ಭಾರತದ ಈ ಹಳ್ಳಿಯಲ್ಲಿರುವ ಎಲ್ಲರೂ ಕೋಟ್ಯಾಧಿಪತಿಗಳೇ..!ಇದು ಏಷ್ಯಾದ ಕೋಟ್ಯಾಧಿಪತಿಗಳ ಹಳ್ಳಿ…!

ಹಳ್ಳಿಗಳು ಅಂದ್ರೆ ನಮ್ಮಲ್ಲಿ ಬಡತನ, ಅನಕ್ಷರತೆ, ಬಂಡವಾಳದ ಕೊರತೆ, ಹಣದ ಅಭಾವ ಎನ್ನುವ ಮಾತುಗಳು ನಮ್ಮ ಕಾಣಿಸುತ್ತವೆ.ಆದರೆ ನಮ್ಮ ಭಾರತದಲ್ಲಿರುವ ಈ ಹಳ್ಳಿ, ಏಷ್ಯಾದ ಶ್ರೀಮಂತ ಹಳ್ಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

 

ಯಾವುದು ಆ ಹಳ್ಳಿ..?ಅದು ಇಲ್ಲಿದೆ…?

ಕೋಟ್ಯಾಧೀಪತಿಗಳಾಗುವ ಅದೃಷ್ಟ ಅಂದರೆ ಇದೆ ಇರಬಹುದು! ಹೌದು, ಅರುಣಾಚಲ ಪ್ರದೇಶದ ಬೊಮ್ಜ ಎಂಬ ಹಳ್ಳಿಯು ಈಗ ಏಷ್ಯಾದ ಅತೀ ಶ್ರೀಮಂತ ಹಳ್ಳಿಯಾಗಿ ಹೊರ ಹೊಮ್ಮಿದೆ.ಈ ಹಳ್ಳಿಯ ಎಲ್ಲಾ ಕುಟುಂಬಗಳು ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ.

ಈ ಹಳ್ಳಿ ಏಷಿಯಾದ ಅತ್ಯಂತ ಶ್ರೀಮಂತ ಗ್ರಾಮವಾಗಿದ್ದು ಹೇಗೆ ಗೊತ್ತಾ..?

ಅರುಣಾಚಲಪ್ರದೇಶದ ತವಾಂಗ್ ಜಿಲ್ಲೆಯ ಬೋಮ್ಜಾ ಗ್ರಾಮಸ್ಥರು ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಕೇಂದ್ರ ರಕ್ಷಣಾ ಸಚಿವಾಲಯದಿಂದ ಅರುಣಾಚಲಪ್ರದೇಶದ ಹಳ್ಳಿಯ ಜನರಿಗೆ ಕೊಟ್ಯಾಧಿಪತಿಯಾಗುವ ಭಾಗ್ಯ ಬಂದಿದೆ.ಹೌದು, ತಾವಾಂಗ್ ಗ್ಯಾರಿಸನ್ ನ ಪ್ರಮುಖ ಯೋಜನೆ ಘಟಕಗಳನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಭಾರತೀಯ ಸೇನೆಯು ಅರುಣಾಚಲಪ್ರದೇಶದ ಬೊಮ್ಜ ಎಂಬ ಹಳ್ಳಿಯನ್ನು ಭೂಸ್ವಾಧೀನ ಪಡಿಸಿಕೊಂಡಿದ್ದು ಇದರ ಪರಿಹಾರ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಇದರಿಂದಾಗಿ ಈ ಹಳ್ಳಿ ಏಷ್ಯಾದ ಅತೀ ಶ್ರೀಮಂತ ಹಳ್ಳಿಯಾಗಿ ಹೊರಹೊಮ್ಮಿದೆ.

ರಕ್ಷಣಾ ಸಚಿವಾಲಯ ಸ್ವಾಧೀನಪಡಿಸಿಕೊಂಡಿದ್ದು ಏಕೆ..?

ಕೇಂದ್ರದ  ರಕ್ಷಣಾ ಸಚಿವಾಲಯ 40.80 ಕೋಟಿ ಬಿಡುಗಡೆ ಬೋಮ್ಜಾ ಗ್ರಾಮದ ಸುಮಾರು 200.056 ಎಕರೆ ಭೂಮಿಯನ್ನು ಭಾರತೀಯ ಸೇನೆಯ ವಿವಿಧ ಕಾಮಗಾರಿಗಳ ಅಭಿವೃದ್ಧಿಗಾಗಿ ರಕ್ಷಣಾ ಸಚಿವಾಲಯ ಸ್ವಾಧೀನಪಡಿಸಿಕೊಂಡಿದೆ. ಹಳ್ಳಿಯ ಎಲ್ಲಾ 31 ಕುಟುಂಬಗಳಿಗೆ ರೂ. 40,80,38,400 ಮೊತ್ತವನ್ನು ವಿತರಣೆ ಮಾಡಿದೆ. ಒಂದು ಕುಟುಂಬಕ್ಕೆ 2.44 ಕೋಟಿ ರೂ. ಪರಿಹಾರ ಸಿಕ್ಕಿದರೆ ಮತ್ತೊಂದು ಕುಟುಂಬಕ್ಕೆ 6.73 ಕೋಟಿ ರೂ. ಸಿಕ್ಕಿದೆ.

ಎಲ್ಲಾ ಕುಟುಂಬಗಳು ಕೋಟ್ಯಾಧಿಪತಿಗಳಿರುವ ಏಕೈಕ ಗ್ರಾಮ..!

ಏಷಿಯಾದಲ್ಲೇ ಹೆಚ್ಚು ಕೋಟ್ಯಾಧಿಪತಿಗಳಿರುವ ಶ್ರೀಮಂತ ಗ್ರಾಮ ಆಗಿದ್ದು, ಗ್ರಾಮದ ಒಟ್ಟು 31 ಕುಟುಂಬಗಳಲ್ಲಿ ಸಂತ್ರಸ್ತ 29 ಕುಟುಂಬಗಳಿಗೆ ತಲಾ ರೂ. 1.09 ಕೋಟಿ ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಖಂಡು ವಿತರಿಸಿದ್ದಾರೆ. ಅವುಗಳಲ್ಲಿ ಒಂದು ಕುಟುಂಬ ರೂ. 6.73 ಕೋಟಿ ಪಡೆದಿದ್ದರೆ ಇನ್ನೊಂದು ಕುಟುಂಬ ರೂ. 2.45 ಕೋಟಿ ಪರಿಹಾರ ಧನ ಪಡೆದಿವೆ. ಒಟ್ಟಿನಲ್ಲಿ ಈ ಗ್ರಾಮದ ಏಷಿಯಾದಲ್ಲೇ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆ ಪಡೆದಿದ್ದು, ಎಲ್ಲಾ ಕುಟುಂಬಗಳು ಕೋಟ್ಯಾಧಿಪತಿಗಳಾಗಿರುವ ಏಕೈಕ ಗ್ರಾಮ.ಈ ಹಣವನ್ನು ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೆಮಾ ಖಾಂಡು ವಿತರಿಸಿದ್ದಾರೆ.

Leave a Reply

Your email address will not be published. Required fields are marked *