ರೈತರ ಸಾಲ ತೀರಿಸಿ ಮಾತು ಉಳಿಸಿಕೊಂಡು ಮಾದರಿಯಾದ ಅಮಿತಾಬ್
ತಮ್ಮ ಅಮೋಘ ಅಭಿನಯದ ಮೂಲಕ ಕೋಟಿ ಕೋಟಿ ಅಭಿಮಾನಿಗಳ ಮನಗೆದ್ದಿರುವ ಬಾಲಿವುಡ್ ಬಿಗ್ ಬಿ ಅಮಿತಾಬಚ್ಚನ್ ಈಗ ಸಾವಿರಾರು ರೈತರ ಸಾಲ ತೀರಿಸಿ ಮತ್ತೆ ಶಹಬ್ಬಾಸ್ ಅನ್ನಿಸಿಕೊಂದಿದ್ದಾರೆ.
ಹೌದು,ಬಿಹಾರ ರಾಜ್ಯದ 2100 ಬಡ ಕುಟುಂಬದ ರೈತರ ಸಾಲ ತೀರಿಸಿ ತಾವು ಕೇವಲ ಸಿನೆಮಾ ಹೀರೊ ಅಲ್ಲ,ನಿಜ ಜೀವನದ ಹೀರೋ ಅನ್ನಿಸಿಕೊಂದಿದ್ದಾರೆ.
ಅವರು ಸದ್ಯೆ ತೀರಿಸಿರುವ ಸಾಲದ ಮೊತ್ತ 4 ಕೋಟಿ ರೂ ಗಳು.
ಬಹುಶಃ ನಿಮಗೆ ನೆನಪು ಇರ ಬಹುದು..ಒಂದು ಕಾಲದಲ್ಲಿ ಕ್ಯೆ ಸುಟ್ಟುಕೊಂದು ಕೆಲವೇ ಲಕ್ಷಗಳಿಗೆ ಪರದಾಡುತ್ತಿದ್ದ ಬಚ್ಚನ್ ಕುಟುಂಬ ಕೆಟ್ಟ ದಿನಗಳನ್ನು ಅನುಭವಿಸಿದ್ದು..ಅವರ ಮನೆ ಹರಾಜಿಗೆ ಬಂದದ್ದು..ಆಗ ಕೆಲ ಆಪ್ತರು ಅವರು ನೆರವಿಗೆ ಬಂದದ್ದು..ನಂತರ ಕೌನ್ ಬನೆಗ ಕೌರ್ ಪತಿ ಎಂಬ ಕಿರುತೆರೆ ಕಾರ್ಯಕ್ರಮ ಅವರನ್ನು ಮತ್ತೆ ಜನಪ್ರಿಯತೆ ಉತ್ತಂಗ ತಲುಪಿಸಿದ್ದು..ನಂತರ ಹಿಂದುರಿಗಿ ನೋಡದ ಅಮಿತಾಬ್ ಅಂದಿನ ಕಷ್ಟದ ದಿನಗಳನ್ನು ಮರೆಯಲಿಲ್ಲ.
ಅನೇಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದ ಅವರು ಈಗ ಸಾರ್ವಜನಿಕ ವಲಯದಲ್ಲೂ ಮತ್ತು ಸಿನೆಮಾ ವಲಯದದಲ್ಲೂ ಪ್ರಶಂಸೆ ಗೆ ಪಾತ್ರರಾಗಿದ್ದಾರೆ.
ಕನ್ನಡದ ಹೀರೋ ಯಶ್ ಅವರು ತಮ್ಮ ಯಶೋಮಾರ್ಗ ದ ಮೂಲಕ ಅನೇಕ ಹಳ್ಳಿಗಳನ್ನು ದತ್ತು ಪಡೆದು ಸಮಾಜ ಸೇವೆಯಲ್ಲಿ ತೊಡಗಿ ಅಭಿಮಾನಿಗಳು ಹೆಮ್ಮೆ ಪಡುವಂತೆ ಮಾಡಿರುವುದನ್ನು ಈ ಸಂಧರ್ಭದಲ್ಲಿ ಸ್ಮರಿಸಬಹುದು.
ಕೇವಲ ಹಣ,ಕೀರ್ತಿ ಪಡೆದು ತಮ್ಮಷ್ಟಕ್ಕೆ ತಾವು ಇರುವಬದಲು ಎರಡನ್ನು ಗಳಿಸಿರುವ ಸಿನಿಮಾ ಸ್ಟಾರ್ಸ್ ಗಳಿಗೆ ಇದು ಮಾದರಿಯಾಗಲಿ.
ಕೆಲ ಬಾಲಿವುಡ್ ನಟರು ಹಾಗು ಖ್ಯಾತ ಕ್ರೀಡಾ ಪಟುಗಳು ಸಹ ಈ ನಿಟ್ಟಿನಲ್ಲಿ ನಡೆಯುತ್ತಿದ್ದಾರೆಲ್ಲ ಎಂಬುದು ಸಮಾಧಾನಕರ.
ತಮ್ಮ ತಂದೆಯ ಈ ಕಾರ್ಯಕ್ಕೆ ಪುತ್ರ ಅಭಿಷೇಕ್ ಹಾಗೂ ಪುತ್ರಿ ಶ್ವೇತ ಸಹ ಸಾಥ್ ನೀಡಿ ಗಮನ ಸೆಳೆದಿದ್ದಾರೆ.
ಅಮಿತಾಬ್ ಕುಟುಂಬಕ್ಕೆ ಹೃದಯಪೂರ್ವಕ ಧನ್ಯವಾದಗಳು.