ಗಜ್ಜುಗ… ನೆನಪಿದೆಯೇ?

ಮೂರ್ನಾಲ್ಕು ದಶಕಗಳ ಹಿಂದಿನವರೆಗೂ ಹೊಲ ಗದ್ದೆ ತೋಟಗಳಿಗೆ ರಕ್ಷಣಾ ಬೇಲಿಯಾಗಿ ಕಂಡು ಬರುತ್ತಿದ್ದ ಗಜ್ಜುಗದ ಗಿಡಗಳು ಈಗ ಅವಸಾನದ ಅಂಚಿಗೆ ಬಂದು ನಿಂತಿವೆ.

ಪೊದೆಯಾಕರದಲ್ಲಿ ಬೆಳೆಯುವ ಗಜ್ಜುಗದ ಬಳ್ಳಿ ಯಲ್ಲಿ ಕಾಯಿಗಳ ಸಮೇತ ಸಂಪೂರ್ಣ ಮುಳ್ಳುಗಳು ಇರುತ್ತವೆ. ಚಿಪ್ಪಿನಾಕಾರದ ಕಾಯಿಯೊಳಗೆ ಕಣ್ಣು ಗುಡ್ಡೆಯನ್ನು ಹೋಲುವ ಬೀಜಗಳಿಗೆ…

ಕನ್ನಡ ಭಾಷೆಯಲ್ಲಿ> ಗಜ್ಜುಗ, ಗಜಗ, ಗಜ್ಜಿಗೆ ಕಾಯಿ.
ಹಿಂದಿ ಭಾಷೆಯಲ್ಲಿ> ಕರಂಜ, ಕಟ ಕರಂಜ
ಸಂಸ್ಕೃತ ಭಾಷೆಯಲ್ಲಿ> ಲತಾ ಕರಂಜ, ಕಂಠ ಫಲ
ಆಂಗ್ಲ ಭಾಷೆಯಲ್ಲಿ> Fever nut, Nicker bean, Bonduc nut, yellow Nicker.

ಮೊದಲು ಎಲ್ಲರ ಮನೆಗಳಲ್ಲಿ ಗಜ್ಜುಗ ಕಾಯಿ ಗಳು ಇರುತ್ತಿದ್ದವು. ಚಿಕ್ಕ ಮಕ್ಕಳು ಆಟ ವಾಡಲು ಉಪಯೋಗಿಸುತ್ತಿದ್ದರು ಹಾಗೂ ಮನೆ ಮದ್ದಾಗಿ ಅನೇಕ ಕಾಯಿಲೆಗಳಿಗೆ ಬಳಸುತ್ತಿದ್ದರು. ಈಗ ಸಿಗುವುದು ಅಪರೂಪ .ಗಜ್ಜುಗ ಬೇಕಾದರೆ ಗ್ರಂಥಿಗೆ ಅಂಗಡಿಗೇ ಹೋಗಬೇಕು.

ಇಡೀ ಗಜ್ಜುಗದ ಬಳ್ಳಿ ಔಷಧೀಯ ಗುಣಗಳನ್ನು ಹೊಂದಿದೆ. ಹಾವು ಮುಂಗುಸಿ ಕಾದಾಡಿ ದ ನಂತರ ಮುಂಗುಸಿ ಈ ಗಜ್ಜುಗ ಬಳ್ಳಿಯ ಬೇರನ್ನು ತಿನ್ನುತ್ತದೆ.

ಕಹಿ ರುಚಿಯನ್ನು ಹೊಂದಿರುವ ಇದರ ಕೆಲವು ಔಷಧೀಯ ಗುಣಗಳು

  • ಚೇಳು ಕಚ್ಚಿದಾಗ ಇದರ ಬೇರನ್ನು ತೇಯ್ದು ಉಪ ಯೋಗಿಸಬಹುದು.
  • ಗಾಯ ಊತಗಳಿಗೆ ಗಜ್ಜುಗ ತೇಯ್ದು ಲೇಪಿಸಬೇಕು
  • ವೃಷಣಗಳ ಊತ ನೋವಿನಲ್ಲಿ ಇದರ ಸೊಪ್ಪನ್ನು ಅರೆದು ಬಿಸಿ ಮಾಡಿ ಲೇಪಿಸಿ ಮೇಲೆ ಔಡಲದ ಎಲೆಗಳನ್ನು ಸುತ್ತಬೇಕು.
  • ಕಜ್ಜಿ ತುರಿಕೆ ಚರ್ಮ ರೋಗಗಳಲ್ಲಿ ಕಾಯಿಗಳನ್ನು ಅರೆದು ಎಳ್ಳೆಣ್ಣೆಯಲ್ಲಿ ಕುದಿಸಿ ಶೋಧಿಸಿದ ಎಣ್ಣೆ ಯನ್ನು ಲೇಪಿಸಬೇಕು.
  • ಮಧುಮೇಹಿಗಳು ಗಜ್ಜು ಗದ ಹೂಗಳ ಕಷಾಯ ತಯಾರಿಸಿ ಸೇವಿಸಬಹುದು.
  • ಕೂದಲು ಉದುರುತ್ತಿದ್ದರೆ ಇದರ ಹೂವುಗಳನ್ನು ಅರೆದು ಲೇಪಿಸಬೇಕು.
  • ಮಹಿಳೆಯರ ಹೊಟ್ಟೆ ನೋವು ಬಿಳಿ ಸೆರಗಿನ ತೊಂದರೆಯಲ್ಲಿ ಒಂದು ಗಜ್ಜುಗದ ಒಳಗಿನ ಪಪ್ಪು ಜೀರಿಗೆ ಪುಡಿ ಮಾಡಿ ಕುದಿಸಿ ಕಲ್ಲು ಸಕ್ಕರೆ ಸೇರಿಸಿ ಕಷಾಯ ತಯಾರಿಸಿ ಕುಡಿಯಬಹುದು

ಗಜ್ಜುಗದ ಬೀಜಗಳಿಂದ ಎಣ್ಣೆಯನ್ನು ತಯಾರಿ ಸುತ್ತಾರೆ. ಈ ಎಣ್ಣೆಯನ್ನು ಚರ್ಮ ರೋಗಗಳಲ್ಲಿ ಉಪ ಯೋಗಿಸಬಹುದು.

ಹಸಿರು ಚಿಪ್ಪಿನೊಳಗಿನ ಸುಂದರವಾದ ಬೂದು ಬಣ್ಣದ ಮುತ್ತುಗಳು ಈ ಗಜ್ಜುಗದ ಬೀಜಗಳು ಆನೆ ಕಾಲು ರೋಗದಲ್ಲಿ ಹಾಗೂ ಇತರೆ ಕಾಯಿಲೆಗಳಲ್ಲಿ ನುರಿತ ನಾಟಿ ವೈದ್ಯರು ಪಾರಂಪರಿಕ ಚಿಕಿತ್ಸಕರು ಉಪಯೋಗಿಸುತ್ತಾರೆ.

ರೈತರು ಗಜ್ಜುಗ ಬಳ್ಳಿಗಳನ್ನು ಹೊಲ ಗದ್ದೆಗಳ ಬದುಗಳಲ್ಲಿ ಬೆಳೆಸಿದರೆ ಯಾವ ಪ್ರಾಣಿಯೂ ಈ ಬಳ್ಳಿ ಯನ್ನು ದಾಟುವ ಸಾಹಸ ಮಾಡುವುದಿಲ್ಲ. ಅದಕ್ಕಾ ಗಿಯೇ ಸಂಸ್ಕೃತ ಭಾಷೆಯಲ್ಲಿ ಇದಕ್ಕೆ ದು:ಸ್ಪರ್ಶ ಎಂದು ಕರೆಯಲಾಗಿದೆ.

ಸಂಗ್ರಹ ಮಾಹಿತಿ ಲೇಖನ
S. H. Nadaf.

Leave a Reply

Your email address will not be published. Required fields are marked *