ಭಾರತದಲ್ಲಿರುವ ಅಕ್ರಮ ವಲಸಿಗರನ್ನು ಒಬ್ಬರನ್ನೂ ಬಿಡದಂತೆ ಗಡಿಪಾರು ಮಾಡುತ್ತೇವೆ : ಗೃಹ ಸಚಿವ ಅಮಿತ್ ಶಾ
ಭಾರತದ ಯಾವುದೇ ಭಾಗದಲ್ಲಿ ಆದರೂ ಸಹ ಅವಿತಿರುವ ಅಥವಾ ರಾಜಾರೋಷವಾಗಿ ನೆಲೆಸಿರುವ ಪ್ರತಿಯೊಬ್ಬರನ್ನು ಗುರುತಿಸಿ ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಅವರನ್ನು ಗಡಿಪಾರು ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ರಾಜ್ಯಸಭೆಗೆ ತಿಳಿಸಿದ್ದಾರೆ. ಈಗ ದೇಶದ ಅಸ್ಸಾಂನಲ್ಲಿ ಮಾತ್ರ ಜಾರಿಯಲ್ಲಿರುವ ಕೇಂದ್ರ ಸರ್ಕಾರದ ಎನ್ ಆರ್ ಸಿ (ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್) ಯನ್ನು ದೇಶದ ಉಳಿದ ರಾಜ್ಯಗಳಲ್ಲಿಯೂ ಜಾರಿಗೊಳಿಸುವ ಯೋಜನೆ ಇದೆಯೆ ಎಂದು ನಾವು ಸಮಾಜವಾದಿ ಪಕ್ಷದ ಸಂಸದ ಜಾವೇದ್ ಅಲಿ ಖಾನ್ ಕೇಳಿದ ಪ್ರಶ್ನೆಗೆ ಶಾ ಈ ಉತ್ತರ ನೀಡುವುದಾಗಿ ಮಾಧ್ಯಮಗಳ ವರದಿ ತಿಳಿಸಿದೆ .
ಇದು ತುಂಬ ಉತ್ತಮವಾದ ಪ್ರಶ್ನೆ ಎನ್ ಆರ್ ಸಿ ಈಗ ಅಸ್ಸಾಂ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. ಅಲ್ಲದೆ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದರೆ ದೇಶಾದ್ಯಂತ ಎನ್ ಆರ್ ಸಿ ಜಾರಿ ಮಾಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿಯೇ ಘೋಷಿಸಲಾಗಿತ್ತು .ಅದರಂತೆ ಕೇಂದ್ರ ಸರ್ಕಾರ ದೇಶದ ಮೂಲೆ ಮೂಲೆಯಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಲಸಿಗರನ್ನು ಪತ್ತೆ ಹಚ್ಚಿ ಅಂತಹವರನ್ನು ಅಂತಾರಾಷ್ಟ್ರೀಯ ಕಾನೂನು ಪ್ರಕಾರ ಗಡಿಪಾರು ಮಾಡುವುದು ಎಂದು ವಿವರಿಸಿದರು .
ಅದೇ ರೀತಿ ಭಾರತದಲ್ಲಿ ಅಕ್ರಮವಾಗಿ ವಾಸ್ತವ್ಯ ಹೂಡಿರುವ ರೋಹಿಂಗ್ಯಾ ಮುಸ್ಲಿಮರ ಕುರಿತು ಕೇಳಿದ ಅಂಕಿ ಅಂಶದ ಬಗ್ಗೆ ಮಾಹಿತಿ ನೀಡಿದ ಗೃಹ ಖಾತೆ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಈ ಬಗ್ಗೆ ನಮ್ಮ ಬಳಿ ನಿಖರವಾದ ಅಂಕಿ ಅಂಶಗಳಿಲ್ಲ. ರೊಹಿಂಗ್ಯಾ ಮುಸ್ಲಿಮರು ದೇಶಾದ್ಯಂತ ಉಳಿದುಕೊಂಡಿದ್ದಾರೆ. ಕೆಲವರು ಬಾಂಗ್ಲಾದೇಶಕ್ಕೆ ವಾಪಸ್ ಆಗಿದ್ದಾರೆ. ಈ ಬಗ್ಗೆ ಶೀಘ್ರವೇ ಅಂಕಿ, ಅಂಶ ಪಡೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.