ಮೂವರು ಮಕ್ಕಳನ್ನು ಹೊಂದಿದ್ದಕ್ಕೆ ಕಾರ್ಪೋರೇಟರ್ ಸ್ಥಾನದಿಂದ ವಜಾ : ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.
ಮಿತಿ ಮೀರಿ ಬೆಳೆಯುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಕಳೆದ ವರ್ಷ ಒಂದು ಮಹತ್ವದ ತೀರ್ಪು ನೀಡಿತ್ತು. ಪಂಚಾಯತ್ ಚುನಾವಣೆಗಳು ಸೇರಿದಂತೆ ಕಾರ್ಪೋರೇಟರ್ ಚುನಾವಣೆಯಲ್ಲೂ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಎರಡಕ್ಕಿಂತ ಹೆಚ್ಚು ಮಕ್ಕಳು ಇರಬಾರದು ಎಂಬುದೇ ಈ ಆದೇಶ.
ಸುಪ್ರೀಂ ಕೋರ್ಟ್ ಈ ಆದೇಶವನ್ನು ಬಹಳ ಕಡೆಗಾಳಿಗೆ ತೂರಿ ಮತ್ತು ಇಂತಹ ಚುನಾವಣೆಗಳಲ್ಲಿ ಸ್ಪರ್ಧಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಆದರೆ ಇಂಥದ್ದೇ ಪ್ರಕರಣವೊಂದರಲ್ಲಿ ಮೂವರು ಮಕ್ಕಳ ತಾಯಿಯನ್ನು ಕಾರ್ಪೋರೇಟರ್ ಹುದ್ದೆಯಿಂದ ಅನರ್ಹಗೊಳಿಸಿ ಕೋರ್ಟ್ ಆದೇಶಿಸಿದೆ.
ಹೌದು , ಆಕೆಯ ಹೆಸರು ಎಕ್ಕಲ ಚೈತನ್ಯ ಕಣ್ಣ. ತಾನು ಮೂರು ಮಕ್ಕಳ ತಾಯಿಯಾಗಿದ್ದರು ಟಿ.ಆರ್.ಎಸ್.ಗೆ ಸೇರಿದ ಈಕೆ ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ತನಗೆ ಇಬ್ಬರೇ ಮಕ್ಕಳು ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದರು.
ಇಲ್ಲಿನ ಮಾಜಿ ಕಾರ್ಪೋರೇಟರ್ ಮತ್ತು ಬಿಜೆಪಿ ಮುಖಂಡ ರಮೇಶ್ ಯಾದವ್ ಅವರು ಮೇಲ್ಕಾಣಿಸಿದ ಎಕ್ಕಲ ಚೈತನ್ಯ ಕಣ್ಣ ಎನ್ನುವವರಿಗೆ ಮೂವರು ಮಕ್ಕಳಿದ್ದಾರೆ ಎಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಮತ್ತು ಇವರಿಗೆ ಮೂವರು ಮಕ್ಕಳು ಇರುವುದನ್ನು ಪುರಾವೆ ಸಹಿತ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಸತತ ಮೂರು ವರ್ಷಗಳ ಕಾಲ ವಿಚಾರಣೆ ನಡೆಸಿದ ನಾಂಪಳ್ಳಿ ಕೋರ್ಟ್ ಅಂತಿಮವಾಗಿ ಹೈದ್ರಾಬಾದ್ ಮಹಾನಗರ ಪಾಲಿಕೆ ಸದಸ್ಯೆ ಎಕ್ಕಲ ಚೈತನ್ಯ ಕಣ್ಣ ಅವರನ್ನು ಅನರ್ಹಗೊಳಿಸಿ ಆದೇಶ ನೀಡಿದೆ.
ಜನಸಂಖ್ಯೆ ನಿಯಂತ್ರಿಸಿ ನಾಗರೀಕರಿಗೆ ಮಾದರಿಯಾಗಬೇಕಿರುವ ಜನಪ್ರತಿನಿಧಿಗಳೇ ಹೆಚ್ಚು ಯಾಕೆ ಹೊಂದಿದರೆ ಹೇಗೆ ಎಂಬ ಪ್ರಶ್ನೆಗಳಿಗೆ ಈಗ ಉತ್ತರಗಳು ಸಿಗತೊಡಗಿದ್ದು, ಮುಂದಿನ ದಿನಗಳಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಹ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರಲೇಬಾರದು ಎಂಬ ಇಂತಹ ಆದೇಶ ಜಾರಿಗೆ ಬಂದರೂ ಆಶ್ಚರ್ಯವಿಲ್ಲ.