ಮುಖ್ಯಮಂತ್ರಿ ವಾಹನದಿಂದಲೇ ಎರಡು ಬಾರಿ ಸಂಚಾರಿ ನಿಯಮ ಉಲ್ಲಂಘನೆ..!?
ಸಿ.ಎಂ ಎಚ್ ಡಿ ಕುಮಾರಸ್ವಾಮಿ ಅವರು ಕೂಡ ಎರಡು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದರಂತೆ ಆದ್ದರಿಂದ ಕಾರು ಅತಿ ವೇಗವಾಗಿ ಹೋಗಿದ್ದಕ್ಕೆ ಹಾಗೂ ಕಾರಿನಲ್ಲಿ ಚಲಿಸುವಾಗ ಮೊಬೈಲ್ ಬಳಕೆ ಮಾಡಿದ್ದಕ್ಕೆ ಮುಖ್ಯಮಂತ್ರಿಗಳ ಕಾರ್ ಮೇಲೆ ಎರಡು ಕೇಸ್ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿಗಳು KA-42 p0002 ನಂಬರಿನ ರೇಂಜ್ ರೋಪರ್ ಕಾರನ್ನು ಬಳಸುತ್ತಿದ್ದಾರೆ. ಕಳೆದ ತಿಂಗಳು ಫೆಬ್ರವರಿ 10 ರಂದು ಒಂದು ಕೇಸ್ ಮತ್ತು 22 ರಂದು ಇನ್ನೊಂದು ಕೇಸ್ ದಾಖಲಾಗಿದೆ. ಫೆಬ್ರವರಿ 22 ರ ಮಧ್ಯಾಹ್ನ 12-25 ಕ್ಕೆ ಬಸವೇಶ್ವರ ಸರ್ಕಲ್ ಬಳಿ ಓವರ್ ಸ್ಪೀಡ್ ಮಾಡಲಾಗಿದ್ದು, ಮುನ್ನೂರು ರೂಪಾಯಿ ದಂಡ ಹಾಕಲಾಗಿದೆ ಇನ್ನು ಫೆಬ್ರವರಿ ಹತ್ತರಂದು ಬೆಳಗ್ಗೆ 9.27 ಕ್ಕೆ ಕಾರ್ ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಕೆ ಮಾಡಿದ್ದಕ್ಕೆ ಪೊಲೀಸರು 100 ರೂಗಳ ದಂಡ ಹಾಕಿದ್ದಾರೆ. ಅಲ್ಲದೆ ಎರಡು ಬಾರಿಯೂ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
ಎರಡು ಬಾರಿ ನೋಟಿಸ್ ನೀಡಿದರೂ ಸಿಎಂ ಎಚ್. ಡಿ. ಕುಮಾರಸ್ವಾಮಿಯವರು ದಂಡ ಕಟ್ಟಿಲ್ಲ. ಅಲ್ಲದೆ ಸಿ.ಎಂ ಅವರೇ ನೇರವಾಗಿ ಕಾನೂನು ಉಲ್ಲಂಘನೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ರಸ್ತೆ ಸಾರಿಗೆ ನಿಯಮಗಳು ಎಲ್ಲರಿಗೂ ಒಂದೇ. ರಸ್ತೆ ನಿಯಮಗಳನ್ನು ಯಾರೇ ಉಲ್ಲಂಘಿಸಿದರೂ ಅವರು ದಂಡ ಕಟ್ಟಲೇಬೇಕು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ತಪ್ಪು ಮಾಡಿದಾಗ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಅವರಿಗೆ ರಿಯಾಯಿತಿ ನೀಡದೆ ಪ್ರಕರಣ ದಾಖಲಿಸಿರುವ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ .