ದಾವಣಗೆರೆ ವಿ ವಿ ಎದುರೇ ಯುವತಿ ಅಪಘಾತಕ್ಕೆ ಬಲಿ
ಸ್ಕೂಟರ್ ಚಲಾಯಿಸುವ ಮಹಿಳೆಯರಿಗೆ ಶನಿವಾರ ದಾವಣಗೆರೆ ವಿವಿ ಎದುರೇ ನಡೆದ ಸ್ಕೂಟಿ ಹಾಗೂ ಕಾರ್ ನಡುವೆ ನಡೆದ ಅಪಘಾತ ಎಚ್ಚರಿಕೆ ಗಂಟೆ ಆಗಲಿ.
ಆಕೆ ಕುರ್ಕಿ ಗ್ರಾಮದ 23 ವರ್ಷದ ಯುವತಿ ಶ್ಯಲಜ.ತಮ್ಮ ಗ್ರಾಮದಿಂದ ಮೂರ್ನಾಲ್ಕು ಕಿ.ಮಿ.ದೂರವಿರುವ ದಾವಣಗೆರೆ ವಿಶ್ವ ವಿದ್ಯಾಲಯಕ್ಕೆ ಸ್ಕೂಟಿಯಲ್ಲಿ ಬಂದು ಹೋಗುತ್ತಿದ್ದಳು.ಶನಿವಾರ ಮಧ್ಯಾಹ್ನ ಕಾಲೇಜು ಮುಗಿದಬಳಿಕ ಮುಖ್ಯ ಗೇಟ್ ಮೂಲಕ ಹೊರಬಂದು ತಮ್ಮೂರ ಕಡೆ ಸ್ಕೂಟಿ ತಿರುಗಿಸಿದ್ದಾಳೆ…ಕೇವಲ 30 ಸೆಕೆಂಡ್ಗಳಲ್ಲಿ ಆ ದುರ್ಘಟನೆ ನಡೆದೇ ಹೋಯ್ತು.
ಆಕೆ ಸಾಗುತ್ತಿದ್ದ ಮಾರ್ಗದ ಕಡೆಯೇ ಅತಿ ವೇಗದಿಂದ ಸಾಗಿಬಂದ ಕಾರು ಅಷ್ಟೇ ವೇಗದಲ್ಲೇ ಸ್ಕೂಟಿಗೆ ಢಿಕ್ಕಿ ಹೊಡೆದೆ ಬಿಟ್ಟಿತು.
ಈ ವಿಡಿಯೋ ಗಮನಿಸಿ,.. ವಿದ್ಯಾರ್ಥಿನಿಯದು ತಪ್ಪೇ ಇಲ್ಲ.ಆಕೆ ಸಾವಕಾಶವಾಗಿಯೇ ಹೋಗಿ ಮುಖ್ಯರಸ್ತೆಯ ತನ್ನ ಎಡಭಾಗಕ್ಕೆ ಸಾಗಿದಳು.ವೇಗವಾಗಿ ಬಂದ ಕಾರು ಆಕೆಯ ಪ್ರಾಣಕ್ಕೆ ಕುತ್ತು ತಂತು.
ಬೀರೂರು ಸಮ್ಮತಗಿ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು ಈಗ ಸುಸಜ್ಜಿತ ರಸ್ತೆಯಾಗಿದೆ.ಹಾಗಾಗಿ ವಾಹನಗಳು ಮಿತಿಮೀರಿದ ವೇಗದಲ್ಲಿ ಸಾಗುತ್ತವೆ.ಆಗಾಗ ಸಣ್ಣ ಪುಟ್ಟ ಘಟನೆಗಳು ನಡೆದೇಇವೆ.ಆದರೆ ಶನಿವಾರ ಮಾತ್ರ ಶ್ಯಲಜ ಪಾಲಿಗೆ ಕಡೆಯದಿನವಾಯ್ತು.
ಅಪಘಾತ ಸಂಭವಿಸಿದ ತಕ್ಷಣವೇ ವಿದ್ಯಾರ್ಥಿಗಳು ಧಾವಿಸಿಬಂದು ಆಸ್ಪತ್ರೆಗೆ ಸಾಗಿಸಲು ಮುಂದಾದರು ಪ್ರಯೋಜನ ಆಗಲಿಲ್ಲ.
ವಿವಿ ಮುಂದೆ ಯಾವುದೇ ಸೂಚನಾ ಫಲಕ ಇಲ್ಲದಿರುವುದು,ಹಾಕಬಾರದ ಕಡೆ ರಸ್ತೆ ತಡೆ ನಿರ್ಮಿಸುವ ಇಲಾಖೆಯವರು ಅತ್ಯಗತ್ಯವಾಗಿ ಕಾಲೇಜುಗಳ ಮುಂದೆ,ಅದರಲ್ಲೂ ವಿವಿ ಮುಂದಿನ ರಸ್ತೆಯಲ್ಲಿ ಹಂಪ್ಸ್ ಇಲ್ಲದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಕೇವಲ ಗೆಸ್ಟ್ ಹೌಸ್ ಕಟ್ಟಿಸುವುದು,ವಿವಿ ಯಲ್ಲಿ ಅಗತ್ಯ ಇಲ್ಲದ ಕಾಮಗಾರಿ ಮಾಡಿಸಿ ದುಡ್ಡು ಹೊಡಿಯುವುದರಲ್ಲೇ ಮುಳುಗಿರುವ ವಿವಿ ಮುಖ್ಯಸ್ಥರು ಇತ್ತ ಗಮನ ಹರಿಸಿ ಎಂಬುದು ವಿದ್ಯಾರ್ಥಿಗಳ ಆಗ್ರಹ.
ಒಮ್ಮೆ ಸಾವಧಾನವಾಗಿ ವಿಡಿಯೋ ಗಮನಿಸಿ.. ಇಂಥ ತಪ್ಪುಗಳು ಮತ್ತೆ ಆಗದಂತೆ ನಿಮ್ಮ ಬಂಧು ಮಿತ್ರರಿಗೆ share ಮಾಡಿ.