ಬಸ್ ಚಾಲನೆಯೆ ನಿದ್ದೆಗೆ ಜಾರಿದ ಡ್ರೈವರ್‌ ಪ್ರಯಾಣಿಕರು ಕೂಗಿಕೊಂಕೂಡಿಕೊಂಡರು ಏಳಲಿಲ್ಲ: ನಂತರ ಏನಾಯ್ತು ಗೊತ್ತೆ?

ಬಸ್ ಚಲಿಸುತ್ತಲೆ ಇತ್ತು ಆದರೆ ಡ್ರೈವರ್ ಮಾತ್ರ ನಿಧಾನವಾಗಿ ಗಾಡ ನಿದ್ರೆಗೆ ಜಾರಿದ್ದ ಇದನ್ನು ನೋಡಿದ ಕೆಲ ಪ್ರಯಾಣಿಕರು ಕೂಗಿಕೊಂಡರು ಆತ ನಿದ್ದೆ ಇಂದ ಏಳಲೇ ಇಲ್ಲ. ಸಮಯ ಮೀರುತ್ತಿರುವುದನ್ನು ಅರಿತ ಪ್ರಯಾಣಿಕರಲ್ಲೊಬ್ಬರು ಇನ್ನೂ ಈತನನ್ನು ಏಳಿಸಿ ಪ್ರಯೋಜನವಿಲ್ಲ ಎಂದು ತಕ್ಷಣ ಡ್ರೈವರ್ ಸೀಟಿಗೆ ಬಂದು ಆತನನ್ನು ಏಳೆದು ಪಕ್ಕಕ್ಕೆ ಸರಿಸಿ ಬಸ್ ಚಾಲನೆಯನ್ನು ತಾನೇ ಕೈಗೆತ್ತಿಕೊಂಡ. ಈತನಿಗೆ ಡ್ರೈವಿಂಗ್ ಬಗ್ಗೆ ಒಂದಿಷ್ಟು ತಿಳಿದಿದ್ದರಿಂದ ಭಾರಿ ದುರಂತವೊಂದು ತಪ್ಪಿದಂತಾಯಿತು.

ಹೌದು, ಈ ಘಟನೆ ನಡೆದದ್ದು ಚಿಕ್ಕಬುಳ್ಳಾಪುರದ ಗೌರಿಬಿದನೂರಿನ ಅಂತರರಾಜ್ಯ ಹೆದ್ದಾರಿಯಲ್ಲಿ
ಪ್ರಯಾಣಿಕನ ಸಮಯ ಪ್ರಜ್ಞೆಯಿಂದ ಅವಘಡದಿಂದ ಬಚಾವಾದ 40 ಮಂದಿ ಪ್ರಯಾಣಿಸುತ್ತಿದ್ದುದು ಕೆ.ಎಸ್.ಆರ್.ಟಿ.ಸಿ. ಗೆ ಸೇರಿದ ಬಸ್ಸ್ನಲ್ಲಿ.

ಗುರುವಾರ ಸಂಜೆ 4 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ಗೌರಿಬಿದನೂರು ಕಡೆಗೆ ಸಾಗುತ್ತಿದ್ದ ಸಾರಿಗೆ ಬಸ್ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಬಸ್ ದೊಡ್ಡ ಬುಳ್ಳಾಪುರ ದಾಟಿದ ಬಳಿಕ ಚಾಲಕ ನಿದ್ರೆಗೆ ಜಾರಿದ್ದಾನೆ. ಇದನ್ನು ಅರಿತ ಪ್ರಯಾಣಿಕರು ನಿದ್ರೆಗೆ ಜಾರಿದ ಚಾಲಕನನ್ನು ಕೂಗಿ ಎಬ್ಬಿಸಲು ಪ್ರಯತ್ನಿಸಿದ್ದಾರೆ ಆದರೆ ಚಾಲಕ ಯಾವುದೇ ರೀತಿಯಲ್ಲಿ ಸ್ಪಂದಸಿಲ್ಲ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ಜೋರಾಗಿ ಕೂಗಿಕೊಂಡಾಗ ಬಸ್ನಲ್ಲಿದ್ದ ಪ್ರಯಾಣಿಕ ಪ್ರಶಾಂತ್ರೆಡ್ಡಿ ಎಂಬುವವರು ಎದೆಗುಂದದೆ ಚಾಲಕನ ಬಳಿ ತೆರಳಿ ಚಾಲಕನನ್ನು ಪಕ್ಕಕ್ಕೆ ಸರಿಸಿ ಬಸ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಇದರಿಂದ ಅಂತರರಾಜ್ಯ ಹೆದ್ದಾರಿಯಲ್ಲಿ ಆಗಬಹುದಾಗಿದ್ದ ಭಾರೀ ಅಪಘಾತ ತಪ್ಪಿಸಿ ಪ್ರಯಾಣಿಕರ ಪ್ರಾಣ ಕಾಪಾಡಿ ಬಸ್ಗೆ ಆಗುತಿದ್ದ ಅಪಘಾತದ ಅನಾಹುತ ತಪ್ಪಿಸಿದ್ದಾರೆ, ನಂತರ ಬಸ್ಸನ್ನು ನಗರದ ಹೊರವಲಯದ ಸಾರಿಗೆ ಡಿಪೋಗೆ ತಂದು ಒಪ್ಪಿಸಿದ್ದಾರೆ.
ನಿತ್ಯ 800 ಕೀ.ಮೀ ಬಸ್ ಚಾಲನೆ
ಚಾಲಕರಿಗೆ ಮತ್ತು ನಿರ್ವಹಕರಿಗೆ ಡ್ಯೂಟಿ ಹೆಸರಿನಲ್ಲಿ ನಿರಂತರ ಶೋಷಣೆ ನೆಡೆಯುತ್ತಿರುವುದು ಸರ್ವೇ ಸಾಮಾನ್ಯವಾಗಿದ್ದು ಅದರಲ್ಲೂ ಚಾಲಕನಿಗೆ ನಿತ್ಯ 800 ಕಿ.ಮೀ ಬಸ್ಸು ಚಾಲನೆ ಮಾಡಲು ನಿಗದಿ ಮಾಡಿದ್ದು ಇದರ ಜೊತೆಗೆ ಹಲವು ನಿಬಂಧನೆಗಳು ವಿಧಿಸಿರುವುದರಿಂದ ಇಂತಹ ಅನಾಹುತಗಳಿಗೆ ಕಂಟಕವಾಗಿದೆ ಎಂದು ಸಿಬ್ಬಂದಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *