ಇಸ್ರೋ ನಮ್ಮ ಹೆಮ್ಮೆ; ಭಿನ್ನ ಕಕ್ಷೆಯ ಉಪಗ್ರಹಗಳನ್ನು ಉಡಾಯಿಸುವ ಪ್ರಪ್ರಥಮ ಪ್ರಯೋಗಕ್ಕೆ ಇಸ್ರೊ ಸಜ್ಜು.
ಅಂತರಿಕ್ಷದಲ್ಲಿ ಸೆಂಚುರಿ ಸೇರಿದಂತೆ ಹೊಸ ಕ್ರಮಗಳನ್ನು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಮತ್ತೊಂದು ಮಹತ್ವದ ಮೈಲುಗಲ್ಲು ಸ್ಥಾಪನೆಗೆ ಸಜ್ಜಾಗಿದೆ. ಏಪ್ರಿಲ್ 1 ರಂದು ಪಿಎಸ್ಎಲ್ ಸಿ5 ಗಗನ ನೌಕೆಯನ್ನು ಉಡಾವಣೆ ಮಾಡಲಿದೆ. ಮೂರು ಭಿನ್ನ ಕಕ್ಷೆ ಉಪಗ್ರಹಗಳನ್ನು ಸೇರಿಸುವ ಪ್ರಪ್ರಥಮ ಪ್ರಯೋಗ ಇದಾಗಿದೆ.
ಪಿಎಸ್ಎಲ್ ಸಿ 45 ಮೂಲಕ ಒಟ್ಟು 30 ಉಪಗ್ರಹಗಳು ನಭಕ್ಕೆ ಚಿಮ್ಮಲಿದೆ. ಸುಧಾರಿತ ವಿದ್ಯಮಾನ ಬೇಹುಗಾರಿಕೆ ಉಪಗ್ರಹ ಏಮಿಸ್ಟ್ಯಾಟ್ ಸೇರಿದಂತೆ ಇತರ 29 ವಾಣಿಜ್ಯ ಉಪಗ್ರಹಗಳು ಉಡಾವಣೆಯಾಗಲಿವೆ.
ಪಿಎಸ್ಎಲ್ ಸಿ45 ಮಾರ್ಚ್ 21 ರಂದೇ ಉಡಾವಣೆಯಾಗಬೇಕಿತ್ತು. ಆಂತರಿಕ ತಾಂತ್ರಿಕ ವ್ಯವಸ್ಥೆ ಮತ್ತು ಇತರ ತಾಂತ್ರಿಕ ಕಾರಣಗಳಿಂದ ಉಡಾವಣೆ ವಿಳಂಬವಾಯಿತು ಎಂದು ವಿಶ್ವ ಅಧ್ಯಕ್ಷ ಕೆ ಶಿವನ್ ತಿಳಿಸಿದ್ದಾರೆ. ಪಿಎಸ್ಎಲ್ ಸಿ 45 ಇಸ್ರೋದ ಪ್ರಥಮ ತ್ರಿ ಕಕ್ಷೆ ಕಾರ್ಯಾಚರಣೆಯಾಗಿದೆ. ಹಾಗೂ ಇದೇ ಮೊದಲ ಬಾರಿಗೆ ರಾಕೆಟ್ನ ನಾಲ್ಕನೇ ಹಂತದಲ್ಲಿ (ಪಿ ಎಸ್ 4) ಸೌರ ಘಟಕ ಬಳಸಲಾಗುತ್ತಿದೆ ಎಂದು ಶಿವನ್ ವಿವರಿಸಿದ್ದಾರೆ.
ಏಪ್ರಿಲ್ 1 ರಂದು ಉಡಾವಣೆಯಾಗಲಿರುವ ಪಿಎಸ್ಎಲ್ ಸಿ 45 ಮೂರು ಭಿನ್ನ ಕಕ್ಷೆಗಳಲ್ಲಿ ಉಪಗ್ರಹಗಳನ್ನು ಇರಿಸಲಿದೆ ಎಂದು ಕ್ರಮ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ (ಎಸ್ಎಸ್ಸಿ) ನಿರ್ದೇಶಕ ಎಸ್ ಸೋಮನಾಥ್ ಖಚಿತಪಡಿಸಿದ್ದಾರೆ.