ರಾಜಕೀಯ ಪ್ರವೇಶ ಇಲ್ಲ;ಸಿನೆಮಾ ರಂಗವೇ ನನಗೆ ಎಲ್ಲ;ನಟ ಶಿವರಾಜ್ ಕುಮಾರ್
ತಮ್ಮ ಜೀವನದ ಮೊದಲ ಆದ್ಯತೆ ಸಿನೆಮಾ ರಂಗ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ದಾವಣಗೆರೆಯಲ್ಲಿ ತಮ್ಮ ನಿರೀಕ್ಷಿತ “ಟಗರು”ಚಿತ್ರ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒಂದು ಕಿ.ಮಿ.ಗಿಂತಲೂ ಹೆಚ್ಚು ದೂರ ಬೃಹತ್ ಮೆರವಣಿಗೆ ಮೂಲಕ ಶಿವರಾಜ್ ಕುಮಾರ್ ಅವರನ್ನು ಸ್ವಾಗತಿಸಲಾಯಿತು.ಸಾವಿರಾರು ಅಭಿಮಾನಿಗಳು, ಅದರಲ್ಲೂ ಹೆಚ್ಚು ಯುವ ಜನತೆ ಶಿವರಾಜ್ ಕುಮಾರ್ ನೋಡಲು ಆಗಮಿಸಿದ್ದರು,
ಬೃಹತ್ ಜನಸ್ತೋಮ ಉದ್ದೇಶಿಸಿ ಮಾತನಾಡಿದ ಶಿವರಾಜ್ ಕುಮಾರ್ ಅವರು “ಸಿನೆಮಾ ರಂಗದಲ್ಲೇ ಸ್ಪರ್ಧೆ ಮಾಡುವುದು ದೊಡ್ಡ ವಿಚಾರ, ರಾಜಕೀಯ ಪ್ರವೇಶಿಸಿ ನಾನು ಯಾವ ದೇಶವನ್ನು ಆಳಬೇಕಿಲ್ಲ,ಸಿನೆಮಾ ರಂಗವೇ ನನಗೆ ಎಲ್ಲ,ರಾಜಕೀಯ ಪ್ರವೇಶ ಇಲ್ಲವೇ ಇಲ್ಲ”ಎಂದು ಹೇಳಿದರು.
ಪತ್ನಿ ರಾಜಕೀಯದಲ್ಲಿ ಇದ್ದಾರೆ, ಅದು ಅವರ ಆಸಕ್ತಿ, ನಾನಂತೂ ಪ್ರಚಾರಕ್ಕೆ ಹೋಗುವುದಿಲ್ಲ ಎಂದರು.
ಏನಾದ್ರು ಬದಲಾವಣೆ ತರಲು ಸಾದ್ಯ ಎಂಬ ಕಾರಣಕ್ಕೆ ಉಪೇಂದ್ರ ರಾಜಕೀಯ ಪ್ರವೇಶ ಮಾಡಿದ್ದಾರೆ,ಇದು ಅವರ ವ್ಯಯಕ್ತಿಕ ವಿಚಾರ,ಒಬ್ಬ ನಟನಾಗಿ ನಾನು ಅವರನ್ನು ಬೆಂಬಲಿಸುತ್ತೇನೆ ಎಂದು ಶಿವರಾಜ್ ಕುಮಾರ್ ಹೇಳಿದರು.
ತಮ್ಮ ಅಭಿನಯ “ಟಗರು”ಚಿತ್ರ ರಾಜ್ಯದಂತ ಎಲ್ಲಡೆ ಯಶಸ್ವಿಯಾಗಿ ಓಡುತ್ತಿದೆ,ಯಾವುದೇ ನಟನಿಗೆ ಇದಕ್ಕಿಂತ ಇನ್ನೇನು ಬೇಕು ಎಂದರು.
ಯುವಜನತೆ ಸೆಲ್ಫೀ ಗಾಗಿ ಮುಗಿಬಿದ್ದರು,ಸಮಾಧಾನ ದಿಂದಲೇ ಶಿವರಾಜ್ ಕುಮಾರ್ ಸ್ಪಂದಿಸಿದರು.