ಮನೆ ಮದ್ದಾಗಿ ಲೋಳೆರಸ ಪಾತ್ರ
ಆಯುರ್ವೇದದಲ್ಲಿ ಬಹಳ ಬೇಡಿಕೆಯಿರುವ ಅಲೊವೆರಾ ಅಥವಾ ಲೋಳೆಸರ ಗಿಡದಲ್ಲಿ ಅಮಿನೊ ಆಸಿಡ್, ವಿಟಮಿನ್ಗಳಾದ ಎ, ಎಫ್, ಸಿ ಮತ್ತು ಬಿಗಳಿರುತ್ತವೆ.ಲೋಳೆಸರದ ಎಲೆಯಲ್ಲಿ ಸಿಗುವ ಅಂಟು ರೀತಿಯ ಹೇರಳವಾದ ದ್ರವವನ್ನು ದೇಹದ ಯಾವುದೇ ಭಾಗಗಳಿಗೆ ಸುಟ್ಟು ಗಾಯವಾದ ತಕ್ಷಣವೇ ಹಚ್ಚಿದಲ್ಲಿ ಗಾಯದ ನೋವು, ಉರಿ ಸ್ವಲ್ಪ ಹೊತ್ತಿನಲ್ಲಿಯೇ ಕಡಿಮೆಯಾಗುತ್ತದೆ.
ಲೋಳೆಸರ ಒಂದು ಬಹುಪಯೋಗಿ ಸಸ್ಯವಾಗಿದ್ದು, ಇದು ಭಾರತದಲ್ಲಿ ಮಾತ್ರವಲ್ಲದೇ, ಪ್ರಪಂಚದಾದ್ಯಂತ ಒಂದು ಅತ್ಯುತ್ತಮ ಮನೆ ಔಷಧಿಯ ಮೂಲವೆಂದು ಅನುಮೋದಿಸಲ್ಪಟ್ಟಿದೆ.
ತ್ವಚೆಯ ರಕ್ಷಣೆಯಲ್ಲಿ ಲೋಳೆಸರ ಅತ್ಯಂತ ಉಪಕಾರಿ.
ಮುಖದ ಮೇಲೆ ನೆರಿಗೆ, ಕಪ್ಪು ಕಲೆ, ಮೊಡವೆ ಕಾಣಿಸಿಕೊಂಡಲ್ಲಿ ಲೋಳೆಸರದ ಜೆಲ್ನ್ನು ಒಂದು ತಿಂಗಳವರೆಗೆ ಹಚ್ಚುತ್ತಾ ಬಂದರೆ ಕಲೆ, ಸುಕ್ಕುಗುಟ್ಟುವಿಕೆ ಮಾಯವಾಗಿ ಹೊಸ ಕಾಂತಿ ಬರುತ್ತದೆ.ಒಣ ಚರ್ಮದವರಿಗೆ ಲೋಳೆಸರದ ಜೆಲ್ ಉತ್ತಮ. ಮುಖಕ್ಕೆ ಮೇಕಪ್ ಮಾಡಿಕೊಳ್ಳುವ ಮೊದಲು ಇದನ್ನು ಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟ ನಂತರ ಮುಖ ತೊಳೆದುಕೊಂಡು ಆಮೇಲೆ ಮೇಕಪ್ ಮಾಡಿಕೊಳ್ಳಬೇಕು.
ಸುಟ್ಟ ಗಾಯಗಳಿಗೆ ಉತ್ತಮ ಔಷಧಿ
“ಲೋಳೆಸರ ವು ಸ್ವಾಭಾವಿಕವಾಗಿ ಒಂದು ತಂಪುಕಾರಕವಾಗಿದ್ದು, ಇದು ಸುಟ್ಟ ಗಾಯಗಳಿಗೆ ಅತ್ಯುತ್ತಮ ಔಷಧಿಯಾಗಿದೆ. ಇದು ತ್ವಚೆಯ ಅಂಗಾಂಶಗಳನ್ನು ಬಹು ಬೇಗನೆ ದುರಸ್ತಿಪಡಿಸುತ್ತದೆ”. ಈ ಚಮತ್ಕಾರೀ ಸಸ್ಯವು ಶೀತಲ ಪರಿಣಾಮವನ್ನು ಹೊಂದಿದ್ದು, ಅದರೊಂದಿಗೆ ಕೋಶಗಳ ಪುನರುತ್ಪತ್ತಿಯಲ್ಲಿಯೂ ಸಹಕಾರಿಯಾಗಿದೆ. ಈ ಕಾರಣದಿಂದಲೇ ಇದು ಘಾಸಿಗೊಂಡ ತ್ವಚೆಯ ಅಂಗಾಂಶಗಳನ್ನು ಪುನರ್ನಿರ್ಮಿಸುತ್ತದೆ.
ಜೀರ್ಣಾಂಗವ್ಯೂಹವನ್ನು ತoಪುಗೊಳಿಸಲು
ಲೋಳೆಸರಯು ಪಿತ್ತ ಶಮನಕಾರೀ ಮೂಲಿಕೆಯ ರೂಪದ ಅತೀ ಮುಖ್ಯವಾದ ಚಿಕಿತ್ಸಾತ್ಮಕ ಪ್ರಯೋಜನವನ್ನು ಹೊಂದಿದೆ. ಇದು ಆಮ್ಲೀಯತೆ (acidity), ಉದರ ಬೇನೆ (gastritis) ಅನ್ನು ಕಡಿಮೆ ಮಾಡುತ್ತದೆ ಮತ್ತು ಕರುಳಿನ ಹುಣ್ಣುಗಳು ಮತ್ತು ಉರಿಯನ್ನು ಗುಣಪಡಿಸುತ್ತದೆ. ಲೋಳೆಸರ ವು ತ್ವಚೆಯ ಉರಿಯನ್ನು ಶಮನಗೊಳಿಸುವoತೆಯೇ, ಶರೀರದ ಅಂತರ್ಯದ ಉರಿಯನ್ನೂ ಕೂಡ ತಮ್ಪಾಗಿಸಬಲ್ಲದು. ಇದಕ್ಕೆ ನಿಮ್ಮ ಜೀರ್ಣ ಪಥವನ್ನು (digestive tract) ಆಹ್ಲಾದಗೊಳಿಸುವುದು ಮಾತ್ರವಲ್ಲದೇ, ನೀವು ಭರ್ಜರಿಯಾದ ಹಬ್ಬದ ಊಟವನ್ನು ಉಂಡ ಬಳಿಕ ನಿಮ್ಮ ಜೀರ್ಣಾಂಗವ್ಯೂಹವನ್ನು ತoಪುಗೊಳಿಸಲು ಒಂದು ಮಹೋನ್ನತ ಮಾರ್ಗವಾಗಿದೆ.
ಈ ಸಸ್ಯದ ಔಷಧೀಯ ಚಿಕಿತ್ಸಾತ್ಮಕ ಗುಣಗಳು ಶರೀರದ ಒಳಗೂ ಮತ್ತು ಹೊರಗೂ ಉಪಯುಕ್ತವಾಗಿದ್ದು, ಈ ಕಾರಣದಿಂದಾಗಿ ಇದು ಅನೇಕ ಸಾವಯವ ದ್ರಾವಣಗಳ ತಯಾರಕರ ಪಾಲಿಗೆ ಒಂದು ವರದಾನದಂತಿದೆ. ಪುರುಷರು ಶೇವ್ ಮಾಡಿಕೊಳ್ಳುವ ಸಂದರ್ಭದಲ್ಲಿ ಗಾಯಗಳಾದರೆ ಲೋಳೆಸರವನ್ನು ಹಚ್ಚಿಕೊಂಡರೆ ನೋವು, ಗಾಯ, ರಕ್ತ ಬರುವುದು ನಿಲ್ಲುತ್ತದೆ. ಚಳಿಗಾಲದಲ್ಲಿ ಚರ್ಮ ಒಡೆಯುವುದು, ಒಣಗುವುದು ಸಾಮಾನ್ಯ. ಆಗ ಲೋಳೆಸರದ ದ್ರವವನ್ನು ಜೇನಿನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ತೊಳೆದರೆ ಮುಖ ಕಾಂತಿಯುಕ್ತವಾಗುತ್ತದೆ.ದೇಹದಲ್ಲಿ ಕೊಬ್ಬು ಸಂಗ್ರಹವಾದಾಗ ಇಲ್ಲವೇ ಗರ್ಭಿಣಿ ಮಹಿಳೆಯರಿಗೆ ಹೊಟ್ಟೆಯ ಭಾಗದಲ್ಲಿ ಗೆರೆಗಳು ಉಂಟಾದರೆ ಆ ಭಾಗದಲ್ಲಿ ನಿತ್ಯವೂ ಲೋಳೆಸರವನ್ನು ಹಚ್ಚುತ್ತಾ ಬಂದರೆ ಕೆಲ ದಿನಗಳಲ್ಲಿ ಗೆರೆಗಳು ಮಾಯವಾಗುತ್ತದೆ.ಆಸಿಡಿಟಿ ಸಮಸ್ಯೆ ಇರುವವರು ಲೋಳೆಸರದ ದ್ರವವನ್ನು ಬೆಳಿಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಾ ಬಂದರೆ ಸಮಸ್ಯೆ ಕಡಿಮೆಯಾಗುತ್ತದೆ.
ಲೋಳೆರಸಾಧಾ ಉಪಯೋಗಗಳು :-
- ಇದನ್ನು ಸೌಂದರ್ಯವರ್ಧಕಗಳು ಮತ್ತು ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಬಳಸುತ್ತಾರೆ.
- ಜೀರ್ಣಕ್ರಿಯ ವೃದ್ಧಿ ಆಗುವದಕ್ಕು, ಎದೆ ಉರಿಯನ್ನು ಕಡೆಮೆಮಾಡುವುದರಲ್ಲಿ, ಮತ್ತು ಅಜೀರ್ಣ ಕಾರಣವಾಗಿ ಬರುವ ವ್ಯಾಧಿಗಳ ನಿವಾರಣೆಗೆ ಇದರ ರಸ ಚೆನ್ನಾಗಿ ಕೆಲಸಮಾಡುತ್ತದೆ.
- ಇದರ ಸಾರ/ರಸವನ್ನು ಲೋಷನ್ಗಳು, ಕ್ರೀಂಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
- ದಂತಕ್ಷಯ ನಿವಾರಣ ಮಾಡುತ್ತದೆ.
- ಲೋಳೆಸರದ ರಸ/ಎಣ್ಣೆಯಂತಹ ಅಂಶವು ತಲೆಕೂದಲು ನೆರಯುವುದನ್ನು ಮತ್ತು ಬಿಳುಪಾಗುದನ್ನು ಕಡಿಮೆಮಾಡುತ್ತದೆ
- ಆಯುರ್ವೇದದ ಪ್ರಕಾರ ಲೋಳೆಸರದ ಅಂಟು ರಸವನ್ನು ಜೇನಿನೊಂದಿಗೆ ಸತತವಾಗಿ ೩ತಿಂಗಳು ಸೇವಿಸುವುದರಿಂದ ಯಾವುದೇ ತರಹದ ಮುಟ್ಟಿನ ತೊಂದರೆಗಳು ಹಾಗು ಆ ಸಮಯದಲ್ಲಿ ಉಂಟಾಗುವ ಸೋಂಕುಗಳು ನಿವಾರಣೆ ಹೊಂದುತ್ತದೆ.
- ಲೋಳೆಸರ ಹಚ್ಚುವುದರಿಂದ ನೋವು ಮತ್ತು ಊತ ಕಡಿಮೆಯಾಗುತದೆ.