ಮುಟ್ಟಿನ ಮೂಢನಂಬಿಕೆಗೆ ಪೂರ್ಣವಿರಾಮ
“ಮುಟ್ಟು”ಎಂಬುದು ಹೆಣ್ಣು ಮಕ್ಕಳಿಗೆ ಹಿಂದಿನಿಂದಲೂ ಬಂದ ಶಾಪ. ಅದರಿಂದ ಅವರನುಭಿಸೋ ಕಷ್ಟ ಹೇರಳ.
ಬಹುಮುಖ್ಯವಾಗಿ ಇದು ೧೨ರಿಂದ ೧೩ ವರ್ಷಗಳ ನಂತರ ಹೆಣ್ಣು ಮಗುವಿನ ಬೆಳವಣಿಗೆ ಅವಳ ವಯಸ್ಸಿಗೆ ಅನುಗುಣವಾಗಿ ಋತುಸ್ರಾವವಾಗುವುದು ಸರ್ವೆ ಸಾಮಾನ್ಯ. ಹಾಗೆ ಆದಾಗ ಹೆಣ್ಣು ಮಗುವಿಂದು ಮದುವೆಗೆ ಸಿದ್ಧಳಿದ್ದಾಳೆ. ಪ್ರಪಂಚದ ಜ್ಞಾನವಿದೆ ಎಂದರ್ಥ.
ಹೀಗೆ ರಕ್ತಸ್ರಾವವಾದಾಗ ಕಿಬ್ಬೊಟ್ಟೆಯಲ್ಲಿ ಕಾಣಿಸಿಕೊಂಡ ಆ ನೋವು. ವಿಚಿತ್ರ ಹಿಂಸೆಯ ನರಕದರ್ಶನವಾಗುತದೆ.
ಯಾರಿಗೂ ಹೇಳಲಾಗದ ಧರ್ಮಸಂಕಟ ಅವಳದು.
ಪಾಪ ಅದೆಷ್ಟು ನೋವ ಸಹಿಸುತ್ತಾರೋ ಆ ದೇವರಿಗೆ ಗೊತ್ತು.
ನಾನಾಗ ೮ನೇ ತರಗತಿಯಲ್ಲಿ ಓದುತ್ತಿದ್ದೆ. ಅಮ್ಮ ಬೆಳಿಗ್ಗೆ ಎದ್ದು ತುಳಸಿ ಪೂಜೆಯ ತಯಾರಿಯಲ್ಲಿದ್ದರು. ಹಿಂದಿನ ಮನೆಯ ಸುಶೀಲಕ್ಕ ಬಂದರು. ಪಾಪ ಅವರ ಮಕ್ಕಳಿಬ್ಬರು ಬೆಂಗಳೂರು ಹೊಕ್ಕು ವರ್ಷವೇ ಕಳೆದಿತ್ತು. ಹುಷಾರಿಲ್ಲಾವಾದರೆ ಅಥವಾ ಋತುಸ್ರಾವವಾದರೆ ಒಂದು ಲೋಟ ಕಾಪಿ ಮಾಡಲು ಯಾರು ಇರಲಿಲ್ಲ .
ಹೀಗೆ ಓಡಿ ಬಂದು ನನ್ನ ಕರೆದು. ‘ಮಗನೇ ಮನೆ ಒಳಗೆ ಹೋಗೋ ಹಾಗೆ ಇಲ್ಲ ಒಂದು ಲೋಟ ಕಾಪಿ ಮಾಡ್ ಕೊಡೋ ಅಂದ್ರು’. ಅವರ ಕೇಳಿಕೊಳ್ಳೊ ಪರಿಗೆ ಅಮ್ಮನು ಹೋಗು ಎಂದರು. ಹೋಗಿ ಕಟ್ಟಿಗೆ ತಂದು ಸೀಮೆಎಣ್ಣೆ ಒಂದಿಷ್ಟು ಸುರಿದು ಒಲೆ ಹಚ್ಚಿ ಕಾಪಿ ಮಾಡಿ ಕೊಟ್ಟೆ.
ಇಬ್ಬರು ಮಾತನಾಡುತ್ತ ಕಾಪಿ ಕುಡಿವ ಹೊತ್ತಿಗೆ ವಯಸ್ಸಿನಲ್ಲಿ ತುಂಬಾ ಹಿರಿಯರು ಆಗಿದ್ದ ಸುಶೀಲಕ್ಕನಲ್ಲಿ ಕೇಳಿದೆ.
ನೀವ್ಯಾಕೆ ಮನೆಯೊಳಗೆ ಬರೋ ಹಾಗ್ ಇಲ್ಲ ಎಂದು.
ಪಾಪ ನಗುತಲೆ ಉತ್ತರಿಸಿದ ಅವರು “ಮಗನೇ ಬೆಳಿಗ್ಗೆ ಬೆಳಿಗ್ಗೆ ಕಾಗಿ ಬಂದು ಒದ್ದು ಹೊಯ್ತು. ಆದ್ದರಿಂದ ಮೂರು ದಿನದ ಮಟ್ಟಿಗೆ ನಾನು ಒಳಗೆ ಬರುವ ಹಾಗಿಲ್ಲ. ದೇವರ ಪೂಜಿಸೋ ಹಾಗಿಲ್ಲ. ಬಾವಿ ನೀರು ಮುಟ್ಟೋ ಹಾಗಿಲ್ಲ ಎಂದರು”.
ಸುಮ್ಮನೆ ಕೂತಿದ್ದ ನನಗೆ ಈ ಹಾಳಾದ್ ಕಾಗೆ ಯಾಕ್ ಮುಟ್ಟಿ ಹೊಯ್ತು ಅಂತ ಮನಸಲ್ಲೇ ಹಿಡಿ ಶಾಪ ಹಾಕಿ ಮನೆಗೆ ಬರೋ ಹೊತ್ತಿಗೆ ಸುಶೀಲಕ್ಕ ಮತ್ತೆ ಕರೆದು ಹೋಗೋ ದಾರಿಲಿ ಸಗಣಿ ಮುಟ್ಟಿ ಹೋಗು ಎಂದರು ಪಾಪ.
ಹೆಣ್ಣು ಮಕ್ಕಳ ಈ ಅಸಹಾಯಕತೆಗೆ ಒಂದಿಷ್ಟು ಮೂಢನಂಬಿಕೆ ಸೇರಿಸಿ ಒಂದಿಷ್ಟು ಅನಾವಶ್ಯಕ ಮಾತುಗಳು. ಕೊಡೋ ಹಿಂಸೆ. ಅಷ್ಟಿಷ್ಟಲ್ಲ. ಮೂರು ದಿನದ ನರಕಯಾತನೆ ಅನುಭವಿಸಿ ಮೂರನೆ ದಿನ ತಾನು ಬಳಸಿದ ಬಟ್ಟೆ ಹಾಸಿಗೆ. ಬಟ್ಟಲು ಹಾಗೆ ತಾನು ಗೋಮೂತ್ರ ಚಿಮುಕಿಸಿದ ಬಿಸಿನೀರಿನ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚುವಳು.
ಇದು ಹಿಂದಿನ ಕಾಲದ ಮಾತು. ಇನ್ನು ಈಗಿನ ಹೆಣ್ಣು ಮಕ್ಕಳ ಜೀವನ ಸ್ವಲ್ಪ ಸುಧಾರಣೆ ಗೆ ಒಂದಿಷ್ಟು ಯೋಜನೆ ಹಾಗೂ ನ್ಯಾಪ್ಕಿನ್ ನಂತಹ ವಸ್ತುಗಳು ಹಾಗೂ ನೋವ ತಡೆವ ಹಲವಾರು ಮಾತ್ರೆಗಳುಬಂದಿವೆ.
ಇಲ್ಲಿಯೂ ಅವಳ ಅಸಹಾಯಕತೆ ಇನ್ನು ಗಂಬೀರ
ಸಾಧಾರಣವಾಗಿ ಮೆಡಿಕಲ್ನಲ್ಲಿ ಹುಡುಗರೇ ಇರೋದ್ರಿಂದ ಆ ನ್ಯಾಪ್ಕಿನ್ ನನ್ನು ಕೇಳೋ ಧೈರ್ಯವಿರೋದಿಲ್ಲ.
ಧೈರ್ಯವಿದ್ದರು ಕೇಳೋಕೆ ಹಿಂಜರಿಕೆ.
ಅಂತಹ ಪರಿಸ್ಥಿತಿ ಎದುರಾದರೆ ದಯವಿಟ್ಟು ನಿಮ್ಮ ತಂಗಿ ಅಥವಾ ಅಕ್ಕನೆಂದು ಬಾವಿಸಿ ಅವರಿಗೆ ಅದನ್ನು ತಲುಪಿಸೋ ಕೆಲಸ ಮಾಡಿ.
ಹಾಗೆ ಅಕ್ಕತಂಗಿಯರಲ್ಲೂ ಒಂದು ವಿನಂತಿ. ನಿಮಗೇನು ಬೇಕೋ ಅದನ್ನು ಧೈರ್ಯದಿಂದ ಕೇಳಿ ಅಂತಹ ಸಮಯದಲ್ಲಿ ಯಾರು ನಿಮ್ಮನ್ನು ಅಸಹ್ಯ ಪಡೋದಿಲ್ಲ. ನಿಸರ್ಗದತ್ತವಾಗಿ ಬಂದ ಮೇಲೆ ಅಸಯ್ಯ ಹಾಗೂ ಸಂಕೋಚ ಪಡೋ ಅವಶ್ಯಕತೆ ಇರುವುದಿಲ್ಲ .
ನನ್ನ ಈ ಬರಹದಿಂದ ಯಾರಿಗಾದರೂ ನೋವಾಗಿದರೆ.ಅಥವಾ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ.
ಸಮಾಜಕ್ಕೆ ಇಂತಹ ವಿಷಯದ ಬಗ್ಗೆ ಕೊಂಚ ಮಟ್ಟಿಗೆ ಅರ್ಥೈಸಿಕೊಳ್ಳಲು.ಕೆಲವು ತುಚ್ಛ ಮಾತುಗಳಿಂದ ಆಡೋ ಜನರಿಗೂ ಇದೊಂದು ಒಳ್ಳೆಯ ನಿದರ್ಶನವಾಗಬೇಕೆಂಬುದು ನನ್ನ ಆಶಯ.
#ಹೆಣ್ಣೊಂದು #ಶಕ್ತಿ.
#ಅವಳ ಮೇಲಿರಲಿ #ಭಯ ಭಕ್ತಿ.
ಧನ್ಯವಾದಗಳು
ಅರುಣ್ ಮಂಜುನಾಥ್.