ಮತದಾನ ನಮಗೊಂದು ದೊಡ್ಡ ವರದಾನ
ಹಿಂದೆಂದಿಗಿಂತಲು ಈಗ ಮತ ಚಲಾವಣೆ ನಮ್ಮ ಹಕ್ಕಿಗಿಂತಲು ಅದೊಂದು ಬಹುದೊಡ್ಡ ಜವಾಬ್ದಾರಿಯಾಗಿದೆ.
ನಿಜ,ಇಂದಿನ ಹೊಲಸು ಹಾಗೂ ಕೊಳಕು ರಾಜಕೀಯ ವ್ಯವಸ್ಥೆ ನಮ್ಮಲ್ಲಿ ಜಿಗುಪ್ಸೆ ಮೂಡಿಸಿದೆ,ಹಾಗೆಂದು ಸಜ್ಜನರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದರೆ ಮತ್ತೆ ದುರುಳರ ಪಾತ್ರವೇ ನಡೆಯುತ್ತದೆ ಅಲ್ಲವೇ?
ಮತದಾನ ಜಾಗೃತಿ ನಮ್ಮ ಕರ್ತವ್ಯ ಆಗಬೇಕಿದೆ. ನಮ್ಮ ಹಕ್ಕು ಚಲಾಯಿಸಲು ನಿರಾಸಕ್ತರನ್ನು ಸಹ ಓಲೈಸುವ ಕೆಲಸ ಮುಖ್ಯ ಆಗಿದೆ.
ಪ್ರಜಾಪ್ರಭುತ್ವ ವ್ಯವಸ್ಥ ವಿಶ್ವದ ಅತಿ ಸುಂದರ ನೀತಿ,ಆದರೆ ಸೂಕ್ತ ಅಭ್ಯರ್ಥಿ ಆಯ್ಕೆ ಆದಾಗ ಮಾತ್ರ ಎಂಬುದು ನೆನಪಲ್ಲಿರಬೇಕು.
ಆದರ್ಶ, ಮುಂದಾಲೋಚನೆ, ಸಾಮಾಜಿಕ ಕಳಕಳಿ ಇಲ್ಲದ ಅಭ್ಯರ್ಥಿ ಆಯ್ಕೆ ಅಪಾಯಕಾರಿ ಎಂಬ ಅರಿವನ್ನು ಸಾಮಾನ್ಯ ಮತದಾರರಲ್ಲಿ ತಿಳಿಹೇಳಿ ಅವರನ್ನು ಮತದಾನಕ್ಕೆ ಪ್ರೋತ್ಸಾಹಿಸಬೇಕಿದೆ.
ಮತದಾನವನ್ನು ನಿರ್ಲಕ್ಷ್ಯ ಮಾಡಬೇಡಿ ಎಂಬ ಅಭಿಯಾನ ಅಲ್ಲಲ್ಲಿ ನಡೆಯುತ್ತಿದೆ, ನಮ್ಮ ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತಿರುವುದು ಅಭಿನಂದನೀಯ.
ಮದುವೆ ಮನೆಗಳು ಹಾಗೂ ಕಲ್ಯಾಣಮಂಟಪಗಳಲ್ಲೂ ಅಧಿಕಾರಿಗಳು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ,
ಖ್ಯಾತ ವಾಗ್ಮಿಹಿರೇಮಂಗಳುರ್ ಕಣ್ಣನ್ ಅವರು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಹಾಡಿರುವ ನಾಲ್ಕು ಸಾಲುಗಳು ಗಮನ ಸೆಳೆದಿವೆ(ವೀಡಿಯೋ ನೋಡಿ).
ದೊಡ್ಡ ರಾಜ್ಯ ಕರ್ನಾಟಕದ ಚುನಾವಣಾ ಸಂಧರ್ಭದಲ್ಲಿ ಖ್ಯಾತ ಕ್ರಿಕೆಟ್ ಪಟು ರಾಹುಲ್ ದ್ರಾವಿಡ್ ಅವರನ್ನು ಚುನಾವಣಾ ರಾಯಭಾರಿ ಯಾಗಿ ನೇಮಕ ಮಾಡಿರುವುದು ಸಂತಸದ ವಿಷಯ.
ಮತ ಹಾಕಿ, ಶೇ.5 ರಿಯಾಯ್ತಿ ಪಡೆಯಿರಿ
ನಗರ ಪ್ರದೇಶಗಳಲ್ಲಿ ಅತಿ ಕಡಿಮೆ ಮತದಾನ ನೆಡೆಯುವ ಹಿನ್ನೆಲೆಯಲ್ಲಿ ಈ ಬಾರಿ ಹೊಸ ಪ್ರಯೋಗ ನಡೆದಿದೆ. ಹೊಟೇಲ್ಗಳು ಹಾಗೂ ಮಹಲ್ ಗಳಲ್ಲಿ ಮತದಾನ ಮಾಡಿಬಂದು ಬೆರಳಿನ ಇಂಕ್ ತೋರಿಸಿದರೆ ತಿಂಡಿ ಪದಾರ್ಥಗಳ ಮೇಲೆ ಹಾಗೂ ತಾವು ಕೊಳ್ಳುವ ವಸ್ತುಗಳ ಮೇಲೆ ಶೇ5ರಷ್ಟು ರಿಯಾಯಿತಿ ದೊರೆಯುತ್ತದೆ. ಬೆಂಗಳೂರು ಅಧಿಕಾರಿಗಳು ಈಗಾಗಲೇ ಹೋಟೆಲ್ ಮಾಲೀಕರು ಹಾಗೂ ಮಹಾಲ್ ಗಳ ಮಾಲೀಕರುಗಳ ಸಭೆ ಕರೆದಿದ್ದು ಬಹುತೇಕರು ಈ ಮನವಿ ಸ್ವಾಗತಿಸಿದ್ದಾರೆ.ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಇದು ಕೂಡ ಉತ್ತಮ ಪ್ರಯೋಗವಾಗಲಿದೆ.
ಸಹೃದಯರೆ ಬನ್ನಿ, ಮತ ಚಲಾಯಿಸಿ,ಸೂಕ್ತ ಅಭ್ಯರ್ಥಿ ಆರಿಸಿ,ಬಲಿಷ್ಠ ರಾಷ್ಟ್ರ ನಿರ್ಮಿಸೋಣ.
ಮತದಾನ ಎಲ್ಲರ ಹಕ್ಕು ಹಾಗೂ ಹಾಗೂ ಜವಾಬ್ದಾರಿ. ನಿಮ್ಮದು ಹಾಗೂ ನನ್ನದು ಕೂಡ.