ರಾಮನಗರದಲ್ಲಿ ಎರಡು ಜೀವಂತ ಬಾಂಬ್ ಪತ್ತೆ..
ನಿನ್ನೆಯಷ್ಟೇ ಬಂದಿಸಿದ್ದ ಉಗ್ರನ ಮಾಹಿತಿ ಆಧರಿಸಿ ರಾಮನಗರದಲ್ಲಿ ಎರಡು ಜೀವಂತ ಬಾಂಬ್ಗಳನ್ನು ರಾಷ್ಟ್ರೀಯ ತನಿಖಾ ದಳ ವಶಪಡಿಸಿಕೊಂಡಿದೆ.
ಆತನ್ನನ್ನು ಇನ್ನಷ್ಟು ವಿಚಾರಣೆ ಗೆ ಒಳಪಡಿಸಲಾಗಿದ್ದು ಮತ್ತೆ ಹಲವೆಡೆ ಬಾಂಬ್ ಇರುವುದನ್ನು ಆತ ಒಪ್ಪಿಕೊಂಡಿದ್ದಾನೆ .
ಕರ್ನಾಟಕಕ್ಕೆ ಉಗ್ರರ ಜೊತೆ ನಂಟು ಇರುವ ಬಗ್ಗೆ ಆಗಾಗ ಸಾಬೀತಾಗಿದೆ.ಆದರೆ ಈ ಬಾರಿ ಮಸೀದಿ ಒಂದರ ಮೌಲ್ವಿ ಯೆ ಉಗ್ರನಿಗೆ ಸಹಕಾರ ನೀಡಿ ಅಡಗಿಕೊಳ್ಳಲು ಸಹಕರಿಸಿದ್ದಾರೆ.
ದೊಡ್ಡಳ್ಳಾಪುರದ ಮಸೀದಿಯೊಂದರಲ್ಲಿ ಹಬಿಬುಲ್ಲ ರಹಮಾನ್ ಎಂಬ ಉಗ್ರ ಅಡಗಿಕುಳಿರಿರುವ ಬಗ್ಗೆ ಖಚಿತ ಮಾಹಿತಿ ಪಡೆದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾದರು.
2014 ರಲ್ಲಿ ಪಶ್ಚಿಮ ಬಂಗಾಳದ ಮನೆಯೊಂದರಲ್ಲಿ ಬಾಂಬ್ ತಯಾರಿಕೆಯಲ್ಲಿ ಈತನೂ ಇದ್ದ.ಅನೇಕ ಬಾಂಬ್ ಸ್ಫೋಟ ಪ್ರಕರಣದಲ್ಲಿಯೂ ಈತ ಭಾಗಿಯಾಗಿದ್ದ.
2018 ರ ಆಗಸ್ಟ್ ತಿಂಗಳಲ್ಲಿ NIA ಅಧಿಕಾರಿಗಳ ದಾಳಿಯಲ್ಲಿ ಕೌಸರ್ ಎಂಬ ಉಗ್ರರನ್ನು ಬಂಧಿಸಿದ ಸಂಧರ್ಭದಲ್ಲಿ ಈತ ತಪ್ಪಿಸಿಕೊಂಡು ತಲೆ ಮರೆಸಿಕೊಂಡಿದ್ದ.
ಈಗ ಈ ಉಗ್ರನಿಗೆ ಮಸೀದಿಯಲ್ಲಿ ತಲೆಮರೆಸಿ ಕೊಳ್ಳಲು ಸಹಾಯ ಮಾಡುವ ಮೂಲಕ ದೇಶಕ್ಕೆ ದ್ರೋಹ ಮಾಡಿರುವ ಮೌಲ್ವಿ ಅನ್ವರ್ ಹುಸೇನ್ ಎಂಬವನನ್ನು ಬಂಧಿಸಿ ವಿಚರಣೆಗೊಳಪಡಿಸಿದ್ದಾರೆ.
ಉಗ್ರರನ್ನು ನ್ಯಾಯಾಲಯ ಕೆ ಹಾಜರು ಪಡಿಸಲಾಗಿತ್ತು .ನಂತರ ಅಧಿಕಾರಿಗಳು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಕೊಲ್ಕತ್ತಾ ಕೆ ಕರೆದೊಯ್ಯುವ ಸಾಧ್ಯತೆ ಇದೆ.
ಇದೀಗ ಮಸೀದಿ ಹಾಗೂ ಮದರಸ ಗಳನ್ನೂ ದೇಶದ ಜನ ಸಂಶಾಸ್ಪದವಾಗಿ ನೋಡುವಂತಾಗಿದೆ.