ದಿ. 19ಕ್ಕೆ ಸಚಿವ ಸಂಪುಟ ಸಂಪುಟ ವಿಸ್ತರಣೆ: ಇಲ್ಲಿದೆ ಸಂಭವನೀಯ ಸಚಿವರ ಪಟ್ಟಿ
ನವದೆಹಲಿ 16, ರಾಜ್ಯದಲ್ಲಿ ಬಿ. ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಸುಮಾರು ದಿನಗಳಾದರು ಸಚಿವ ಸಂಪುಟ ವಿಸ್ತರಣೆ ಆಗದಿರುವುದು ಪ್ರತಿ ಪಕ್ಷ ಮತ್ತು ಸಾರ್ವಜನಿಕ ವಲಯದಲ್ಲೊ ಟೀಕೆಗೆ ಗುರಿ ಆಗಿತು. ಇದೀಗ ಇದಕ್ಕೆ ಬಹುತೇಕ ಮುಹೂರ್ತ ನಿಗದಿ ಆಗಿದೆ
ಸಚಿವ ಸಂಪುಟ ವಿಸ್ತಾರಣೆ ಹಿನ್ನೆಲೆ ನಿನ್ನೆಯೆ ದೆಹಲಿಗೆ ತೆರಳಲಿರುವ ಸಿ ಎಂ ಯಡಿಯೂರಪ್ಪ, ಶುಕ್ರವಾರ, ಶನಿವಾರ ಎರಡು ದಿನಗಳ ಕಾಲ ದೆಹಲಿಯಲ್ಲಿಯೆ ಉಳಿಯಲಿದ್ದು ಸಂಪುಟ ವಿಸ್ತರಣೆಗೆ ರಾಷ್ಟ್ರೀಯ ಅದ್ಯಕ್ಷ ಅಮತ್ ಶಾ ಅವರ ಅನುಮೋದನೆಯನ್ನು ಪಡೆದುಕೊಳ್ಳುವು ಸಹ ಖಚಿತವಾಗಿದೆ ಅತೃಪ್ತ ಶಾಸಕರ ರಾಜೀನಾಮೆ ವಿಚಾರ ಇನ್ನೂ ಸುಪ್ರೀಂ ಕೋರ್ಟ್ನಲ್ಲಿ ಇದ್ದು ಮೊದಲ ಹಂತದಲ್ಲಿ ಹಿರಿಯ ಹಾಗು ಒಳ್ಳೆಯ ಹೆಸರುಳ್ಳ ಶಾಸಕರಿಗೆ ಆದ್ಯತೆ ನೀಡಲಿದ್ದಾರೆ. ಜೊತೆಗೆ ಮೂವರು ಮಹಿಳಾ ಶಾಸಕರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗುವ ಸಾದ್ಯತೆ ಇದೆ. ಶಶಿಕಲಾ ಜೊಲ್ಲೆ ಹಾಗು ಪೂರ್ಣಿಮ ನಡುವೆ ಪೈಪೋಟಿ ಇದೆ.
ಆ. 19 ರಂದು ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ಫಿಕ್ಸ್ ಆಗಿದ್ದು, ಹೈಕಮಾಡ್ ಗ್ರೀನ್ ಸಿಗ್ನಲ್ ಬಳಿಕ ಮುಹೂರ್ತ ನಿಗದಿ ಆಗುತ್ತದೆ. ಪಕ್ಷೇತರ ಶಾಸಕ ನಾಗೇಶ್ ಗು ಆರಂಭದಲ್ಲೆ ಸಚಿವ ಸ್ಥಾನ ನೀಡಲಿದ್ದು. ವಿವಾದ ಬಗೆಹರಿದ ಬಳಿಕ ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಉದ್ದೇಶ ಇದೆ ಎನ್ನಲಾಗಿದೆ.
ಒಟ್ಟಾರೆ, ಪ್ರದೇಶವಾರು, ಜಾತಿ ಲೆಕ್ಕಾಚಾರ, ಅನುಭವದ ಆದಾರದ ಮೇಲೆ ಡಿಸಿಎಂ ಗಳ ಸಂಖ್ಯೆಯನ್ನು ಹೆಚ್ಚಿಸಲುಬಹುದು. 106 ಶಾಸಕರ ಬೆಂಬಲದೊಂದಿಗೆ ಸದನದಲ್ಲಿ ಬಹುಮತ ಸಾಭಿತು ಮಾಡಿದ ಬಿ ಎಸ್, ಯಡಿಯೂರಪ್ಪ ಯಾರಿಗೆಲ್ಲಾ ಸಚಿವ ಸ್ಥಾನ ನೀಡಬೇಕು ಎಂಬ ಪಟ್ಟಿಯನ್ನು ಈಗಾಗಲೇ ಬಿಜೆಪಿ ಹೈಕಮಾಂಡ್ಗೆ ನೀಡಿದ್ದಾರೆ ಎನ್ನಲಾಗಿದೆ.
ಬಲ್ಲ ಮೂಲಗಳ ಪ್ರಕಾರ ಹೈಕಮಾಂಡ್ಗೆ ನೀಡಿರುವ ಪಟ್ಟಿಯಲ್ಲಿ ಈ ಕೆಳಕಂಡವರುಗಳ ಹೆಸರುಗಳಿವೆ ಎನ್ನಲಾಗಿದೆ.
1)ಶ್ರೀರಾಮುಲು, ವಾಲ್ಮೀಕಿ
2)ಮಾದುಸ್ವಾಮಿ ಲಿಂಗಾಯತ
3)ಉಮ್ಮೇಶ್ ಕತ್ತಿ ಲಿಂಗಾಯತ
4) ಕೆ.ಎಸ್ ಈಶ್ವರಪ್ಪ ಕುರುಬ
5) ಗೋವಿಂದ ಕಾರಜೋಳ ದಲಿತ ಬಲಗೈ
6) ಆರ್ ಅಶೋಕ ಒಕ್ಕಲಿಗ
7) ಡಾ ಅಶ್ವಥ ನಾರಾಯಣ ಒಕ್ಕಲಿಗ
8) ಬಸವರಾಜ್ ಬೊಂಮ್ಮಾಯಿ ಲಿಂಗಾಯತ
9) ಬಸವರಾಜ್ ಪಾಟೀಲ ಯತ್ನಾಳ ಲಿಂಗಾಯತ
10) ನಾಗೇಶ್ ಪಕ್ಷೇತರ/ ದಲಿತ ಬಲಗೈ
11) ಕೆ ಜೆ ಬೋಪೈಯ್ಯ ಒಕ್ಕಲಿಗ
12) ಎಂ. ಪಿ ರೇಣುಕಾಚಾರ್ಯ ಲಿಂಗಾಯತ
13) ಅಂಗಾರ ದಲಿತ
14) ಹಾಲಾಡಿ ಶ್ರೀ ನಿವಾಸ ಶೆಟ್ಟಿ
15) ಕೋಟ ಶ್ರೀ ನಿವಾಸ ಪೂಜಾರಿ, ಬಿಲ್ಲವ (ಒಬಿಸಿ)
16) ಶಶಿಕಲಾ ಜೊಲ್ಲೆ ಲಿಂಗಾಯತ
17) ಪೂರ್ಣಿಮಾ ಯಾದವ