ಅಂಜನಿ ಪುತ್ರ ಹನುಮಂತನ ಫೋಟೋವನ್ನು ಮನೆಯ ಈ ಭಾಗದಲ್ಲಿ ಇಟ್ಟರೆ ಶುಭಕರ..!ತಿಳಿಯಲು ಈ ಲೇಖನ ಓದಿ…

ಹಿಂದಿನಕಾಲದಿಂದಲೂ ಹಿಂದೂಗಳ ಮನೆಗಳಲ್ಲಿ  ದೇವರ ಫೋಟೋಗಳನ್ನು ಇಡಲು ದೇವರ ಮನೆ ಇರುತ್ತದೆ. ಇದರ ಜೊತೆಗೆ ಮನೆಯ ಹಾಲ್ ಸೇರಿದಂತೆ ವಿವಿಧ ಭಾಗಗಲ್ಲಿ ದೇವ, ದೇವತೆಯರ ಫೋಟೋಗಳನ್ನು ಹಾಕಿಕೊಂಡಿರುತ್ತಾರೆ.ಇದಕ್ಕೆ ಹಲವಾರು ಕಾರಣಗಳು ಇವೆ. ಮನೆಯಲ್ಲಿ ಶಾಂತಿ ನೆಲಸಲು, ಹಲವು ವಾಸ್ತು ದೋಷ ನಿವಾರಣೆಗಳಿಗಾಗಿ ಹೀಗೆ ಮಾಡುತ್ತಾರೆ ಕೂಡ.

ಕೆಲವರು ತಮ್ಮ ಮನೆಗಳಲ್ಲಿ ಮನೆ ದೇವರು ಫೋಟೋಗಳ ಜೊತೆಗೆ, ತಮ್ಮ ಇಷ್ಟ ದೈವ ಫೋಟೋಗಳನ್ನು ಹಾಕಿಕೊಂಡಿರುತ್ತಾರೆ. ವಾಸ್ತು ಶಾಸ್ತ್ರದಲ್ಲಿ ನಂಬಿಕೆ ಇರುವವರು ಸಹ ಅದಕ್ಕೆ ತಕ್ಕದಾದ ದೇವರ ಫೋಟೋಗಳನ್ನು ಹಾಕಿಕೊಂಡಿರುತ್ತಾರೆ.

ರಾಮಭಕ್ತ ಹನುಮಂತನ ಫೋಟೋಗಳನ್ನು ಬಹುತೇಕ ಜನ ತಮ್ಮ ಮನೆಗಳಲ್ಲಿ ಹಾಕಿಕೊಂಡಿರುತ್ತಾರೆ.ಆದರೆ ಆಂಜನೇಯನ ಫೋಟೋಗಳನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಹಾಕುವಂತಿಲ್ಲ.

ಮನೆಯ ಇಂತಹ ಭಾಗಗಳಲ್ಲಿ ಹನುಮನ ಫೋಟೋ ಹಾಕಬೇಡಿ?

ಹೌದು, ಯಾವುದೇ ಕಾರಣಕ್ಕೂ ರಾಮ ಭಕ್ತ, ಹನುಮಂತನ ಮೂರ್ತಿ ಅಥವಾ ಫೋಟೋವನ್ನು ಬೆಡ್ ರೂಂನಲ್ಲಿ ಹಾಕಬೇಡಿ. ಮನೆಯ ಪವಿತ್ರ ಜಾಗ ಅಥವಾ ದೇವರ ಕೋಣೆಯಲ್ಲಿ ಮಾತ್ರ ಹನುಮಂತನ ಫೋಟೋ ಇರಲಿ.

ಆಂಜನೇಯನ ಮೂರ್ತಿ ಅಥವಾ ಫೋಟೋವು ವಾಸ್ತುಶಾಸ್ತ್ರದ ಪ್ರಕಾರ, ದಕ್ಷಿಣ ದಿಕ್ಕಿಗೆ ಬರುವಂತೆ ಇಡಬೇಕು. ದಕ್ಷಿಣ ದಿಕ್ಕಿಗೆ ಫೋಟೋ ಹಾಕುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಅಂಶಗಳ ಶಕ್ತಿ ಕಡಿಮೆಯಾಗುತ್ತದೆ. ಸುಖ-ಶಾಂತಿ ನೆಲೆಸಿರುತ್ತದೆ.

ಯಾವ ತರದ ಹನುಮಂತನ ಫೋಟೋ ಹಾಕಬೇಕು?

ಶ್ರೀ ರಾಮನ ಭಜನೆ ಮಾಡುತ್ತಿರುವ ಹನುಮಂತನ ಫೋಟೋ, ಪರ್ವತವನ್ನು ಎತ್ತಿ ಹಿಡಿದಿರುವ ಆಂಜನೇಯನ ಫೋಟೋ, ಅಥವಾ ಪಂಚಮುಖಿ ಅವತಾರದ ಹನುಮಂತನ ಫೋಟೋ ಹಾಕುವುದು ತುಂಬಾ ಒಳ್ಳೆಯದು.

ಇದರೊಂದಿಗೆ ಪ್ರತೀದಿನ ಯುವಕರು ಸೇರಿದಂತೆ ಮನೆಯವರು ಹನುಮಾನ್ ಚಾಲಿಸ್ ನ್ನು ಪಠಣ ಮಾಡಿ, ಇದರಿಂದ ಮನೆಯಲ್ಲಿ ಶಾಂತಿ ಲಭಿಸುತ್ತದೆ.

 

Leave a Reply

Your email address will not be published. Required fields are marked *