು ಮೂಡಬೇಕು ಎಂದು ಹೇಳಿದ ಅವರು ಇಂದು ಜೈಲಿಗೆ ಹೋಗಿಬಂದ ವರನ್ನು ಹಾರ ಹಾಕಿ ಮೆರವಣಿಗೆ ನಡೆಸಿ ಜೈ ಕಾರ ಹಾಕುವ ಸ್ಥಿತಿ ಇರುವುದು ದುರದೃಷ್ಟ ಎಂದೂ ಅವರು ಹೇಳಿದರು.
ಅಯೋಧ್ಯೆ ತೀರ್ಪು ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ತೀರ್ಪು ದೇಶದ ಜನರ ಹಿತದೃಷ್ಟಿಯಿಂದ ಒಳ್ಳೆಯದು.ಆದರೆ ಧಾರ್ಮಿಕ ವಿವಾದಗಳು ನ್ಯಾಯಾಲಯದಲ್ಲಿ ಇತ್ಯರ್ಥ ಆಗುವುದು ಎಷ್ಟು ಸೂಕ್ತ ಎಂಬುದು ವಯಕ್ತಿಕ ಪ್ರಶ್ನೆ ಎಂದರು.
ಅಯೋಧ್ಯೆ ತೀರ್ಪು ಲ್ಲಿ ಯಾರದು ವಯಕ್ತಿಕ ಭೂಮಿ ಹೋಗಿಲ್ಲವಲ್ಲ ಎಂದು ಅವರು ಮುಗುಳ್ನಕ್ಕರು .

ಪ್ರಿಯಾಂಕ ರೆಡ್ಡಿ ಅವರ ಅತ್ಯಾಚಾರ ಹಾಗೂ ಹತ್ಯೆ ಮಾಡಿದ ಆರೋಪಿಗಳನ್ನು ಆದಷ್ಟು ಬೇಗ ಶಿಕ್ಷಿಸಬೇಕು ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *