ಬೆಂಗಳೂರಿಗರಿಗೆ ಇನ್ನು ರಾತ್ರಿ 12 ರ ವರೆಗೂ ಮೆಟ್ರೋ ಸೇವೆ ಲಭ್ಯ
(ಬೆಂಗಳೂರು ಡಿ. 10): ರಾತ್ರಿ 10ರ ಬಳಿಕ ಸಿಟಿ ಬಸ್ ಗಳು ಹಾಗೂ ಆಟೋಗಳಿಗಾಗಿ ಪರದಾಡುವ ಪ್ರಯಾಣಿಕರಿಗೆ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ ಈವರೆಗೆ ರಾತ್ರಿ 11 ಗಂಟೆಯವರೆಗೆ ಮಾತ್ರ ಸಂಚರಿಸುತ್ತಿದ್ದ ಮೆಟ್ರೋ ರೈಲುಗಳು ಹೊಸ ವರ್ಷದಿಂದ ರಾತ್ರಿ 12 ಗಂಟೆಯವರೆಗೆ ಸಂಚರಿಸಲಿವೆ.
ಪ್ರಯಾಣಿಕರ ಮನವಿ ಹಿನ್ನಲೆ ಮೆಟ್ರೋ ಟ್ರೈನ್ ಸಂಚಾರ ಸಮಯವನ್ನು ಮಧ್ಯರಾತ್ರಿ 12 ಗಂಟೆಯವರೆಗೂ ವಿಸ್ತರಿಸಲು ಬಿ ಎಮ್ ಆರ್ ಸಿ ಎಲ್ ನಿರ್ಧರಿಸಿದೆ.
ಸಧ್ಯ ಮೆಟ್ರೋ ಟ್ರೈನ್ ರಾತ್ರಿ 11 ಗಂಟೆಯವರೆಗೂ ಸಂಚರಿಸುತ್ತಿದ್ದು ಈ ಅವಧಿಯನ್ನು ಇನ್ನೂ ಒಂದು ಗಂಟೆ ವಿಸ್ತರಿಸಿ 12 ಗಂಟೆಯವರೆಗೂ ಸಂಚಾರಕ್ಕೆ ಅವಕಾಶವನ್ನು ನೀಡಲಾಗಿದೆ. ಈ ಸಮಯ ಬದಲಾವಣೆ ಜ. 01 ರಿಂದ ಜಾರಿಗೆ ಬರಲಿದೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ರಾತ್ರಿ 12 ಗಂಟೆಗೆ ಕೊನೆಯ ಟ್ರೈನ್ ಸಂಚಾರ ಮಾಡಲಿದ್ದು ಇದು ಯಲಚೇನಹಳ್ಳಿ, ನಾಗಸಂದ್ರ, ಬೈಯಪ್ಪನಹಳ್ಳಿ ಹಾಗೂ ಮೈಸೂರು ರಸ್ತೆಗೆ ಸಂಚರಿಸಲಿದೆ. ಟ್ರೈನ್ ಸಂಚಾರ ಅವಧಿಯನ್ನು ಒಂದು ಗಂಟೆಗಳ ಕಾಲ ವಿಸ್ತರಣೆಗೆ ಒತ್ತಡ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಿದೆ.
ಸಧ್ಯ ಮೆಟ್ರೋ ಟ್ರೈನ್ ಬೆಳಿಗ್ಗೆ 5ರಿಂದ ರಾತ್ರಿ 11 ರ ವರೆಗೂ ಸಂಚರಿಸಲಿದೆ.
ಗ್ರೀನ್ ಲೈನ್ ನಲ್ಲಿ ಅನೇಕ ಸಂಖ್ಯೆಯ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಈ ಹಿನ್ನಲೆ ಮೆಟ್ರೋ ಕೋಚ್ ಗಳ ಸಂಖ್ಯೆಯನ್ನು ಮುಂದಿನ ವರ್ಷದ ಡಿಸೆಂಬರ್ ವೇಳೆ 12ಕ್ಕೆ ಏರಿಸಲಾಗುವುದು ಎಂದು ಬಿ ಎಮ್ ಆರ್ ಸಿ ಎಲ್ ನಿರ್ವಾಹಕ ನಿರ್ದೇಶಕ ಅಜಯ್ ಸೇತ್ ತಿಳಿಸಿದ್ದಾರೆ.