ರೈಲುಗಳ ವಿಳಂಬದಿಂದ ಬೇಸತ್ತಿದ್ದೀರಾ……? ಸೆಪ್ಟೆಂಬರ್ ನಿಂದ ಚಿಂತೆ ಬೇಡ; ಸರಿಯಾದ ಸಮಯ ಪಾಲನೆಗೆ ಇಸ್ರೋ ಜೊತೆ ರೈಲ್ವೇ ಒಪ್ಪಂದ
ನವದೆಹಲಿ ಜುಲೈ 15 ಸಂಚಾರ ವ್ಯವಸ್ಥೆಯಲ್ಲಿ ದೇಶದ ಸಂಪರ್ಕ ಸಾಧನವಾಗಿರುವ ರೈಲ್ವೆ ಪ್ರಯಾಣ ಭಾರತದಲ್ಲಿ ಬಹುತೇಕ ಟೀಕೆಗೆ ಗುರಿಯಾಗಿರುವುದು ತಿಳಿದ ವಿಷಯವೇ ಆಗಿದೆ. ರೈಲುಗಳ ವಿಳಂಬ , ವಿಳಂಬದ ಸಮಯ ತಿಳಿಸಿದರೂ ಇನ್ನಷ್ಟು ವಿಳಂಬವಾಗಿ ಆಗಮಿಸಿ ನಿರ್ಗಮಿಸುವ ಪ್ರಯಾಣಿಕ ರೈಲುಗಳು, ಎಷ್ಟು ಬಾರಿ ದಿನಗಟ್ಟಲೆ ತಡವಾಗಿ ಆಗಮಿಸುವ ದೂರದ ಊರುಗಳಿಂದ ಬರುವ ರೈಲುಗಳು….. ಹೀಗೆ ಪ್ರಯಾಣಿಕರು ಪರದಾಡಿರುವುದು ಈಗ ಆಗಿದ್ದು ಆಗಿ ಹೋಗಿದೆ ಎಂಬ ಸಮಯ ಬಂದಿದೆ. ಹೌದು, ಇನ್ನುಮುಂದೆ ಭಾರತೀಯ ರೈಲುಗಳು ಸಮಯ ಪರಿಪಾಲಿಸಿ ಉತ್ತಮ ಸೇವೆ ಸಲ್ಲಿಸಲು ರೈಲ್ವೆ ಇಲಾಖೆ ಇಸ್ರೋ ಜೊತೆಗೆ ಒಪ್ಪಂದವೊಂದನ್ನು ಮಾಡಿಕೊಳ್ಳುತ್ತಿದ್ದು ಅಂದುಕೊಂಡಂತೆ ಆದರೆ ಇದೇ ಸೆಪ್ಟೆಂಬರ್ ವೇಳೆಗೆ ಈ ಕ್ರಮ ಜಾರಿಗೆ ಬರಲಿದೆ.
ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸದ್ಯದಲ್ಲಿ ಇಸ್ರೋ ಜೊತೆಗೆ ರೈಲ್ವೆ ಇಲಾಖೆ ಕೈಜೋಡಿಸಲಿದ್ದು, ರೈಲುಗಳ ಸಮಯ ಪರಿಪಾಲನೆ ಮಾಡುವಂತಹ ಹೊಸ ಪ್ರಾಜೆಕ್ಟ್ ಕೈಗೊಳ್ಳಲಿದೆ ಎಂದು ತಿಳಿಸಿದೆ. ಜಿಪಿಎಸ್, ವೈಫೈ, ಸಿಸಿಟಿವಿ ಬಳಸಿಕೊಂಡು ಟ್ರೈನ್ ಸರಿಯಾದ ಸಮಯಕ್ಕೆ ನಿಲ್ದಾಣ ತಲುಪಬಹುದು ಹೇಗೆ ? ಎಂಬುದು ಈ ಯೋಜನೆ ಉದ್ದೇಶವಾಗಿದೆ. ಇತ್ತೀಚೆಗಷ್ಟೇ ರೈಲುಗಳ ಸಂಚಾರಕ್ಕೆ ಹೆಚ್ಚು ಒತ್ತು ನೀಡುವಂತೆ ರೈಲ್ವೆ ಸಚಿವರು ಇಲಾಖೆಗೆ ಖಡಕ್ ಸೂಚನೆ ನೀಡಿದ್ದರು. ಕೊಟ್ಟರೆ ರೈಲುಗಳ ಸಂಚಾರ ಅವಧಿಯನ್ನು ಹೆಚ್ಚಳ ಮಾಡುವ ಮೂಲಕ ಸಮಯಪಾಲನೆ ಮಾಡುವ ಕ್ರಮ ಕೈಗೊಂಡಿದ್ದರು. ಎರಡು ಊರುಗಳ ನಡುವಿನ ಸಂಚಾರ 14 ಗಂಟೆ ಇದ್ದರೆ , ಅದರ ಅವಧಿ 30 ಅಥವಾ 60 ನಿಮಿಷಗಳ ಹೆಚ್ಚಳ ಮಾಡಲಾಗಿತ್ತು. ರೈಲುಗಳ ಸಮಯಪಾಲನೆ ಮಾಡಲು ಅಧಿಕಾರಿಗಳು ಈ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇದು ಚಾಪೆ ಕೆಳಗೆ ನುಗ್ಗಿದರೆ, ಅಧಿಕಾರಿಗಳು ರಂಗೋಲಿ ಕೆಳಗೆ ತೂರುವ ರೀತಿಯದ್ದಾಗಿತ್ತು. ರೈಲು ಸಮಯ ಪಾಲನೆ ಮಾಡದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ಎಂದು ರೈಲ್ವೆ ಸಚಿವರು ಎಚ್ಚರಿಸಿದ್ದ ಬೆನ್ನಲ್ಲೇ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದರು.
ರೈಲ್ವೆ ಹಳಿಗಳ ರಿಪೇರಿ ಹಾಗೂ ಇನ್ನಿತರ ಕಾರಣಗಳಿಂದ ರೈಲುಗಳು ಕೆಲವೊಮ್ಮೆ ತಡವಾಗಿ ಆಗಮಿಸುತ್ತವೆ. ರೈಲುಗಳ ಸಂಚಾರ ಅವಧಿಯ ಬಗ್ಗೆ ರೈಲ್ವೆ ಇಲಾಖೆ ಮತ್ತು ಇಸ್ರೋ ಸೇರಿ ಹೊಸ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಅದು ಸೆಪ್ಟೆಂಬರ್ ವೇಳೆಗೆ ಜಾರಿಯಾಗಲಿದೆ.