ಹಿರಿಯ ನಟ ಅಶ್ವಥ್ ಅವರು “ಜನಮಿಡಿತ” ಕುರಿತು ಹೀಗೆಂದಿದ್ದರು…..

ಹಿರಿಯ ನಟ ಕೆ.ಎಸ್. ಅಶ್ವಥ್ ಅವರು ದಶಕಗಳ ಹಿಂದೆ ದಾವಣಗೆರೆಗೆ ಆಗಮಿಸಿದ್ದಾಗ “ಜನಮಿಡಿತ” ಕಛೇರಿಗೆ ಭೇಟಿ ನೀಡಿದ್ದರು. ಸ್ವಾಭಿಮಾನಿಯೂ, ಶಿಸ್ತಿನ ಸಿಪಾಯಿಯೂ ಆಗಿದ್ದ ಅವರು ನಮ್ಮ ಪತ್ರಿಕೆಯ ಸಿಬ್ಬಂದಿಯೊಂದಿಗೆ ಕೆಲ ನಿಮಿಷ ಮಾತನಾಡಿದರು.

ಅಶ್ವಥ್

“ನೋಡ್ರೀ, ಪತ್ರಿಕೆ ಚಿಕ್ಕದಿರಬಹುದು, ಆದರೆ ಅದಕ್ಕೆ ಇಲ್ಲಿ ತುಂಬಾ ಮಹತ್ವವಿದೆ. ದಿನಪತ್ರಿಕೆ ಆಗಿರುವುದರಿಂದ ಸದಾ ಜಾಗೃತರಾಗಿರಿ. ನೋಡೀಪ್ಪ ಒಂದು ಸುದ್ದಿ ಮಿಸ್ ಆದ್ರೂ ಪರವಾಗಿಲ್ಲ, ಯಾವುದೇ ಕಾರಣಕ್ಕೂ ತಪ್ಪು ಮಾಹಿತಿ ಮಾತ್ರ ಕೊಡಬೇಡಿಪ್ಪ” ಎಂದು ಸಲಹೆಯನ್ನೂ ನೀಡಿದ್ದರು.

“ನಾಗರಹಾವು” ಚಿತ್ರದ ಮೇಷ್ಟ್ರು ಪಾತ್ರವೂ ಸೇರಿದಂತೆ ತಾವು ನಟಿಸಿದ ಪ್ರತಿ ಚಿತ್ರದಲ್ಲೂ ತಮ್ಮದೇ ಆದ ಅಮೋಘ ಅಭಿನಯದಿಂದ ಇಡೀ ಕನ್ನಡ ಚಿತ್ರರಂಗದ ಮನಗೆದ್ದಿದ್ದ ಅಶ್ವಥ್ ಅವರು “ಕೈ ಚಾಚಿ ನಿಲ್ಲಬಾರದು” ಎಂಬುದನ್ನು ಅರ್ಥ ಮಾಡಿಕೊಂಡು ಬದುಕಿರುವವರೆಗೂ ಹಾಗೇ ಇದ್ದರು, ಮಾದರಿಯಾದರು.
ಕೆಲ ತಿಂಗಳ ಕೆಳಗಷ್ಟೇ ಅವರ ಪುತ್ರ ಶಂಕರ್ ಅಶ್ವಥ್ ಅವರು ಸ್ವಾಭಿಮಾನಿ ಬದುಕು ಸಾಗಿಸಲು ಬೆಂಗಳೂರಲ್ಲಿ ಕ್ಯಾಬ್ ಒಂದನ್ನು ಓಡಿಸುತ್ತಿರುವ ಬಗ್ಗೆ ನಾವು ನೀವೆಲ್ಲ ಕೇಳಿದ್ದೇವೆ.
“ಸ್ವಾಭಿಮಾನಿ ಕುಟುಂಬಕ್ಕೆ ಹ್ಯಾಟ್ಸಪ್”

 

Leave a Reply

Your email address will not be published. Required fields are marked *