ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಶಿಕ್ಷಕರ ಕಾರ್ಯಾಗಾರ

ಮೇ-21, ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಶಿಕ್ಷಕರಿಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಜನಮಿಡಿತ ಪತ್ರಿಕೆಯ ಸಂಪಾದಕರಾದ ಜಿ.ಎಂ.ಆರ್.ಆರಾಧ್ಯ ನೆರವೇರಿಸಿ ಶಿಕ್ಷಕ ವೃತ್ತಿಯ ಪಾವಿತ್ರ್ಯತೆ ಹಾಗೂ ಸಮಾಜದಲ್ಲಿ ಕಲಿಸುವ ಗುರುವಿಗೆ ಇರುವ ಬೆಲೆಯ ಬಗ್ಗೆ ಮಾತನಾಡಿ ನಿರಂತರ ಅಧ್ಯಯನ, ಪುಸ್ತಕ ಓದುವ ಅಭ್ಯಾಸಗಳು ಮತ್ತು ತರಗತಿಯಲ್ಲಿ ಮಕ್ಕಳ ಪ್ರಗತಿಗೆ ಹೊಸ ಚಿ0ತನೆಗಳನ್ನು ರೂಪಿಸಿಕೊಳ್ಳಲು ಕರೆನೀಡಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಡಾ. ಹೆಚ್.ವಿ ವಾಮದೇವಪ್ಪ ಅವರು ‘ಪರಿಣಾಮಕಾರಿ ಬೋಧನೆ ಒಂದು ಕಲೆ’ ವಿಷಯದ ಕುರಿತು ಉಪನ್ಯಾಸ ನೀಡಿ ಶಿಕ್ಷಕರು ಮಕ್ಕಳನ್ನು ಕಲಿಕೆಗೆ ಸಿದ್ಧಗೊಳಿಸುವ ಮುನ್ನ ಉತ್ತಮ ಯೋಜನೆ ಮತ್ತು ಉದ್ದೇಶಗಳನ್ನು ಹಾಕಿಕೊಂಡು ಮಕ್ಕಳ ಕಲಿಕೆಯಲ್ಲಿ ಪ್ರಗತಿಯನ್ನು ಸಾಧಿಸಿ ಎಂದರು ಅದರ ಜೊತೆಗೆ ಜೀವನ ಕೌಶಲ್ಯಗಳು ಮತ್ತು ಮೌಲ್ಯಮಾಪನದ ವಿಧಗಳ ಬಗ್ಗೆ ಸoಕ್ಷಿಪ್ತ ಮಾಹಿತಿಯನ್ನು ನೀಡಿದರು.

ಎರಡನೇ ವಿಶೇಷ ಉಪನ್ಯಾಸಕರಾಗಿ ಡಾ. ದಾದಪೀರ್ ನವಿಲೆಹಾಳ್ ಅವರು ‘ನಿರಂತರ ಅಧ್ಯಯನ ಶೀಲತೆ ಶಿಕ್ಷಕನ ಆಸ್ತಿ’ ಎಂಬ ವಿಷಯದ ಕುರಿತು ವಿಚಾರ ಮಂಡಿಸುತ್ತ ಯಾವುದೋ ಒಂದು ವಿಷಯವನ್ನು ಮಕ್ಕಳಿಗೆ ತಿಳಿಸುವುದು ಬೋಧನೆಯಲ್ಲ ಅದನ್ನು ಪ್ರಸ್ತುತ ಪರಿಸ್ಥಿತಿಗೆ ಅನ್ವಯಿಸುವುದೇ ಬೋಧನೆ ಎಂದು ತಿಳಿಸಿದರು. ಹಳೆಯ ಕಥೆಗಳನ್ನು ಹಾಗೆಯೇ ಹೇಳುವ ಪದ್ಧತಿ ಬದಲಾಗಬೇಕು ಶಿಕ್ಷಕ ಅದನ್ನು ಸೃಜನಶೀಲತೆಯಿಂದ ವಿಸ್ತರಿಸಿ ಮಕ್ಕಳ ಆಸಕ್ತಿಯನ್ನು ಬೆಳೆಸಬೇಕು. ಪ್ರಸ್ತುತ ಸಮಾಜಕ್ಕೆ ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಕೃತಿಗಳು ಎಷ್ಟೊಂದು ವಿಮರ್ಶಕವಾಗಿವೆ ಎಂಬುದನ್ನು ಪ್ರಸ್ತುತತೆಗೆ ಅನ್ವಯಿಸಿ ಉದಾಹರಿಸಿದರು.

ಮಧ್ಯಾಹ್ನ 3 ಗಂಟೆಯಿಂದ ಡಾ. ಲೋಕೇಶ ಅಗಸನ ಕಟ್ಟೆಯವರು ‘ಸೃಜನಶೀಲತೆ ಮತ್ತು ಕಲಿಕೆ’ ಎಂಬ ವಿಷಯದ ಕುರಿತು ಶಿಕ್ಷಕರಿಗೆ
ಉಪನ್ಯಾಸ ನೀಡಿ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸಲು ಶಿಕ್ಷಕನು ತರಗತಿಯನ್ನು ಸದಾ ಲವಲವಿಕೆಯಲ್ಲಿಟ್ಟಿರಬೇಕು ಆಗ ಮಾತ್ರ ಮಕ್ಕಳಲ್ಲಿ ಆಸಕ್ತಿ ಬೆಳೆದು ಕಲಿಕೆಗೆ ಸಿದ್ಧರಾಗುತ್ತಾರೆ. ಮಕ್ಕಳಲ್ಲಿ ಕುತೂಹಲ ಮುಡಿಸುವಂತಹ ನಿರೂಪಣೆಯನ್ನು ಶಿಕ್ಷಕ ತರಗತಿಯಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಕರು ಸರಳತೆ ಮತ್ತು ಬೋಧನೆಯಲ್ಲಿ ವಿಷಯದ ಖಚಿತತೆಯನ್ನು ಬೆಳೆಸಿಕೊಂಡು ಮುಂದುವರಿಯಬೇಕು ಎಂದು ಕರೆಕೊಟ್ಟರು.

ಸಂಜೆ 4 ಗಂಟೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾದ ಸು.ರಾಮಣ್ಣನವರು ‘ಶಿಕ್ಷಕ ಕೇವಲ ಶಿಕ್ಷಕನಲ್ಲ ಗುರು ಆಗುವುದು ಹೇಗೆ?’. ಎಂಬ ವಿಷಯದ ಕುರಿತು ಉಪನ್ಯಾಸದಲ್ಲಿ ಮಕ್ಕಳನ್ನು ಬುದ್ದಿವಂತರಾಗಿ ಮಾಡುವುದರ ಜೊತೆ ವಿದ್ಯಾವಂತರನ್ನಾಗಿಸುವಲ್ಲಿ ಧನ್ಯತೆಯನ್ನು ಕಾಣಬೇಕು. ಪ್ರಪಂಚದಲ್ಲಿ ಎಲ್ಲ ಕಡೆ ಸಿಗುವ ಶಿಕ್ಷಣಕ್ಕಿಂತ ಅತ್ಯತ್ತಮ ಶಿಕ್ಷಣ ಭಾರತದಲ್ಲಿ ಸಿಗುತ್ತಿದೆ ಆದ್ದರಿಂದಲೇ ಭಾರತವನ್ನು ಹಿರಿಯಣ್ಣ ಎನ್ನುತ್ತೆವೆ. ರಾಷ್ಟ್ರನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯವಾದದು ಉದ್ಯೋಗವನ್ನು ಬಯಸಿ ವೃತ್ತಿ ಮಾಡಬೇಡಿ ನವಭಾರತದ ನೇತಾರರನ್ನು ಸೃಷ್ಟಿಸುವ ಕೆಲಸವನ್ನು ಗುರುವಿನ ಸ್ಥಾನದಲ್ಲಿ ನಿಂತು ನೀವುಗಳು ಬಹು ಜವಾಬ್ದಾರಿಯುತವಾಗಿ ಮಾಡಬೇಕು ರಾಷ್ಟ್ರಕ್ಕಾಗಿ ಜೀವನವನ್ನು ಅರ್ಪಿಸುವವರಾಗಬೇಕೆಂದು ಎಂದು ತಿಳಿಸಿದರು.

Leave a Reply

Your email address will not be published. Required fields are marked *