ನೆರೆ ಸಂತ್ರಸ್ತರಿಗೆ ಧರ್ಮಸ್ಥಳ ಶ್ರೀ ಕ್ಷೇತ್ರದಿಂದ 25ಕೋಟಿ ರೂಂ.ಗಳ ಪರಿಹಾರ ಘೋಷಣೆ
ನಾಡಿನ ಭಕ್ತರು ನೆಚ್ಚಿನ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನೆರೆ ಸಂತ್ರಸ್ತರಿಗೆ 25 ಕೋಟಿ ರೂ.ಗಳ ಪರಿಹಾರವನ್ನು ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಈ ಘೋಷಣೆ ಮಾಡಿದ್ದು, ಬೆಳ್ತಂಗಡಿ ತಾಲೂಕಿಗೆ ಪ್ರತ್ಯೇಕವಾಗಿ 50ಲಕ್ಷ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ 50 ಲಕ್ಷ ರೂ.ಗಳ ಚೆಕ್ ಸಹ ಹಸ್ತಾಂತರಿಸಲಾಗಿದೆ.
ಕನ್ನಡ ಕೋಗಿಲೆ ಗಾಯಕ ನಿಂದಲೂ ನೆರವು:
ಕನ್ನಡ ಕೋಗಿಲೆ ಖ್ಯಾತಿಯ ಗಾಯಕ ಕಾಶಿಂ ಅಲಿ ಅವರು ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾದ ಸಂತ್ರಸ್ತರಿಗೆ ತಮಗೆ ಬಂದಿರುವ ಬಹುಮಾನದ ಹಣದಲ್ಲಿ 300 ಬೆಡ್ ಶೀಟುಗಳು, ಸಂತ್ರಸ್ತರಿಗೆ ನೆರವಾಗುವ ಔಷಧಿ, ಟೂತ್ ಪೇಸ್ಟ್ ,ಬಿಸ್ಕೆಟ್, ಶುದ್ಧಕುಡಿಯುವ ನೀರಿನ ಬಾಟಲ್ ಗಳು ಸೇರಿದಂತೆ ಅನೇಕ ವಸ್ತುಗಳನ್ನು ನೀಡಿದ್ದಾರೆ.
ಚಿಕ್ಕೋಡಿ ತಾಲೂಕಿನ ಬಸವನಾಳ ಗಡ್ಡೆ ಸರ್ಕಾರಿ ಶಾಲೆಯಲ್ಲಿರುವ ಗಂಜಿ ಕೇಂದ್ರಕ್ಕೆ ಸ್ವತಹ ತಮ್ಮ ತಂಡದೊಂದಿಗೆ ಭೇಟಿ ನೀಡಿ ಅಲ್ಲಿನ ನಿರಾಶ್ರಿತರಿಗೆ ಹಂಚಿದರು.
ಕನ್ನಡ ಕೋಗಿಲೆ ಸೀಸನ್ 2 ವಿನ್ನರ್ ಆಗಿ ಕಾಶಿಂ ಅಲಿ ಅವರು ಹೊರಹೊಮ್ಮಿದ್ದು ಅದರಲ್ಲಿ ಬಂದ ಹಣದಲ್ಲಿ ನಿರಾಶ್ರಿತರಿಗೆ ಅಗತ್ಯವಸ್ತುಗಳನ್ನು ವಿತರಿಸಿದರು.