ನಿಮ್ಮ ದೇಹದ ತೂಕ ಕಳೆದುಕೊಳ್ಳಲು ಎಲ್ಲಿ ಹೋಗ್ಬೇಡಿ!ನಿಮ್ಮ ಮನೆಯಲ್ಲೇ ಇವೆ, ನಿಮ್ಮ ದೇಹದ ತೂಕ ಕಳೆದುಕೊಳ್ಳುವ ಆಹಾರಗಳು…

ಮಾರುಕಟ್ಟೆಯಲ್ಲಿ ಸಿಗು ವಂತಹ ತೂಕ ಇಳಿಸಿಕೊಳ್ಳುವ ಮಾತ್ರೆ, ಹುಡಿ ಇತ್ಯಾದಿಗಳನ್ನು ಅಡುಗೆ ಮನೆಯಲ್ಲೇ ಇದೆ ತೂಕ ಕಳೆದು ಕೊಳ್ಳುವ ಆಹಾರಗಳು ಸೇವಿಸಲು ಆರಂಭಿಸುವರು. ಆದರೆ ಇದು ತೂಕ ಇಳಿಸಿದರೂ ಇದರ ಸೇವನೆ ನಿಲ್ಲಿಸಿದ ಕೂಡಲೇ ಮತ್ತೆ ತೂಕ ಹೆಚ್ಚಳವಾಗುವುದು. ಇಂತಹ ಸಮಯದಲ್ಲಿ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಇರುವಂತಹ ಮನೆ ಮದ್ದನ್ನು ಬಳಸಿದರೆ ಅದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡು ವುದು. ತೂಕ ಇಳಿಸಿಕೊಳ್ಳಲು ನೀವು ಬಳಸಬಹುದಾದ ಮನೆಮದ್ದುಗಳನ್ನು ಈ ಲೇಖನದಲ್ಲಿ ನಿಮಗಾಗಿ ನೀಡಿದ್ದೇವೆ. ಇದು ಯಾವುದೆಂದು ತಿಳಿಯಲು ಮುಂದೆ ಓದಿಕೊಳ್ಳಿ….

ತೂಕ ಹೆಚ್ಚಿಸಿಕೊಳ್ಳಲು ಹೆಚ್ಚಿನವರಿಗೆ ಯಾವುದೇ  ಕಷ್ಟವಾಗುವುದಿಲ್ಲ. ಆದರೆ ತೂಕ ಇಳಿಸಿಕೊಳ್ಳುವುದು ಅವರಿಗೆ ದೊಡ್ಡ ಸಮಸ್ಯೆಯಾಗಿರುವುದು. ದೇಹದಲ್ಲಿ ತುಂಬಿರುವ ಬೊಜ್ಜಿನಿಂದ ಯಾವುದೇ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿ ಯಾಗಲು ಅವರಿಗೆ ಮನಸ್ಸಾಗುವುದಿಲ್ಲ. ಇಂತಹ ಸಮಯದಲ್ಲಿ ತೂಕ ಕಡಿಮೆ ಮಾಡ ಬೇಕೆಂದು ಶತಪ್ರಯತ್ನ
ಮಾಡುತ್ತಾರೆ.

ಶುಂಠಿ :

ಶುಂಠಿಯು ಹೊಟ್ಟೆಯಲ್ಲಿ ತುಂಬಿರುವಂತಹ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಕಡಿಮೆ ಮಾಡುವುದು. ಇದರಿಂದ ತೂಕ ಕಳೆದುಕೊಳ್ಳಲು ಸುಲಭವಾಗುವುದು ಮತ್ತು ಹೊಟ್ಟೆಯು ಸಣ್ಣದಾಗಿ ಕಾಣಿಸುವುದು. ಶುಂಠಿ ಸೇವಿಸಿದರೆ ಬೇಗನೆ ತೂಕ ಕಳೆದುಕೊಳ್ಳಬಹುದು.

ಬೆಳ್ಳುಳ್ಳಿ :

ಬೆಳ್ಳುಳ್ಳಿ ಸ್ವಲ್ಪ ಘಾಟು. ಆದರೆ ಹಸಿ ಬೆಳ್ಳುಳ್ಳಿಯ ಕೆಲವು ಎಸಲುಗಳನ್ನು ಸೇವಿಸಿದರೆ ತೂಕ ಇಳಿಸಬಹುದು. ಇದರಲ್ಲಿ ಕ್ಯಾಲರಿ ತುಂಬಾ ಕಡಿಮೆ ಇದೆ.

ದಾಲ್ಚಿನ್ನಿ :

ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿರು ದಾಲ್ಚಿನ್ನಿಯು ತೂಕ ಕಳೆದುಕೊಳ್ಳಲು ತುಂಬಾ ಸಹಕಾರಿ. ಬೆಳಗ್ಗೆ ನಿಮ್ಮ ಕಾಫಿಗೆ ದಾಲ್ಚಿನ್ನಿ ಹುಡಿ ಹಾಕಿದರೆ ಅದರಿಂದ ಸುಲಭವಾಗಿ ತೂಕ ಕಳೆದುಕೊಳ್ಳಬಹುದು.

ಕೆಂಪು ಮೆಣಸು :

ಕೆಂಪು ಮೆಣಸಿನಲ್ಲಿ ಕಡಿಮೆ ಕ್ಯಾಲರಿ ಇದೆ ಮತ್ತು ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಹಸಿವನ್ನು ಕಡಿಮೆ ಮಾಡಬಹುದು ಮತ್ತು ಕ್ಯಾಲರಿ ದಹಿಸಲು ಸಹಕಾರಿ ಎಂದು ಅಧ್ಯಯನಗಳು ಕೂಡ ಕಂಡುಕೊಂಡಿವೆ. ತೂಕ ಕಳೆದು ಕೊಳ್ಳಲು ಇದು ತುಂಬಾ ಪರಿಣಾಮಕಾರಿ ಮನೆಮದ್ದು. ಇದು ಮೂಗುಕಟ್ಟುವಿಕೆಯನ್ನು ನಿವಾರಿಸುವ ನೈಸರ್ಗಿಕ ಔಷಧಿಯಾಗಿದ್ದು, ಇದು ಕೂಡ ನಿಮ್ಮ ಹಸಿವನ್ನು ನಿಯಂತ್ರಣದಲ್ಲಿ ಇಡುವುದು.

ಸಾಸಿವೆ ಕಾಳು :

ಸಾಸಿವೆ ಕಾಳುಗಳಲ್ಲಿ ಸೆಲೇನಿಯಂ ಅಂಶವಿದೆ. ಈ ಖನಿಜಾಂಶವು ದೇಹದಲ್ಲಿ ಥೈರಾಯ್ಡ್ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು. ಇದು ಕೂಡ ತೂಕ ಇಳಿಸಲು ಸಹಕಾರಿ.

ನಿಂಬೆ :

ನಿಂಬೆಯು ಆಹಾರದ ರುಚಿಯನ್ನು ಹೆಚ್ಚಿಸುವುದು ಎನ್ನುವುದರಲ್ಲಿ ಸಂಶಯವಿಲ್ಲ. ಇದರಲ್ಲಿ ಕ್ಯಾಲರಿ ಇಲ್ಲದಿರುವುದು ತೂಕ ಕಳೆದುಕೊಳ್ಳಲು ನಿಮ್ಮ ಆಹಾರ ಕ್ರಮಕ್ಕೆ ಸೇರಿಸಬಹುದು. ಈ ಅದ್ಭುತ ಆಹಾರದಲ್ಲಿ ನಾರಿನಾಂಶ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಇದರಿಂದ ಮಗೆ ಹೊಟ್ಟೆ ತುಂಬಿದಂತೆ ಆಗುವುದು. ಇದು ತೂಕ ಕಳೆದು ಕೊಳ್ಳಲು ಒಳ್ಳೆಯದು.

ಬಾದಾಮಿ :

ಬಾದಾಮಿಯನ್ನು ನಿಯಮಿತವಾಗಿ ಸೇವನೆ ಮಾಡುವವರು ತೂಕ ಕಳೆದುಕೊಳ್ಳುವ ಆಹಾರ ಕ್ರಮ ಪಾಲಿಸಬೇಕಿಲ್ಲವೆಂದು ಅಧ್ಯಯನಗಳು ಹೇಳಿವೆ.

Leave a Reply

Your email address will not be published. Required fields are marked *