ಕೈ,ಕಚ್ಚೆ ಎಂದೋ ಕಳೆದುಕೊಂಡಿದ್ದೀರಿ ಬಾಯಿಯನ್ನಾದರು ಶುದ್ದವಾಗಿಟ್ಟುಕೊಳ್ಳಿ
ಕೈ ಬಾಯಿ ಕಚ್ಛೆ ಗಳನು ತನ್ನಿಚ್ಛೆ ಯಲಿ ಇಟ್ಟುಕೊಂಡವನೆ ಮಾತ್ರ ದೇವರ ಮೆಚ್ಚುಗೆಗೆ ಪಾತ್ರ ಆಗುತ್ತಾನೆ ಅಥವಾ ದೇವರೇ ಆಗುತ್ತಾನಂತೆ, ಈ ಮೂರನ್ನು ಹಿಡಿತದಲ್ಲಿ ಇಟ್ಟುಕೊಂಡ ರಾಜಕೀಯ ವ್ಯಕ್ತಿ ಗಳ ಸಂಖ್ಯೆ ಅತಿ ವಿರಳ,ಆದರೆ ಯಾವುದಾದರೂ ಒಂದನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬಾರದೆ?
ದಿನೇಶ್ ಗುಂಡೂರಾವ್ ಅವರು ಯೋಗಿ ಆದಿತ್ಯನಾಥ್ ಅವರ ಕುರಿತು ಆಡಿರುವ ಮಾತುಗಳು ನನಗೆ ಮೊದಲು, ಏನಪ್ಪಾ ಇದು ಹೀಗೆ ಮಾತಾಡ್ತಾರಲ್ಲ ಇವರು ಎಂಬ ಅಸಮಾಧಾನ ಮೂಡಿಸಿತು,..
ಮನೆಯವರೆಲ್ಲ ಟಿವಿ ನೋಡ್ತಾ ಇದ್ವಿ,ನನ್ನ ಪತ್ನಿ “ಹೊಲಸು ರಾಜಕಾರಣಿಗಳು,ಬಾಯಿಗೆ ಬಂದದ್ದೇ ಮಾತಾಡ್ತಾರೆ,ಇವರಿಗೂ (TV) ಬೇರೆ ಕೆಲ್ಸ ಇಲ್ಲ,24 ಗಂಟೆ ಬಬಲ್ಗಮ್ ತರ ಏಳಿತಾನೆ ಇರ್ತಾರೆ”ಎಂದು ಗುನುಗುತ್ತಲೇ ಅಡುಗೆ ಮನೆ ಸೇರಿದಳು.
2ನೆ ಪಿಯುಸಿ ಓದುತ್ತಿರುವ ಮಗ”ಹೀಗೆಲ್ಲ ಮಾತಾಡೋದು ತಪ್ಪಲ್ವ”ಎಂದು ಮುಗ್ದನಂತೆ ಕೇಳಿದ, ಅಲ್ಲ ಪಪ್ಪ,ಯೋಗಿ ಆದಿತ್ಯನಾಥ್ ಸಿಮ್ ಅಲ್ವಾ,ಅವರ ಕುರಿತು ಹೀಗೆ ಮಾತಾಡ್ತಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ.ಜೊತೆಗೆ ಈ ದಿನೇಶ್ ಗುಂಡೂರಾವ್ ಯಾರು ಎಂದು ಕೇಳಿದ,
ನಾನು ಯಾಕೆ ಈ ವಿಷಯ ಪ್ರಸ್ತಾಪ ಮಾಡಿದೆ ಎಂದರೆ ನನ್ನ ಮಗ ಇದೆ ಪ್ರಥಮ ಬಾರಿಗೆ ಮತ ಚಲಾವಣೆ ಮಾಡ್ತಾ ಇದ್ದಾನೆ,,,ಖಂಡಿತಾ ನಾನು ಯಾವ ಪಕ್ಷ ಕ್ಕೆ ಮತ ಹಾಕು ಎಂದು ಸಲಹೆ ನೀಡುತ್ತಿರಲ್ಲಿ, ಆದರ ಮತ ಚಲಾವಣೆ ಬಳಿಕ ಅವನ್ನ ಕೇಳಬೇಕು ಎಂದುಕೊಂಡಿದ್ದೆ,”ಯಾರಿಗೆ ಮತ ಹಾಕಿದೆ ಮತ್ತು ಅವರಿಗೇ ಏಕೆ ಹಾಕಿದೆ”ಎಂದು. ಆದರೀಗ ನಾನು ಅವನಿಗೆ ಯಾರಿಗೆ ಮತ ಹಾಕಿದೆ ಎಂದು ಕೇಳುವ ಅಗತ್ಯವಿಲ್ಲ, ಅಥವಾ ಸಲಹೆ ನೀಡುವ ಅಗತ್ಯವಿಲ್ಲ ಅಲ್ಲವೇ?
ಒಬ್ಬನೇ ಅಭ್ಯರ್ಥಿ 2 ಕಡೆ ಏಕೆ ಸ್ಪರ್ಧೆ ಮಾಡುತ್ತಾರೆ ಎಂದು ಆತ ಕೇಳಿದಾಗ ನಾನು ಸಂಪೂರ್ಣವಾಗಿ ಅದರ ಒಳ ಹೊರಗು ವಿವರಿಸಲು ಮುಂದಾದೆ,ನಂತರ ಆಲೋಚಿಸಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅವನಲ್ಲಿ ಅಪನಂಬಿಕೆ ಅಥವಾ ಜಿಗುಪ್ಸೆ ಮೂಡಿಸಬಾರದು ಎಂದು ನಿರ್ಧರಿಸಿ,”ನಮ್ಮಲ್ಲಿ ಹಿಂದಿನಿಂದ ಈ ಅವಕಾಶ ಇದೆ”ಎಂದು ಚುಟುಕಾಗಿ ಉತ್ತರಿಸಿದೆ,
ರಾಜಕಾರಣಿಗಳು ತಮ್ಮ ಕೈ,ಬಾಯಿ,ಕಚ್ಚೆ ಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು.ಕೈ ಹಾಗೂ ಕಚ್ಚೆ ಗಳನ್ನು ನೀವು ಎಂದೋ ಕಳೆದುಕೊಂಡು ಆಗಿದೆ, ಬಾಯಿಯನ್ನಾದ್ರೂ ಸ್ವಲ್ಪ ಶುದ್ಧವಾಗಿ ಇಟ್ಟುಕೊಂಡು ನಾಗರಿಕ ಜೀವನ ನಡೆಸಲಿ ಎಂಬುದು ನನ್ನ ಆಶಯ.