ಬ್ಲಾಕ್ ಮೇಲ್; ಟಿ.ವಿ.ಚಾನಲ್ ಎಂ.ಡಿ.ಯೇ ಅರೆಸ್ಟ್
ಎಲ್ಲಿಗೆ ಬಂದು ನಿಂತಿದೆ ನೋಡಿ ನಮ್ಮ ಮಾಧ್ಯಮ ವ್ಯವಸ್ಥೆ.
ಈಗ ಬಂಧನವಾಗಿರುವುದು ಖಾಸಗೀ ಟಿ.ವಿ.ಚಾನಲ್ ಒಂದರ ವರಿದಿಗಾರ ಅಥವಾ ಕೆಲಸಗಾರ ಅಲ್ಲ, ಆ ಚಾನಲ್ನ ಮಾಲೀಕ.. ಇಂಥ ವಿಪರ್ಯಾಸ.
ಆತನ ಹೆಸರು ಹೇಮಂತ್ ಕುಮಾರ್ ಕಮ್ಮಾರ. 40 ವರ್ಷದ ಈತ ಸಮಾಜದ ಓರೆ ಕೊರೆ ತಿದ್ದಿ ,ನಮ್ಮ ವ್ಯವಸ್ಥೆಯ ಅವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿ ಓರ್ವ ನೈಜ ಪತ್ರಕರ್ತ ಆಗಬೇಕಿತ್ತು. ಆದರೆ ಉಳ್ಳವರನ್ನು ಬ್ಲಾಕ್ ಮೇಲ್ ಮಾಡಿ ವಾಮಮಾರ್ಗದಿಂದ ಹಣ ಮಾಡಲು ಚಾನಲ್ ಆರಂಭಿಸಿದ್ದ.
ಶಾಸಕ ಅರವಿಂದ ಲಿಂಬಾವಳಿ ಅವರನ್ನೇ 50 ಲಕ್ಷ ರೂ ಹಣಕ್ಕೆ ಬ್ಲಾಕ್ ಮೇಲ್ ಮಾಡಿ ಈಗ ಕಂಬಿ ಹಿಂದೆ ಇದ್ದಾನೆ.
ನಿಮ್ಮದೊಂದು ಅಕ್ರಮ, ಅಶ್ಲೀಲ ವಿಡಿಯೋ ಇದೆ ಎಂದು ಅವರಿಗೆ ಹಣಕ್ಕಾಗಿ ಪೀಡಿಸ ತೊಡಗಿದ್ದ. ಈತನ ಪೀಡನೆಗೆ ಬೇಸತ್ತ ಅರವಿಂದ ಲಿಂಬಾವಳಿ ಅವರು ತಮ್ಮ ಆಪ್ತ ಸಹಾಯಕನ ಮೂಲಕ whitefield ಪೊಲೀಸರಿಗೆ ದೂರು ನೀಡಿದ್ದರು. ನಂತರ ಈ ಪ್ರಕರಣ ಸಿ ಸಿ ಬಿ ಗೆ ವರ್ಗಾಯಿಸಲ್ಪಟ್ಟಿತ್ತು.
“ಫೋಕಸ್” ಹೆಸರಿನ ಟಿ.ವಿ.ಚಾನಲ್ ಕಚೇರಿಯ ಮೇಲೆ ಧಾಳಿ ನಡೆಸಿದ ಪೊಲೀಸರು ಆತನನ್ನು ಬಂಧಿಸಿ ದ್ದಾರೆ.ಈ ವೇಳೆ maarfing ಬಳಸಿ ಸಿದ್ದಪಡಿಸಲಾಗಿದ್ದ ಹಲವು ರಾಜಕಾರಣಿಗಳ ಫೋಟೋಗಳನ್ನು ಹಾಗೂ ನಕಲಿ ಸಿ ಡಿ ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಕೆಲ ದಿನಗಳ ಕೆಳಗೆ ಪ್ರಸಿದ್ಧ ಟಿವಿ ಚಾನಲ್ಗಳು ನಮ್ಮವು ಎಂದು ಬೊಬ್ಬೆ ಹೊಡೆದುಕೊಳ್ಳುವ,”ನೇರ,ದಿಟ್ಟ,ನಿಮ್ಮದೇ,ನಿರ್ಭಿತ,..ಇತ್ಯಾದಿ ಕರೆದುಕೊಳ್ಳುವ ಚಾನಲ್ಗಳ ವರದಿಗಾರರನ್ನು ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ನಾಯಿಕೊಡೆಗಳಂತೆ ಹಿಂದೆ ಪತ್ರಿಕೆಗಳು ಹುಟ್ಟಿಕೊಳ್ಳುತ್ತಿದ್ದವು. ಈಗ ಚಾನಲ್ಗಳು.
ಎಲ್ಲವೂ, ಹೀಗೇನಾ..
ಎಲ್ಲರೂ ಹೀಗೇನಾ..
ನಿಮ್ಮ ಮನದಲ್ಲಿ ಮೂಡಿರುವ ಈ ಪ್ರೆಶ್ನೆಗೆ ಉತ್ತರ ನನ್ನಲ್ಲೂ ಭಾಗಶಃ ಅಷ್ಟೇ ಇದೆ.